Advertisement

Karnataka election ನಾವು ಇನ್ನೊಂದು ವಿಭಜನೆಗೆ ಸಿದ್ಧರಿಲ್ಲ: ಮಂಡ್ಯದಲ್ಲಿ ಯೋಗಿ

02:52 PM Apr 26, 2023 | Team Udayavani |

ಮಂಡ್ಯ : ಭಾರತವನ್ನು 1947 ರಲ್ಲಿ ಧಾರ್ಮಿಕ ಆಧಾರದ ಮೇಲೆ ವಿಭಜಿಸಲಾಯಿತು. ದೇಶವು ಧರ್ಮ ಆಧಾರಿತ ಮೀಸಲಾತಿಯನ್ನು ಅನುಮೋದಿಸಲು ಸಾಧ್ಯವಿಲ್ಲ ಮತ್ತು ನಾವು ಇನ್ನೊಂದು ವಿಭಜನೆಗೆ ಸಿದ್ಧರಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುಡುಗಿದ್ದಾರೆ.

Advertisement

ಮಂಡ್ಯದಲ್ಲಿ ಬುಧವಾರ ರಾಜ್ಯದ ತಮ್ಮ ಮೊದಲ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ ಯೋಗಿ ಧರ್ಮಾಧಾರಿತ ಮೀಸಲಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದರು.

”ಉತ್ತರ ಪ್ರದೇಶ ಮತ್ತು ಕರ್ನಾಟಕದ ಸಂಬಂಧ ಇಂದು ನಿನ್ನೆಯದಲ್ಲ, ತ್ರೇತಾಯುಗದಿಂದ ಇದೆ. ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನ ವನವಾಸದ ಅತ್ಯಂತ ಅವಿಭಾಜ್ಯ ಸಹಾಯಕ ಹನುಮಂತ ಕರ್ನಾಟಕದ  ನೆಲದಲ್ಲಿ ಜನಿಸಿದ್ದ” ಎಂದರು.

ಬಲವಾದ “ಡಬಲ್ ಇಂಜಿನ್ ಸರ್ಕಾರ” ದಿಂದಾಗಿ ಉತ್ತರ ಪ್ರದೇಶದಲ್ಲಿ ಕಳೆದ ಆರು ವರ್ಷಗಳಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ.ಪಿಎಫ್‌ಐ ಅನ್ನು ಸಮಾಧಾನಪಡಿಸುತ್ತದೆ ಮತ್ತು ಧರ್ಮಾಧಾರಿತ ಮೀಸಲಾತಿಯನ್ನು ನೀಡುತ್ತದೆ, ಇದು ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿದೆ. ಕೇಂದ್ರ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಗಳು ಪಿಎಫ್‌ಐ ಅನ್ನು ನಿಷೇಧಿಸಿವೆ ಮತ್ತು ಇಸ್ಲಾಮಿಸ್ಟ್ ಸಂಘಟನೆಯ ಬೆನ್ನು ಮುರಿದಿದೆ

ಇತರ ಹಿಂದುಳಿದ ವರ್ಗಗಳ 2ಬಿ ವರ್ಗದಡಿಯಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿಯನ್ನು ಉಲ್ಲೇಖಿಸಿ, 2ಬಿ ಅನ್ನು ಸರಕಾರವು ನಾಲ್ಕು ಶೇಕಡಾ ಮೀಸಲಾತಿಯನ್ನು ಎರಡು ಸಮಾನ ಭಾಗಗಳಾಗಿ ವಿಭಜಿಸಿತು. ರಾಜ್ಯದ ಎರಡು ಪ್ರಬಲ ಸಮುದಾಯಗಳಾದ 2ಸಿ ಯಲ್ಲಿ ಒಕ್ಕಲಿಗರು ಮತ್ತು 2ಡಿ ವರ್ಗದಲ್ಲಿ ಲಿಂಗಾಯತರಿಗೆ ತಲಾ ಎರಡು ಶೇಕಡಾ ಕೋಟಾವನ್ನು ಹೆಚ್ಚಿಸಿತು ಎಂದರು.

Advertisement

ಉತ್ತರ ಪ್ರದೇಶದ ಅಭಿವೃದ್ಧಿ ಮತ್ತು ಪ್ರಗತಿಯನ್ನು ಉಲ್ಲೇಖಿಸಿ ‘ಡಬಲ್ ಇಂಜಿನ್’ ಸರಕಾರ ಒಂದು ಕೇಂದ್ರದಲ್ಲಿ ಮತ್ತು ಇನ್ನೊಂದು ತನ್ನ ತವರು ರಾಜ್ಯದಲ್ಲಿ ತನ್ನ ಶಕ್ತಿಯನ್ನು ಸಾಧ್ಯವಾದಷ್ಟು ಪ್ರಬಲವಾಗಿ ತೋರಿಸಿದೆ. ಉತ್ತರ ಪ್ರದೇಶದಲ್ಲಿ ಭದ್ರತೆ ಮತ್ತು ಸಮೃದ್ಧಿಯ ಭರವಸೆ ಇದೆ.ಕರ್ಫ್ಯೂ ಇಲ್ಲ ಮತ್ತು ಗಲಭೆಯೂ ಇಲ್ಲ. ಅಲ್ಲಿ ಎಲ್ಲವೂ ಚೆನ್ನಾಗಿದೆ. ಕಳೆದ ಆರು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಯಾವುದೇ ಗಲಭೆ ನಡೆದಿಲ್ಲ ಎಂದರು.

ಬಿಜೆಪಿ ನಂಬಿರುವ ‘ಏಕ್ ಭಾರತ್, ಶ್ರೇಷ್ಠ ಭಾರತ’ ಪರಿಕಲ್ಪನೆಯು ಭಾರತವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ ನಾವು ಸಮಾಧಾನಗೊಳಿಸುವುದರಲ್ಲಿ ನಂಬುವುದಿಲ್ಲ, ಆದರೆ ಸಬಲೀಕರಣದಲ್ಲಿ ನಂಬಿಕೆಯಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next