ಯಾವುದೇ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಮಹಿಳೆ ಯನ್ನು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಸಜ್ಜುಗೊಳಿಸಲು ಯೋಗ ಸಹಕಾರಿ. ಆಧುನಿಕ ಜೀವನ ವಿಧಾನದಲ್ಲಿ ಮಹಿಳೆಯರಿಗೆ ವ್ಯಾಯಾ ಮದ ಕೊರತೆ ಹಾಗೂ ಆರೋಗ್ಯ ಸಮಸ್ಯೆ ಗಳು ಕಾಡುವುದು ಸಹಜ. ಇವನ್ನು ನಿವಾ ರಿಸಲು ಮತ್ತು ಆರೋಗ್ಯಕರ ಜೀವನಕ್ಕೆ ಯೋಗಾಸನಗಳು ಪೂರಕ.
ಯೋಗ ಹೇಗೆ ಸಹಕಾರಿ?
ಯೋಗವು ದೈಹಿಕ ಮತ್ತು ಮಾನಸಿಕ ಅಭ್ಯಾಸವಾಗಿದೆ. ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ಮಹಿಳೆಯರಲ್ಲಿ ಆತಂಕ ಮತ್ತು ಖನ್ನತೆ ರೋಗಲಕ್ಷಣಗಳು ಕಡಿಮೆಯಾಗುತ್ತದೆ. ಕೆಲವು ಭಂಗಿಗಳು ಗರ್ಭಾಶಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಿದರೆ, ಮತ್ತೆ ಕೆಲವು ಸೆಳೆತವನ್ನು ನಿವಾರಿಸುತ್ತದೆ ಮತ್ತು ಯೋಗದ ಸೌಮ್ಯವಾದ ವಿಸ್ತರಣೆಯು ಕೆಳ ಬೆನ್ನಿನಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತದೆ.
ಯೋಗಾಸನಗಳು ಶಕ್ತಿ, ನಮ್ಯತೆ, ಸಮನ್ವಯ ಮತ್ತು ಚಲನೆಯ ವ್ಯಾಪ್ತಿ ಯನ್ನು ಉತ್ತೇಜಿಸುತ್ತದೆ. ರಕ್ತಪರಿ ಚಲನೆಯನ್ನು ಸುಧಾರಿಸುತ್ತದೆ. ಇದು ಹೃದಯ ರಕ್ತನಾಳದ ಆರೋಗ್ಯವನ್ನು ಹೆಚ್ಚಿಸುತ್ತದೆ ಹಾಗೂ ಉಸಿರಾಟ, ನರಮಂಡಲಗಳಿಗೆ ಪ್ರಯೋಜನಕಾರಿ. ಉಸಿರಿನ ಗತಿಯೊಂದಿಗೆ ಯೋಗಾಸನ ಅಭ್ಯಾಸವು ಸಂತಾನೋತ್ಪತ್ತಿ ಅಂಗಗಳು ಮತ್ತು ಅಂಗಾಂಶಗಳಿಗೆ ಆಮ್ಲಜನಕ ಯುಕ್ತ ರಕ್ತದ ಹರಿವನ್ನು ಹೆಚ್ಚಿಸಲು ಸಹಕಾರಿ. ಸೆಳೆತಕ್ಕೆ ಸಂಬಂಧಿತ ಅಸ್ವಸ್ಥತೆ ನಿವಾರಿಸುವಲ್ಲಿಯೂ ಪರಿಣಾಮಕಾರಿ.
ಯೋಗಾಭ್ಯಾಸಗಳು
ಮಹಿಳೆಯರ ಆರೋಗ್ಯ ಪಾಲನೆಗಾಗಿ ಇರುವ ಕೆಲವೊಂದು ಪ್ರಮುಖವಾದ ಆಸನಗಳನ್ನು ಇಲ್ಲಿ ಹೆಸರಿಸಲಾಗಿದೆ. ಆದರೆ ಈ ಯೋಗಾಸನಗಳನ್ನು ಯಾವತ್ತು ವಿನ್ಯಾಸಗಳೊಂದಿಗೆ ಅಭ್ಯಾಸ ಮಾಡಬೇಕು. ಆರಂಭದಲ್ಲಿ ಇಷ್ಟ ದೇವರ ಪ್ರಾರ್ಥನೆ, ಕೆಲವು ಕ್ರಿಯೆಗಳಾದ ಕಪಾಲಭಾತಿ, ತ್ರಾಟಕ ಇತ್ಯಾದಿಗಳು. ಕುತ್ತಿಗೆ ಭುಜಗಳ ಸರಳ ವ್ಯಾಯಾಮ, ದೇಹದ ಜಡತ್ವ ಹೋಗಿ ಲಘುತ್ವ ಬರಲು ಕೆಲವು ಸರಳ ವ್ಯಾಯಾಮಗಳು, ಸಾಧ್ಯವಾಗುವವರಿಗೆ ಸೂರ್ಯ ನಮಸ್ಕಾರಗಳು, ತುಸು ವಿಶ್ರಾಂತಿ.
ಯೋಗಾಸನಗಳು: ತಾಡಾಸನ, ಅರ್ಧ ಚಕ್ರಾಸನ, ಉತ್ತಾನಾಸನ, ಪಾದ ಹಸ್ತಾಸನ, ಅರ್ಧ ಕಟಿ ಚಕ್ರಾಸನ, ಉತ್ಕಟಾಸನ, ತ್ರಿಕೋಣಾಸನ, ವೀರ ಭದ್ರಾಸನ, ಬದ್ಧ ಕೋಣಾಸನ, ಪದ್ಮಾಸನ, ಜಾನು ಶೀರ್ಷಾಸನ, ಪಶ್ಚಿಮೋತ್ತಾನಾಸನ, ವಜ್ರಾಸನ, ಶಶಾಂಕಾಸನ, ಉಷ್ಟ್ರಾಸನ, ಮಾರ್ಜಾಲಾಸನ, ವಕ್ರಾಸನ, ಊಧ್ವì ಪ್ರಸಾರಿತ ಪಾದಾಸನ, ಪವನ ಮುಕ್ತಾಸನ, ವಿಪರೀತ ಕರಣಿ, ಹಲಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಧನುರಾಸನ ಇತ್ಯಾದಿ. ಶವಾಸನ, ಸರಳ ಪ್ರಾಣಾಯಾಮ ನಾಡಿಶುದ್ಧಿ ಪ್ರಾಣಾಯಾಮ, ಸರಳ ಧ್ಯಾನ.
– ಗೋಪಾಲಕೃಷ್ಣ ದೇಲಂಪಾಡಿ