ಲಕ್ನೋ: ಕಾಶಿ ವಿಶ್ವನಾಥ ಮಂದಿರಕ್ಕೆ ಆಗಾಗ ಭೇಟಿ ನೀಡುತ್ತಲೇ ಇರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಶನಿವಾರವೂ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಅಲ್ಲಿಗೆ ಕಳೆದ 6 ವರ್ಷದಲ್ಲಿ ವಿಶ್ವನಾಥ ಮಂದಿರಕ್ಕೆ 100ನೇ ಬಾರಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಇಂತಹದ್ದೊಂದು ವಿಶಿಷ್ಟ ಸಾಧನೆ ಮಾಡಿದ ಉತ್ತರಪ್ರದೇಶದ ಮೊದಲ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
2 ದಿನಗಳ ವಾರಾಣಸಿ ಪ್ರವಾಸದಲ್ಲಿರುವ ಯೋಗಿ, 113ನೇ ಬಾರಿಗೆ ವಾರಾಣಸಿಗೆ ಭೇಟಿ ನೀಡಿದಂತಾಗಿದೆ. 2017ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾದ ಬಳಿಕ ಕನಿಷ್ಠ 21 ದಿನಕ್ಕೆ ಒಮ್ಮೆಯಾದರೂ, ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಬರೀ ವಾರಾಣಸಿಯನ್ನೇ ತೆಗೆದುಕೊಂಡರೆ, ಕಳೆದ ಸೆಪ್ಟೆಂಬರ್ 9ನೇ ತಾರೀಖೀನಂದೇ 100ನೇ ಬಾರಿ ಆ ನೆಲಕ್ಕೆ ಭೇಟಿ ನೀಡಿದ್ದಾರೆ.
Related Articles