Advertisement
ಯೋಗ ಕ್ಷೇತ್ರದಲ್ಲಿಕನ್ನಡಿಗರುಕೂಡ ತಮ್ಮದೇ ಆದ ಛಾಪು ಮೂಡಿಸಿ ನಾಡಿಗೆ ಕೀರ್ತಿ ತಂದುಕೊಟ್ಟಿದ್ದಾರೆ. ಅವರಲ್ಲಿ ಮೈಸೂರು ಮೂಲದಬಿ.ಕೆ.ಎಸ್.ಐಯ್ಯಂಗಾರ್, ಸ್ವಾಮಿ ವಿವೇಕಾನಂದಯೋಗ ಅನುಸಂಧಾನದ ಮಹಾಸಂಸ್ಥಾನದರೂವಾರಿ ಎಚ್.ಆರ್.ನಾಗೇಂದ್ರ, ಶ್ವಾಸ ಗುರುಸ್ವಾಮಿ ವಚನಾನಂದ, ಭಾರತದ ಕ್ರಿಕೆಟಿಗರಿಗೆಯೋಗ ಹೇಳಿಕೊಟ್ಟ ಯೋಗ ಗುರುಡಾ.ಓಂಕಾರ್ ಸೇರಿದಂತೆ ಹಲವರು ಇದ್ದಾರೆ.
Related Articles
Advertisement
ಅಸಂಖ್ಯಾತ ಸಂಖ್ಯೆಯಲ್ಲಿ ವಿದೇಶಿಗರು ಕೂಡ ಆರ್ಟ್‌ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡುತ್ತಾರೆ.1982ರಲ್ಲಿ ರವಿಶಂಕರ್‌ಗೂರುಜಿ ಅವರು ಕನಕಪುರ ಮುಖ್ಯ ರಸ್ತೆಯಲ್ಲಿ ಆರ್ಟ್ ಆಫ್ಲಿವಿಂಗ್ ಆಶ್ರಮವನ್ನು ಹುಟ್ಟುಹಾಕಿದರು. ವಿಶ್ವದಾದ್ಯಂತ ಸುಮಾರು156 ಶಾಖೆಗಳನ್ನು ಹೊಂದಿದೆ. ಉಸಿರಾಟ ತಂತ್ರಗಳು, ಯೋಗ, ಧ್ಯಾನಕ್ಕೆಹೆಚ್ಚಿನ ಮಹತ್ವ ನೀಡಲಾಗುತ್ತದೆ. ದೇಶವಿದೇಶಗಳಲ್ಲಿ ಕಾರ್ಯಕ್ರಮಆಯೋಜಿಸಿ, ಜನರಿಗೆ ಬದುಕನ್ನು ಉತ್ತಮಗೊಳಿಸಿಕೊಳ್ಳುವುದು ಹೇಗೆಎಂಬ ಕುರಿತು ಆಧ್ಯಾತ್ಮದ ಮುಖೇನ ಉತ್ತರ ನೀಡುತ್ತದೆ. ಹಾಗೆಯೇಯೋಗ ಮತ್ತು ಧ್ಯಾನದ ಮೂಲಕ ಜನರ ಗಮನ ಸೆಳೆದಿದೆ. ಹಲವುಸಂಖ್ಯೆಯಲ್ಲಿ ಆ ಆಶ್ರಮದಲ್ಲಿ ಯೋಗ ತರಬೇತಿ ಪಡೆದಿದ್ದಾರೆ.
ಸಂಪರ್ಕ: https://www.artofliving.org/art-livinginternational-center-bangalore
ಈಶಾ ಫೌಂಡೇಶನ್‌ತಮಿಳುನಾಡಿನ ಕೊಯಮತ್ತೂರಿನ ವೆಲ್ಲಯನಗಿರಿ ಬೆಟ್ಟದ ಮೇಲಿರುವ ಈಶಾ ಯೋಗಕೇಂದ್ರ ಜನಾಕರ್ಷಣೆಯ ಆಧ್ಯಾತ್ಮ ಕೇಂದ್ರ. ಸದ್ಗುರು ಜಗ್ಗಿ ವಾಸುದೇವ್ 1992ರಲ್ಲಿನಿರ್ಮಿಸಿದಈ ಆಶ್ರಮವುಹಲವಾರುಯೋಗಹಾಗೂಪರಿಸರ ಸಂಬಂಧಿಕಾರ್ಯಕ್ರಮಗಳಿಂದದೇಶಾದ್ಯಂತ ಹೆಸರು ಮಾಡಿದೆ. ಈಶಾ ಫೌಂಡೇಶನ್‌ನ ಏಕೈಕ ಉದ್ದೇಶವೆಂದರೆ ಜನರನ್ನು ಆಧ್ಯಾತ್ಮಿಕಹಾಗೂ ದೈಹಿಕವಾಗಿ ಆರೋಗ್ಯವಾಗಿಡಲು ಶಿಕ್ಷಣ ನೀಡುವುದಾಗಿದೆ.
ಧ್ಯಾನ ಹಾಗೂ ಯೋಗ ಇಲ್ಲಿಪ್ರತಿದಿನ ನಡೆಯುತ್ತದೆ. ಈಶಾ ಯೋಗ ಸೆಂಟರ್‌ಗಳು ಕೊಯಮತ್ತೂರು, ದೆಹಲಿ ಮತ್ತು ಬೆಂಗಳೂರಿನಲ್ಲೂಕಾರ್ಯ ನಿರ್ವಹಿಸುತ್ತವೆ. ಆಸ್ಟ್ರೇಲಿಯಾ, ಮಲೇಷಿಯಾ ಸೇರಿದಂತೆ ಹಲವು ದೇಶಗಳಲ್ಲಿ ಈಶಾ ಫೌಂಡೇಶನ್‌ಯೋಗ ಕೇಂದ್ರಗಳಿವೆ. ಜಯನಗರ, ವಿಜಯನಗರ, ರಾಜರಾಜೇಶ್ವರಿ ನಗರ, ಬಸವೇಶ್ವರ ನಗರ, ಬನ್ನೇರುಘಟ್ಟ,ಬಾಣಸವಾಡಿ, ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್ ಮತ್ತು ಮಾರತಹಳ್ಳಿ ಸೇರಿದಂತೆ ಹಲವುಕಡೆಗಳಲ್ಲಿ ಈಶಾಕೇಂದ್ರಗಳಿವೆ.ಸಂಪರ್ಕ: https://isha.sadhguru.org/in/en/center/yoga-classes-bangalore
ದೇವೇಶ ಸೂರಗುಪ್ಪ