Advertisement

“ಭಗವಂತನ ಸೇವೆಯಿಂದ ಯೋಗ- ಕ್ಷೇಮ ಪ್ರಾಪ್ತಿ’

12:10 PM Jan 06, 2018 | Team Udayavani |

ಕುಂದಾಪುರ: ಯೋಗ ಮತ್ತು ಕ್ಷೇಮ ನಮಗೆ ಎರಡು ಕಣ್ಣುಗಳಿದ್ದಂತೆ. ಯೋಗ ಕ್ಷೇಮ ಎರಡೂ ನಮಗೆ ದೊರೆತರೆ ನಮ್ಮ ಜೀವನ ಸಾರ್ಥಕ. ವಿದ್ಯಾರ್ಥಿಗಳಲ್ಲಿ ನೀತಿ, ನಿಯಮದ ಜತೆಗೆ ಆರೋಗ್ಯ ಕೂಡ ಉತ್ತಮವಾಗಬೇಕು ಎಂದು  2018ನೇ ಉಡುಪಿ ಶ್ರೀ ಕೃಷ್ಣಮಠದ ಪಯಾಯ ಪೀಠವನ್ನಲಂಕರಿಸಲಿರುವ  ಶ್ರೀ ಪಲಿಮಾರು ಮಠಾಧೀಶ ಶ್ರೀಮತ್‌ ವಿದ್ಯಾಧೀಶ  ತೀರ್ಥ ಸ್ವಾಮೀಜಿ  ಅವರು ನುಡಿದರು.

Advertisement

ಪರ್ಯಾಯ ಪೂರ್ವ ಸಂಚಾರ ಪ್ರಯುಕ್ತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಭೇಟಿ ನೀಡಿದ ಅವರು ಆಶೀರ್ವಚನ ನೀಡಿ ಮಾತನಾಡಿದರು. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿ.ಪ್ರಾ. ಶಾಲೆಯು ನೂತನ ಕಟ್ಟಡ ನಿರ್ಮಾಣದೊಂದಿಗೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಂಡಿದೆ. ಅಲ್ಲದೆ ವಿದ್ಯಾರ್ಥಿಗಳ ಅಂಕಗಳ ಮೌಲ್ಯ ಕೂಡ ಬೆಳೆದಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ಜಿಎಸ್‌ವಿಎಸ್‌ ಅಸೋಸಿಯೇಶನ್‌ ಕಾರ್ಯದರ್ಶಿ ಎಚ್‌. ಗಣೇಶ ಕಾಮತ್‌, ಸದಸ್ಯರಾದ ಜಿ. ವೆಂಕಟೇಶ ನಾಯಕ್‌, ಎಂ. ವಿನೋದ ಪೈ, ಕೆ. ರಾಮನಾಥ ನಾಯಕ್‌, ಎನ್‌. ಅಶ್ವಿ‌ನ್‌ ನಾಯಕ್‌, ಶಿಕ್ಷಕ-ರಕ್ಷಕ ಸಮಿತಿ ಕಾರ್ಯದರ್ಶಿ ಬಿ. ಪ್ರಕಾಶ ಶೆಣೈ, ಉಡುಪಿ ಜಿಲ್ಲಾ  ಶ್ರೀಕೃಷ್ಣ ಪ್ರಸಾದ ಚಿಣ್ಣರ ಸಂತರ್ಪಣೆಯ ಶಾಲೆಗಳ ಒಕ್ಕೂಟದ ಅಧ್ಯಕ್ಷ ಅಶೋಕ ಮಾಡ, ಉಡುಪಿ ಜಿಲ್ಲಾ ಪ್ರಾ. ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ವಿ.ಬಾಲಚಂದ್ರ ಶೆಟ್ಟಿ, ಮುಖ್ಯ ಶಿಕ್ಷಕಿ ಸುಮನಾ ಪಡಿಯಾರ್‌, ನಿವೃತ್ತ ಅಕ್ಷರ ದಾಸೋಹ ಅಧಿ ಕಾರಿ ವಸಂತ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಕೊಕ್ಕರ್ಣೆ, ಶ್ರೀಕೃಷ್ಣ ಪ್ರಸಾದ ಚಿಣ್ಣರ ಸಂತರ್ಪಣೆಯ ಉಸ್ತುವಾರಿ ಶ್ರೀನಿವಾಸ ರಾವ್‌, ಮಂಜುನಾಥ ಖಾರ್ವಿ, ರವೀಂದ್ರ ಪಟೇಲ್‌ ಉಪಸ್ಥಿತರಿದ್ದರು.

ಜಿಎಸ್‌ವಿಎಸ್‌ ಅಸೋಸಿಯೇಶನ್‌ ಅಧ್ಯಕ್ಷ ಡಾ| ಕಾಶೀನಾಥ ಪೈ ಸ್ವಾಗತಿಸಿದರು. ಶಾಲೆಯ ಸಂಚಾಲಕ ಎನ್‌. ಸದಾಶಿವ ನಾಯಕ್‌ ಪ್ರಸ್ತಾವಿಸಿದರು. ಸಹಶಿಕ್ಷಕ ನಾಗರಾಜ ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next