Advertisement

Twitter ನಲ್ಲಿ 25 ಮಿಲಿಯನ್ ಫಾಲೋವರ್ಸ್: ಹೊಸ ದಾಖಲೆ ಬರೆದ ಯೋಗಿ ಆದಿತ್ಯನಾಥ್

04:17 PM Jun 14, 2023 | keerthan |

ಲಕ್ನೋ: ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜನಪ್ರಿಯತೆ ಹೊಂದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇದೀಗ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಅವರು 25 ಮಿಲಿಯನ್ ಹಿಂಬಾಲಕರನ್ನು ಪಡೆದಿದ್ದಾರೆ.

Advertisement

ಸಾಮಾಜಿಕ ಮಾಧ್ಯಮದಲ್ಲಿ ಅನುಸರಿಸುವವರ ವಿಷಯದಲ್ಲಿ ಹಲವಾರು ನಾಯಕರು ಮತ್ತು ಸೆಲೆಬ್ರಿಟಿಗಳು ಇನ್ನೂ ಈ ಮಾರ್ಕ್ (25 ಮಿ) ಅನ್ನು ತಲುಪಿಲ್ಲ.

ಪ್ರಮುಖವಾಗಿ, ಟ್ವಿಟರ್‌ ನಲ್ಲಿ ಈ ಸಂಖ್ಯೆಯನ್ನು ದಾಟಿದ ಮೊದಲ ಮುಖ್ಯಮಂತ್ರಿ ಕೂಡ ಸಿಎಂ ಯೋಗಿ ಆದಿತ್ಯನಾಥ್ ಅವರು. ಎಂಟು ವರ್ಷಗಳ ಅವಧಿಯಲ್ಲಿ ಯೋಗಿ ಈ ಸಾಧನೆ ಮಾಡಿದ್ದಾರೆ.

ಅವರು ಸೆಪ್ಟೆಂಬರ್ 2015 ರಲ್ಲಿ ಟ್ವಿಟರ್‌ ನಲ್ಲಿ ತಮ್ಮ ಅಧಿಕೃತ ಹ್ಯಾಂಡಲ್ ಅನ್ನು ಪ್ರಾರಂಭಿಸಿದ್ದರು. 2017 ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಅವರು ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ವ್ಯಾಪಕ ಸುಧಾರಣೆಗಳನ್ನು ತೋರಿಸಿದ ರೀತಿಯಲ್ಲಿ, ಅವರ ಜನಪ್ರಿಯತೆಯು ಗುಣಾತ್ಮಕ ಹೆಚ್ಚಳವನ್ನು ಕಂಡಿದೆ.

ಇದನ್ನೂ ಓದಿ:9 years of Modi; ರೆಡ್ ಟೇಪ್‌ನಿಂದ ರೆಡ್ ಕಾರ್ಪೆಟ್‌ಗೆ ಪ್ರಯಾಣ ಬೆಳೆಸಿದ ಭಾರತ: ಶಾ

Advertisement

ಟ್ವಿಟರ್‌ ನಲ್ಲಿ 25 ಮಿಲಿಯನ್ ಅನುಯಾಯಿಗಳೊಂದಿಗೆ, ಯೋಗಿ ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂತಹ ಹಿರಿಯ ನಾಯಕರನ್ನು ಒಳಗೊಂಡಿರುವ ಕ್ಲಬ್‌ ನ ಭಾಗವಾಗಿದ್ದಾರೆ.

89.2 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ಅತಿ ಹೆಚ್ಚು ಅನುಸರಿಸುವ ಭಾರತೀಯ ರಾಜಕಾರಣಿಯಾಗಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ನಂತರ ಪಿಎಂ ಮೋದಿ ವಿಶ್ವದ ಎರಡನೇ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ರಾಜಕಾರಣಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next