Advertisement

SC: ಬೆಂಕಿಯ ಜತೆಗೆ ಆಟವಾಡುತ್ತಿದ್ದೀರಿ-ಪಂಜಾಬ್‌,ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ತಪರಾಕಿ

09:25 PM Nov 10, 2023 | Team Udayavani |

ನವದೆಹಲಿ: ವಿಧಾನಸಭೆಯಲ್ಲಿ ಅಂಗೀಕಾರಗೊಂಡ ವಿಧೇಯಕಗಳ ಕಡತಗಳಿಗೆ ಬಹುಕಾಲದಿಂದ ಸಹಿ ಹಾಕದೇ ವಿಳಂಬ ಮಾಡುತ್ತಿರುವ ತಮಿಳುನಾಡು, ಪಂಜಾಬ್‌ ರಾಜ್ಯಪಾಲರನ್ನು ಗುರುವಾರ ಸುಪ್ರೀಂಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. “ನೀವು ಬೆಂಕಿಯ ಜತೆಗೆ ಆಟವಾಡುತ್ತಿದ್ದೀರಿ. ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಅಂಗೀಕರಿಸಿದ ವಿಧೇಯಕಗಳಿಗೆ ಅಂಕಿತ ಹಾಕಿ. ದೀರ್ಘ‌ ಕಾಲದಿಂದ ವಿಧೇಯಕಗಳಿಗೆ ಅನುಮೋದನೆ ನೀಡದೇ ಇರುವ ಬೆಳವಣಿಗೆ ಗಂಭೀರ ಹಾಗೂ ಕಳವಳಕಾರಿಯಾದದ್ದು’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

Advertisement

“ಪಂಜಾಬ್‌ನಲ್ಲಿ ಏನಾಗುತ್ತಿದೆ. ಸಂಸದೀಯ ಪ್ರಜಾಸತ್ತೆ ವ್ಯವಸ್ಥೆಯಲ್ಲಿ ಮುಂದುವರಿಯಬೇಕು ಎಂದು ತಿಳಿದುಕೊಂಡಿದ್ದೀರಾ?’ ಎಂದು ನ್ಯಾಯಪೀಠ ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ರನ್ನು ತರಾಟೆಗೆ ತೆಗೆದುಕೊಂಡಿದೆ.

ಇನ್ನು ತಮಿಳುನಾಡು ರಾಜ್ಯಪಾಲ ಆರ್‌.ಎನ್‌.ರವಿ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ “ವಿಧಾನಸಭೆಯಲ್ಲಿ ಅಂಗೀಕಾರಗೊಂಡ 12 ವಿಧೇಯಕಗಳಿಗೆ ಸಹಿ ಹಾಕದೇ ಇರುವ ವಿಚಾರ ಕಳವಳಕಾರಿಯಾದದ್ದು. ಇದರಿಂದಾಗಿ ಜನರ ಅನುಕೂಲಕ್ಕೆ ಬೇಕಾಗುವ ಹಲವು ಕೆಲಸಗಳು ತಡೆಹಿಡಿದಂತೆ ಆಗುತ್ತದೆ’ ಎಂದು ನ್ಯಾಯಪೀಠ ಆಕ್ಷೇಪಿಸಿತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಕೂಡ ನ್ಯಾಯಪೀಠ ನೋಟಿಸ್‌ ನೀಡಿತು.

 

Advertisement

Udayavani is now on Telegram. Click here to join our channel and stay updated with the latest news.

Next