Advertisement

ಇಟಗಿ-ಸಾಸರವಾಡ ಏತ ನೀರಾವರಿ ಯೋಜನೆ ನನೆಗುದಿಗೆ

04:55 PM Jul 02, 2018 | |

ಶಿರಹಟ್ಟಿ: ರೈತರ ಹಿತ ಕಾಯುವುದಕ್ಕಾಗಿ ತಾಲೂಕಿನಲ್ಲಿರುವ ತುಂಗಭದ್ರಾ ನದಿ ನೀರನ್ನು ಸದ್ಬಳಕೆ ಮಾಡಿಕೊಂಡು ನೀರಾವರಿ ಯೋಜನೆಯನ್ನು ಆರಂಭಿಸಲಾಗಿತ್ತು. ತಾಲೂಕಿನ ಹೊಳೆ-ಇಟಗಿ ಗ್ರಾಮದ ಹತ್ತಿರ 2006ರಲ್ಲಿ ಇಟಗಿ- ಸಾಸರವಾಡ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಕಾರ್ಯಾರಂಭದಿಂದಲೇ ಪೂರ್ಣ ಪ್ರಮಾಣದ ನೀರು ಹರಿಸಲು ಸಾಧ್ಯವಾಗದೆ ಸಮಸ್ಯೆಯ ಸುಳಿಯಲ್ಲಿ ಸುತ್ತಿಕೊಂಡು ಬಂದಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿಸಬೇಕಾದ ಯೋಜನೆ ಹಳ್ಳಹಿಡಿದಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

Advertisement

11 ಗ್ರಾಮಗಳ 1984 ಹೆಕ್ಟೇರ ಪ್ರದೇಶ ನೀರಾವರಿ: ಈ ಯೋಜನೆಯಿಂದ ಇಟಗಿ-ಸಾಸರವಾಡ, ತಂಗೋಡ, ಕನಕವಾಡ, ಹೆಬ್ಟಾಳ, ಚೌಡಾಳ, ಬಸಾಪುರ, ತೊಳಲಿ, ಕಲ್ಲಾಗನೂರ, ಸೇರಿದಂತೆ ಒಟ್ಟು 11 ಗ್ರಾಮಗಳ ರೈತರ ಜಮೀನಿಗೆ ನೀರಾವರಿ ಒದಗಿಸಿ 1984 ಹೆಕ್ಟೇರ್‌ ನೀರಾವರಿಗೆ ಒಳಪಡಿಸುವ ಸಾಮರ್ಥ್ಯವನ್ನು ಈ ಯೋಜನೆಯಲ್ಲಿ ಅಳವಡಿಸಲಾಗಿದೆ. ಆದರೆ ವಿಪಾರ್ಯಸವೆಂದರೆ ಆರಂಭವಾದಾಗಿನಿಂದಲೂ ಸಹಿತವಾಗಿ ಒಂದಿಲ್ಲ ಒಂದು ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಾ ಬಂದಿದೆ. ಆದರೆ ಒಂದು ಹನಿ ನೀರು ರೈತರ ಜಮೀನುಗಳಿಗೆ ತಲುಪಿಲ್ಲ. ರೈತರ ಆಶಾದಾಯಕವಾದ ಈ ಯೋಜನೆಗೆ ಅನುಷ್ಠಾನ ಎಂದು? ಎನ್ನುವ ಪ್ರಶ್ನೆ ಸದಾ ಕಾಡುತ್ತಿದೆ.

ತಾಲೂಕಿನ ಇಟಗಿ ಗ್ರಾಮದಲ್ಲಿ ನಿರ್ಮಾಣವಾದಂತಹ ಈ ಯೋಜನೆಯಿಂದ ನಿರ್ಮಾಣವಾದ ಜಾಕ್‌ವೆಲ್‌ ಮೂಲ ಸ್ಥಿತಿಯಿಂದ ಸಾಕಷ್ಟು ದುರಸ್ತಿಯಲ್ಲಿದೆ. ಅಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಅಲ್ಲಿರುವ ಸಾಮಗ್ರಿಗಳು ಇಲ್ಲದಾಗಿವೆ. ಕಳೆದ 20 ದಿನಗಳ ಹಿಂದೆ ತಾಪಂ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಹೆಬ್ಟಾಳ ಜಿಪಂ ಸದಸ್ಯ ಈಶ್ವರಣ್ಣ ಹುಲ್ಲಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಯೋಜನೆಯ ಸ್ಥಿತಿಗತಿಗೆ ಛೀಮಾರಿ ಹಾಕಿದರು. ಯೋಜನೆಯ ಅಭಿವೃದ್ಧಿಗಾಗಿ ಮತ್ತು ದುರಸ್ತಿಗಾಗಿ ಸಾಕಷ್ಟು ಅನುದಾನವಿದ್ದರೂ ಸಹಿತವಾಗಿ ಕುಂಟು ನೆಪ ಹೇಳಿದರ ಅಧಿಕಾರಿಗಳಿಗೆ ಒಂದು ತಿಂಗಳದ ಗಡುವು ನೀಡಿ ಕಾಲುವೆಗೆ ನೀರು ಬಿಡುವಂತೆ ಸೂಚಿಸಿದ್ದರು.

ಎಚ್ಚೆತ್ತುಕೊಂಡ ಅಧಿಕಾರಿಗಳು!:
ಯೋಜನೆಯಲ್ಲಿನ ಸಂಗತಿಗಳನ್ನು ದುರಸ್ತಿಗೊಳಿಸಲು 27 ಲಕ್ಷ ಅನುದಾನದಲ್ಲಿ ಮೋಟಾರ್‌ ಮತ್ತು ಟ್ರಾನ್ಸ್‌ಫಾರ್ಮರ್‌, ಕಾಲುವೆ ದುರಸ್ತಿಗೊಳಿಸಿ ನೀರು ಸರಬರಾಜು ಮಾಡಲು ಸಜ್ಜಾಗಿದ್ದಾರೆ. ಸತತವಾಗಿ ಬರಗಾಲದಿಂದ ತತ್ತರಿಸುತ್ತಿರುವ ರೈತ ಸಮೂಹ ಮಳೆಯಿಲ್ಲದೇ ಬದುಕು ಬರಡಾಗಿದೆ. ಈ ಬಾರಿ ಮುಂಗಾರು ಮಳೆಯು ತಕ್ಕಮಟ್ಟಿಗೆ ಆಶಾ ಭಾವನೆಯನ್ನು ಮೂಡಿಸಿದೆ ಆದರು ಸಹಿತವಾಗಿ ರೈತರಿಗೆ ಸಮರ್ಪಕವಾದ ಮಳೆ ಬಾರದೆ ಹೊಲದಲ್ಲಿ ಬೆಳೆದಿರುವ ಬೆಳೆಗಳಿಗೆ ಸಾಕಷ್ಟು ಮಳೆಯಿಲ್ಲದೆ ಬೆಳೆ ಮತ್ತು ರೈತ ಬಳಲುತ್ತಿದ್ದಾರೆ.

ಸರಕಾರ ರೈತರ ಹಿತ ಕಾಪಾಡಲು ಯೋಜನೆಯನ್ನು ರೂಪಿಸಿದ್ದು, ಅದು ಅನುಷ್ಠಾನಕ್ಕೆ ಅಧಿಕಾರಿಗಳೆ ಹೊಣೆಯಾಗಿರುತ್ತಾರೆ. ಅಧಿಕಾರಿಗಳು ಹೆಚ್ಚು ಗಮನ ಹರಿಸಿ ರೈತರ ಹಿತ ಕಾಪಾಡಲು ಮುಂದಾಗಬೇಕಾಗಿದೆ. ನದಿಯ ನೀರನ್ನು ಸಮರ್ಪಕವಾಗಿ ಬಳೆಕ ಮಾಡಿಕೊಂಡು ರೈತರ ಆರ್ಥಿಕ ಸಂಕಷ್ಟವನ್ನು ದೂರ ಮಾಡಬೇಕಾಗಿರುವುದು ಅವಶ್ಯವಾಗಿದೆ.

Advertisement

ಕಾಲುವೆಗಳಲ್ಲಿ ಜಂಗಲ್‌ ತೆಗೆಸುವುದಕ್ಕೆ ಮುಖ್ಯ ಇಂಜನಿಯರ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯ ಮೋಟಾರು, ವಿದ್ಯುತ್‌ ಟಿಸಿ ದುರಸ್ತಿಗೊಳಿಸಿದ್ದು, ಯೋಜನೆಯ ವ್ಯಾಪ್ತಿಯ ರೈತರು ನೀರು ಬಿಡುವಂತೆ ಸೂಚಿಸಿದರೆ ಕಾಲುವೆ ಮೂಲಕ ನೀರು ಸರಬುರಾಜು ಮಾಡಲಾಗುವುದು.
ಬಿ.ಸುರೇಶ, ಉಪವಿಭಾಗಾಧಿಕಾರಿ,
ತುಂಗಾ ಮೇಲ್ದಂಡೆ ಯೋಜನೆ ನಂ -3 ಹಾವೇರಿ. 

Advertisement

Udayavani is now on Telegram. Click here to join our channel and stay updated with the latest news.

Next