ಅವರು ಕುಂಬಳಗೋಡಿನ ಆದಿಚುಂಚನಗಿರಿಯ ಶಾಖಾ ಮಠದ ಕಾಲೇಜು ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದರು.
Advertisement
ಭಾನುವಾರ ಬೆಳಗ್ಗೆ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಾಥಪಂಥ ಸೇರಿ ವಿವಿಧ ವಿಷಯದ ಬಗ್ಗೆ ಸಮಾಲೋಚನೆ ನಡೆಸಿದರು. ಈ ವೇಳೆ ಬಿಜೆಪಿ ನಾಯಕರು ಇರಲಿಲ್ಲ. ಪರಿವರ್ತನಾ ಸಮಾವೇಶಕ್ಕೂ ಪೂರ್ವದಲ್ಲಿ ಇಬ್ಬರು ಯತಿಗಳು ಅಲ್ಲಿಯೇ ಪೂಜೆ ಸಲ್ಲಿಸಿದರು. ನಂತರ ಯೋಗಿ ಆದಿತ್ಯನಾಥ್ ಅವರು ಅಲ್ಲಿಂದ ನೇರವಾಗಿ ಸಮಾವೇಶದ ಸ್ಥಳಕ್ಕೆ ಆಗಮಿಸಿದರು. ಸಮಾವೇಶ ಮುಗಿಸಿ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಊಟ ಮುಗಿಸಿದರು. ಈ ವೇಳೆ ಬಿಜೆಪಿ ಮುಖಂಡ ಆರ್.ಅಶೋಕ್ ಮತ್ತು ಕೆಲ ನಾಯಕರು ಜತೆಗಿದ್ದರು ಎನ್ನಲಾಗಿದೆ.