Advertisement

ಯೋಗ ಗುರುಗಳಿಂದ ಯೋಗದ ತರಬೇತಿ

05:26 PM Jun 22, 2018 | Team Udayavani |

ಇಳಕಲ್ಲ: ನಿತ್ಯ ಯೋಗ ಮಾಡುವುದರಿಂದ ಸದೃಢ ದೇಹ ಹಾಗೂ ಮನಸ್ಸು ಸಿಗುತ್ತದೆ ಎಂದು ಯೋಗ ಗುರು ಗಿರೀಶ ಲದ್ವಾ ಹೇಳಿದರು. ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ಜಗದ್ಗುರು ಗಂಗಾಧರ ಮೂರುಸಾವಿರಮಠ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಯಲ್ಲಿ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.

Advertisement

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಚೇರಮನ್‌ ರಾಜಶೇಖರ ಸೂಡಿ ಮಾತನಾಡಿ, ಆರೋಗ್ಯವಂತ ದೇಹವಿರಲು ಯೋಗ ಅವಶ್ಯಕ ಎಂದು ತಿಳಿಸಿದರು. ಪ್ರಾಸ್ತಾವಿಕವಾಗಿ ಸಂಸ್ಥೆಯ ಪ್ರಾಚಾರ್ಯ ಕೆ.ಎನ್‌.ಮಧುರಕರ್‌ ಮಾತನಾಡಿದರು. ತರಬೇತಿ ಅಧಿಕಾರಿಗಳಾದ ಮಂಜುನಾಥ ಬೆಳವಣಕಿ, ಸಿಬ್ಬಂದಿ ಉಪಸ್ಥಿತರಿದ್ದರು. ಎಂ.ಬಿ. ವಂದಕುದರಿ ಪ್ರಾರ್ಥಿಸಿದರು. ಎನ್‌ ಎಸ್‌.ಎಸ್‌. ಅ ಧಿಕಾರಿ ಮಹಾಂತೇಶ ಕಂದಕೂರ ಸ್ವಾಗತಿಸಿದರು. ರವಿಕುಮಾರ ಕಾಚಟ್ಟಿಯವರ್‌ ವಂದಿಸಿದರು. ಪ್ರಕಾಶ ಸಾರವಾಡ ನಿರೂಪಿಸಿದರು.

„ಇಳಕಲ್ಲ: ಇಲ್ಲಿಯ ಶ್ರೀ ಹಡಪದ ಅಪ್ಪಣ್ಣನವರ ಸಮುದಾಯ ಭವನದಲ್ಲಿ ನಗರಸಭೆಯ ಡೇ-ನಲ್ಮ್ ಯೋಜನೆಯಡಿಯಲ್ಲಿ ಯೋಗ ದಿನ ಆಚರಿಸಲಾಯಿತು. ನಗರಸಭೆ ಅಧ್ಯಕ್ಷೆ ಖುರ್ಶಿದಬೇಗಂ ಗದ್ವಾಲ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಯೋಗದಿಂದಾಗುವ ಅನುಕೂಲಗಳ ಬಗ್ಗೆ ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ತಿಳಿಸಿದರು.

ಯೋಗ ಗುರು ಗೀರಿಶ ಲದ್ವಾ ಯೋಗದ ಬಗ್ಗೆ ಮಾಹಿತಿಯನ್ನು ಮಹಿಳಾ ಸದಸ್ಯರಿಗೆ ನೀಡಿದರು. ನಗರಸಭೆ ಸದಸ್ಯೆ ಅನ್ನಪೂರ್ಣಾ ನಾಗಲೀಕ, ಕಿತ್ತೂರ ರಾಣಿ ಚನ್ನಮ್ಮ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಿವಲೀಲಾ ಮುಧೋಳ ಇದ್ದರು. ಬಡೇಸಾಬ್‌ ಎಫ್‌.ಎಚ್‌. ವಂದಿಸಿದರು. ಸುರೇಶ ಹುಲಿಮನಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next