Advertisement
ಸೂರ್ಯ ಉದಯಿಸುವುದಕ್ಕೂ ಮುನ್ನವೇ ಮುಂಜಾನೆ 5ಕ್ಕೆ ರಸ್ತೆಯಲ್ಲಿ ಯೋಗಪಟುಗಳು ತಂಡೋಪ ತಂಡವಾಗಿ ರೇಸ್‌ಕೋರ್ಸ್‌ನತ್ತ ಹೆಜ್ಜೆ ಹಾಕಿದುದು ಜನಸಾಮಾನ್ಯರ ಉಬ್ಬೇರುವಂತೆ ಮಾಡಿತು. ರೇಸ್‌ಕೋರ್ಸ್‌ನತ್ತ ಹೆಜ್ಜೆ ಹಾಕಿದುದು ಜನಸಾಮಾನ್ಯರ ಉಬ್ಬೇರುವಂತೆ ಮಾಡಿತು. ಜನಸಾಮಾನ್ಯರ ಉಬ್ಬೇರುವಂತೆ ಮಾಡಿತು.ಮೈಸೂರು: ವಿಶಾಲವಾದ ಪ್ರದೇಶಲ್ಲಿ ಅಹ್ಲಾದಕರ ಗಾಳಿ, ಮೆತ್ತನೆಯ ಹುಲ್ಲು ಹಾಸಿನ ಮೇಲೆ ಸಾಮೂಹಿಕವಾಗಿ ಯೋಗ ಪ್ರದರ್ಶಿಸುವ ಮೂಲಕ ಸಾವಿರಾರು ಮಂದಿ ಯೋಗಪಟುಗಳು 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಾಕ್ಷಿಯಾದರು.
Related Articles
Advertisement
ಯೋಗ ಗೀತೆ: ಓಂಕಾರ ಮತ್ತು ಯೋಗ ಗೀತೆಯ ಮೂಲಕ ಆರಂಭವಾದ ಯೋಗ ಪ್ರದರ್ಶನ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು. ಈ ಸಂದರ್ಭ ನಗರಪಾಲಿಕೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಜಿಲ್ಲಾಡಳಿ ಸಿಬ್ಬಂದಿ, ಪೊಲಿಸ್ ಸಿಬ್ಬಂದಿಯೂ ಭಾಗಿಯಾಗಿ ಯೋಗ ಪ್ರದರ್ಶಿಸಿದರು.
ಶಂಕನಾದದೊಂದಿಗೆ ಆರಂಭವಾದ ಯೋಗ ಪ್ರದರ್ಶನ ತಾಡಾಸನ, ವೃಕ್ಷಾಸನ, ಅರ್ಧ ಚಕ್ರಾಸನ, ವೀರಭದ್ರಾಸನ, ತ್ರಿಕೋನಾಸನ ವಕ್ರಾಸನ ಸೇರಿದಂತೆ ಧ್ಯಾನದೊಂದಿಗೆ ಮುಕ್ತಾಯಗೊಂಡಿತು.
ಪ್ರತಿಜ್ಞಾವಿಧಿ ಬೋಧನೆ: ಯೋಗ ಪ್ರದರ್ಶನ ಮುಗಿದ ಮುಗಿದ ನಂತರ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಸ್ವತ್ಛ ಮೈಸೂರಿಗಾಗಿ ಮನೆಯಲ್ಲಿಯೇ ಕಸವನ್ನು, ಹೊಣ ಕಸ ಮತ್ತು ಹಸಿ ಕಸ ಎಂದು ಬೇರ್ಪಡಿಸಿ, ಪಾಲಿಕೆಗೆ ನೀಡಬೇಕು. ಇದು ನಮ್ಮೆಲ್ಲರ ಕರ್ತವ್ಯ ಎಂಬ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಅಚ್ಚುಕಟ್ಟಾದ ವ್ಯವಸ್ಥೆ: 30 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿತ್ತು. ರೇಸ್‌ಕೋರ್ಸ್ ಆವರಣದಲ್ಲಿ ಎರಡು ಮೊಬೈಲ್ ಶೌಚಾಲಯ ವಾಹನ, ತಾತ್ಕಾಲಿಕ ಶೌಚಾಗೃಹ, ಕುಡಿಯುವ ನೀರಿನ ಘಟಕ ತೆರೆಯಲಾಗಿತ್ತು.
ಜೊತೆಗೆ ಮಾರ್ಗದರ್ಶನ ನೀಡಲು ಸ್ವಯಂಸೇವಕರನ್ನೂ ನಿಯೋಜಿಸಲಾಗಿತ್ತು. ಸೂಕ್ತ ಬಂದೋಬಸ್ತ್ ಮತ್ತು ಸಂಚಾರ ದಟ್ಟಣೆ ನಿವಾರಿಸಲು ಪೊಲೀಸರು ಹಲವು ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದರು. ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ, ಯತೀಂದ್ರ, ಮೇಯರ್ ಪುಷ್ಪಲತಾ, ಜಿಪಂ ಅಧ್ಯಕ್ಷೆ ಪರಿಮಳ, ತಾಪಂ ಅಧ್ಯಕ್ಷೆ ಕಾಳಮ್ಮ ಇತರರಿದ್ದರು.