ಧಾರವಾಡ: ಮನಸ್ಸು ಮತ್ತು ಶರೀರದ ಸಂಪೂರ್ಣ ಶಕ್ತಿಯನ್ನು ಜಾಗೃತಗೊಳಿಸುವ ಸಾಧನೆಯೇ ಯೋಗ. ಪ್ರತಿಯೊಬ್ಬರು ಯೋಗಾಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಬೇಕು ಎಂದು ಹೃದಯ ರೋಗ ತಜ್ಞ ಡಾ| ಅನಿಲ್ ಹನಮಂತಗೌಡ ಹೇಳಿದರು.
ಶಂಕರ ಬಸವರೆಡ್ಡಿ ಮಾತನಾಡಿ, ಈ ವಾರ್ಡ್‌ನ ಪ್ರತಿಯೊಂದು ಬಡಾವಣೆಗಳಲ್ಲಿ ಯೋಗ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ. ಇದಕ್ಕೆ ನಾಗರಿಕರು ಪ್ರೋತ್ಸಾಹ ನೀಡಬೇಕು ಎಂದರು.
ಸಾಧನಕೇರಿ ಪತಂಜಲಿ ಯೋಗ ಸಮಿತಿ ಕೇಂದ್ರದ ಮುಖ್ಯಸ್ಥ ಹಣಮಂತರಾವ್ ಟಕ್ಕಳಕಿ ಮಾತನಾಡಿದರು. ಡಾ|ಅನಿಲ್ ಹನಮಂತಗೌಡ, ಹಣಮಂತರಾವ್ ಟಕ್ಕಳಕಿ ಹಾಗೂ ಡಾ|ಗುರು ಚಿದಂಬರ ಅವರನ್ನು ಸನ್ಮಾನಿಸಲಾಯಿತು. ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ| ಕೆ.ಜಿ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಕಡೆಕರ್ ಸ್ವಾಗತಿಸಿದರು. ಎಂ.ಡಿ. ಪಾಟೀಲ ಪರಿಚಯಿಸಿದರು. ಕಾಶೀನಾಥ ಹಂದ್ರಾಳ ನಿರೂಪಿಸಿ, ವಂದಿಸಿದರು.
Advertisement
ಸಾಧನಕೇರಿ ದ.ರಾ. ಬೇಂದ್ರೆ ಉದ್ಯಾನವನದಲ್ಲಿ ಸಾಧನಕೇರಿ ಪತಂಜಲಿ ಯೋಗ ಸಮಿತಿ ಆಯೋಜಿಸಿದ್ದ ಯೋಗ ಶಿಬಿರದ 84ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಆಧ್ಯಾತ್ಮಿಕ, ವೇದಾಂತ, ಆತ್ಮಜ್ಞಾನವನ್ನು ತಿಳಿಯ ಬೇಕು. ಆಧ್ಯಾತ್ಮಕ ವಿಜ್ಞಾನಕ್ಕೆ ನಾವು ಯೋಗ ಎಂದು ಕರೆಯುತ್ತೇವೆ. ಪತಂಜಲಿ ಯೋಗ ಅಷ್ಠಾಂಗ ಸೂತ್ರಗಳಿಂದ ಕೂಡಿದೆ. ಯೋಗ ಶಾಂತ ಮನಸ್ಸಿನಿಂದ ಮಾಡಬೇಕು. ಮನುಷ್ಯ ತನ್ನ ವಿಚಾರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಾಣಾಯಾಮ ಮಾಡಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಡಾ| ಗುರುಚಿದಂಬರ ಟಕ್ಕಳಕಿ ಮಾತನಾಡಿ, ಸಂಸ್ಕೃತ, ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿವಳಿಕೆ ಮೂಡಿಸುವುದು ಅತ್ಯಂತ ಮಹತ್ವವಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕೃತ ಅಭ್ಯಾಸ ಮಾಡಿಸಬೇಕು ಎಂದು ಹೇಳಿದರು.