ಉಡುಪಿ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪೇಜಾವರ ಮಠ, ಭಾರತೀಯ ವಿದ್ವತ್ ಪರಿಷತ್, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ನಡೆಯುತ್ತಿರುವ ಅಖಿಲ ಭಾರತೀಯ ಪ್ರಾಚ್ಯವಿದ್ಯಾ ಸಮ್ಮೆಳನವನ್ನು ಪತಂಜಲಿ ಯೋಗ ಪೀಠದ ಸಂಸ್ಥಾಪಕ ಬಾಬಾ ರಾಮ್ ದೇವ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಮುಂದಿನ ದಿನಗಳು ಸಂಸ್ಕೃತದ ದಿನವಾಗಲಿದೆ, ಸನಾತನ ಧರ್ಮದ ದಿನವಾಗಲಿದೆ, ಸಂಸ್ಕೃತ ಕಲಿತರೆ ಏನು ಲಾಭವಿದೆ ಎಂದು ಹೇಳಿದವರೇ ಇಂದು ಸಂಸ್ಕೃತ ಕಲಿಕೆಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ ಸಂಸ್ಕೃತ ಹಾಗೂ ಸನಾತನ ಧರ್ಮಕ್ಕೆ ತನ್ನದೇ ಆದ ಹಿರಿಮೆ ಗರಿಮೆಯಿದೆ. ಅಷ್ಟು ಮಾತ್ರವಲ್ಲದೆ ಸಂಸ್ಕೃತ ಎಲ್ಲ ಭಾಷೆಗಳ ಮೂಲವಾಗಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಶ್ರೀಪಾದರು ಸನಾತನ ಧರ್ಮದ ರಕ್ಷಣೆ ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಬೇಕಾಗಿದೆ, ಪ್ರಾಚ್ಯವಿದ್ಯೆಯೇ ಭಾರತೀಯ ವಿದ್ಯೆಯಾಗಿದೆ ಬೇರೆಲ್ಲ ಭಾಷೆಗಳು ಪರಿವರ್ತನೆ ಆಗುತಿದ್ದರೂ ಸಂಸ್ಕೃತ ಭಾಷೆ ಮಾತ್ರ ಅನಾಧಿ ಕಾಲದಿಂದಲೂ ಏಕರೂಪದಲೇ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರು, ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ಪತಂಜಲಿ ಯೋಗ ಪೀಠದ ಕುಲಪತಿ ಆಚಾರ್ಯ ಬಾಲಕೃಷ್ಣ ಸಹಿತ ಹಲವರು ಉಪಸ್ಥಿತರಿದ್ದರು.