Advertisement
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಎಸ್‌ಪಿವೈಎಸ್‌ಎಸ್ ಮತ್ತು ನೆಹರು ಯುವಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಪ್ರತಿಯೊಬ್ಬರಿಗೂ ಯೋಗ ಅವಶ್ಯಕ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ್ ಕುಮಾರ್ ಮಾತನಾಡಿ, ಪ್ರತಿಯೊಬ್ಬರ ಜೀವನಕ್ಕೂ ಯೋಗ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ದೃಢವಾಗಿರಲು ಯೋಗ ಸಹಕಾರಿಯಾಗಿದೆ. ಆರೋಗ್ಯವಂತರಾಗಿ ಹೆಚ್ಚು ಕಾಲ ಬದುಕಬೇಕು ಎಂಬುದು ಯೋಗದ ಚಿಂತನೆಯಾಗಿದೆ ಎಂದರು.
ದೈಹಿಕ ಸಾಮರ್ಥ್ಯ ಹೆಚ್ಚಳ: ಯೋಗ ಅಭ್ಯಾಸ ಮತ್ತು ಕ್ರೀಡೆ ಪಠ್ಯದ ಜೊತೆಗೆ ವಿದ್ಯಾರ್ಥಿಗಳು ಕಲಿಯಬೇಕು. ಯೋಗ ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಸಾಮರ್ಥಯವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗಿದೆ ಎಂದರು.
ಎಎಸ್ಪಿ ಅನಿತಾ, ಜಿಪಂ ಉಪಕಾರ್ಯದರ್ಶಿ ಹನುಮನರಸಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಆರ್. ರಾಚಯ್ಯ, ಪ್ರಭಾರ ಡಿಡಿಪಿಐ ಮಂಜುನಾಥ್, ಡಾ. ಮಲ್ಲಣ್ಣ ತೋಟದಪ್ಪ , ಮೈಸೂರಿನ ಡಾ.ನಟರಾಜ್, ಶ್ರೀನಿವಾಸ ಕೊತಬಾಳ್, ಎಸ್‌ಪಿವೈಎಸ್‌ಎಸ್ ನ ಯೋಗಗುರು ಬಿ.ಪಿ. ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು. ಜಿಲ್ಲಾ ಪ್ರಕೃತಿ ಮತ್ತು ಯೋಗ ಕೇಂದ್ರದ ವೈದ್ಯೆ ಡಾ. ಎಲ್. ಮಾನಸಾ ಯೋಗಾಭ್ಯಾಸಗಳ ನಿರ್ದೇಶನ ನೀಡಿದರು.
ವಿವಿಧ ಆಸನಗಳು: ಬೆಳಗ್ಗೆ 6.45 ರಿಂದ 8 ಗಂಟೆಯವರೆಗೂ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು. ಶಿಥಲೀಕರಣ ವ್ಯಾಯಾಮ, ತಾಡಾಸನ, ವೃಕ್ಷಾಸನ, ಅರ್ಧಚಕ್ರಾಸನ, ಪಾದಹಸ್ತಾಸನ, ತ್ರಿಕೋನಾಸನ, ಸಮದಂಡಾಸನ, ವಜ್ರಾಸನ, ಭದ್ರಾಸನ, ಮಂಡೂಕಾಸನ, ವಕ್ರಾಸನ,
ಉಸಿರಾಟ ಶಶಾಂಕಾಸನ, ಭುಜಂಗಾಸನ, ಶಲಭಾಸನ, ಅರ್ಧ ಹಲಾಸನ, ಉತ್ತಿತ ಪಾದಾಸನ, ಸೇತುಬಂಧಾಸನ, ಪವನಮುಕ್ತಾಸನಗಳ ಅಭ್ಯಾಸ ನಡೆಯಿತು.ಬಳಿಕ ಕಪಾಲಬಾತಿ, ನಾಡಿಶೋಧನ, ಶೀತಲೀ, ಭ್ರಮರೀ ಪ್ರಾಣಾಯಾಮ ಮಾಡಿಸಲಾಯಿತು.