Advertisement
ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್ ಕೂಡ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾಗಿ ಸ್ಥಾನ ಕಳೆದುಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಬಿಸಿಸಿಐ ಆಡಳಿತಾಧಿಕಾರಿ ವಿನೋದ್ ರಾಯ್ ಕೂಡ ಪ್ರಶ್ನಿಸಿದ್ದಾರೆ.
ತರಬೇತುದಾರರ ಬಳಿ ವಿವರಣೆ ಕೇಳಲಿದ್ದಾರೆ. ಅದಾದ ಬಳಿಕ ಅವರು ನಿರ್ಧಾರಕ್ಕೆ ಬರಲಿದ್ದಾರೆಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯೋ ಯೋ ಪರೀಕ್ಷೆ ವಿವಾದಾತ್ಮಕ ಸ್ವರೂಪ ಪಡೆದ ನಂತರ ಹಲವರು ಅದನ್ನು ಖಂಡಿಸಿದ್ದಾರೆ. ಸ್ವತಃ ಬಿಸಿಸಿಐ ಖಜಾಂಚಿ ಅನಿರುದ್ಧ ಚೌಧರಿ ಅವರು ಆಡಳಿತಾಧಿಕಾರಿಗೆ ಪತ್ರ ಬರೆದು, ಯೋ ಯೋ ಕಡ್ಡಾಯವಾಗಿದ್ದು ಯಾವಾಗ, ಹೇಗೆ ಎಂದು ಪ್ರಶ್ನಿಸಿದ್ದಾರೆ. ಇನ್ನೊಂದು ಕಡೆ ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಕೂಡ ಯೋ ಯೋ ಬಗ್ಗೆ ಕಿಡಿಕಾರಿದ್ದಾರೆ. ಕ್ರಿಕೆಟಿಗರ ಭವಿಷ್ಯದೊಂದಿಗೆ ಚೆಲ್ಲಾಟವಾಡಬೇಡಿ ಎಂದು ಕಟುವಾಗಿ ಹೇಳಿದ್ದಾರೆ.