Advertisement

ಇಂದು ಬಂಟ್ವಾಳಕ್ಕೆ ಯೋಗಿ: ಬಿಗಿ ಪೊಲೀಸ್‌ ಬಂದೋಬಸ್ತ್

08:15 PM May 05, 2023 | Team Udayavani |

ಬಂಟ್ವಾಳ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಬಿಜೆಪಿ ಅಭ್ಯರ್ಥಿ ರಾಜೇಶ್‌ ನಾೖಕ್‌ ಅವರ ಪರ ಪ್ರಚಾರಕ್ಕಾಗಿ ಮೇ 4ರಂದು ಬಂಟ್ವಾಳಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಬಂಟ್ವಾಳ- ಬಿ.ಸಿ. ರೋಡಿನಾದ್ಯಂತ ಬಿಗಿ ಪೊಲೀಸ್‌ ಬಂದೋ ಬಸ್ತ್ ಕೈಗೊಳ್ಳಲಾಗಿದ್ದು, ಬಸ್ತಿಪಡು³ ಹೆಲಿ ಪ್ಯಾಡ್‌ನಿಂದ ರಸ್ತೆ ಮಾರ್ಗದಲ್ಲಿ ಭದ್ರತಾ ವಾಹನಗಳೊಂದಿಗೆ ಸಾಗುವ ಕುರಿತು ಶುಕ್ರವಾರ ಸಂಜೆ ರಿಹರ್ಸಲ್‌ ನಡೆಸಲಾಯಿತು.

Advertisement

ಯೋಗಿ ಅವರು ಸಂಜೆ 4ರ ಸುಮಾರಿಗೆ ಹೊನ್ನಾವರ ಹೆಲಿಪ್ಯಾಡ್‌ನಿಂದ ಹೊರಟು 4.40ಕ್ಕೆ ಬಂಟ್ವಾಳ ಬಸ್ತಿಪಡು³ ಹೆಲಿಪ್ಯಾಡ್‌ಗೆ ಆಗಮಿಸುವರು.

ಬಳಿಕ ಝಿರೊ ಟ್ರಾಫಿಕ್‌ನಲ್ಲಿ ಬಿ.ಸಿ.ರೋಡಿನ ಕೈಕಂಬಕ್ಕೆ ತೆರಳುವ ಯೋಗಿಯವರು ಅಲ್ಲಿಂದ ತೆರೆದ ವಾಹನದಲ್ಲಿ ರೋಡ್‌ ಶೋ ಮೂಲಕ ಖಾಸಗಿ ಬಸ್ಸು ನಿಲ್ದಾಣದ ಬಳಿಗೆ ಬಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವರು.

ಸದ್ಯದ ಅವರ ಕಾರ್ಯಕ್ರಮದ ಪ್ರಕಾರ ಇಲ್ಲಿನ ಕಾರ್ಯಕ್ರಮ ಮುಗಿಸಿ 5.40 ರ ಸುಮಾರಿಗೆ ಹೆಲಿಪ್ಯಾಡ್‌ ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಲಕ್ನೋಗೆ ವಾಪಸಾಗುವರು. ಒಂದುವೇಳೆ ಕಾರ್ಯಕ್ರಮ ಮುಗಿಯುವುದು ತೀರಾ ತಡವಾದರೆ ವಾಪಸು ತೆರಳುವುದಕ್ಕೆ ಸಂಬಂಧಿಸಿ ಕೆಲವು ಬದಲಾವಣೆ ಆಗುವ ಸಾಧ್ಯತೆಯೂ ಇದೆ.

ರಿಹರ್ಸಲ್‌
ಬಸ್ತಿಪಡ್ಪು ಮೈದಾನದಲ್ಲಿ ಶುಕ್ರವಾರ ಸಂಜೆ ಹಿರಿಯ ಪೊಲೀಸ್‌ ಅಧಿಕಾರಿಗಳ ಸಮ್ಮುಖ ದಲ್ಲಿ ಬಂಟ್ವಾಳ ಪುರಸಭಾ ಹಿರಿಯ ಸದಸ್ಯ ಎ.ಗೋವಿಂದ ಪ್ರಭುಗಳ ನೇತೃತ್ವದಲ್ಲಿ ಹೆಲಿ ಪ್ಯಾಡ್‌ ನಿರ್ಮಾಣದ ಕಾರ್ಯ ನಡೆಯಿತು.

Advertisement

ಬಳಿಕ ಸಂಜೆ ಸುಮಾರು 20 ಅಧಿಕ ಭದ್ರತಾ ವಾಹನಗಳು ಬಿ.ಸಿ.ರೋಡಿನಿಂದ ಮಂಗಳೂರು ವಿಮಾನ ನಿಲ್ದಾಣದವರೆಗೂ ರಿಹರ್ಸಲ್‌ ನಡೆಸಿದವು. ಈ ಸಂದರ್ಭ ಬಿ.ಸಿ.ರೋಡಿನಲ್ಲಿ ಕೊಂಚ ಮಟ್ಟಿನ ಟ್ರಾಫಿಕ್‌ ಜಾಮ್‌ ಕೂಡ ಉಂಟಾಗಿತ್ತು. ಸ್ಥಳೀಯ ಪೊಲೀಸರು ಸಂಚಾರ ದಟ್ಟನೆಯನ್ನು ನಿಯಂತ್ರಿಸಿದರು.

ಯೋಗಿ ಆಗಮನದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಭದ್ರತೆ ಕೈಗೊಳ್ಳಲಾಗಿದ್ದು, ಎಸ್‌ಪಿಜಿ ಕಮಾಂಡೋಗಳ ಜತೆಗೆ ಉತ್ತರಪ್ರದೇಶದ ಪೊಲೀಸರೂ ಆಗಮಿಸಿ ಬಿ.ಸಿ.ರೋಡಿನಲ್ಲೇ ಬೀಡು ಬಿಟ್ಟಿದ್ದಾರೆ. ಜತೆಗೆ ಸ್ಥಳೀಯ ಪೊಲೀಸರು, ಸಿಆರ್‌ಪಿಎಫ್‌ ಪಡೆಗಳು ಭದ್ರತೆಯನ್ನು ನಿರ್ವಹಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next