Advertisement
ಪ್ರಸ್ತುತ ಅಸ್ತಿತ್ವದಲ್ಲಿರುವ ಆರೋಗ್ಯ ವಿಮಾ ಯೋಜನೆಗಳಿಗಿಂತ “ಯಶಸ್ವಿನಿ’ ಹೆಚ್ಚು ಅನುಕೂಲಕರ ಎಂದು ರೈತರು ಹೇಳುತ್ತಿದ್ದು, ಆಯುಷ್ಮಾನ್ ಭಾರತ್ ನಿರೀಕ್ಷಿತ ಫಲ ಕೊಡದ ಕಾರಣ ಅದರೊಂದಿಗಿನ ವಿಲೀನ ರದ್ದು ಮಾಡುವಂತೆ ಒತ್ತಡ ಹೇರಲಾಗಿದೆ.
ಯೋಜನೆಗಾಗಿ ವಿಲೀನ
2018 ಜೂನ್‌ನಲ್ಲಿ ರಾಜ್ಯ ಸರಕಾರ ಯಶಸ್ವಿನಿಯೂ ಸೇರಿದಂತೆ ಎಲ್ಲ ರೀತಿಯ ಆರೋಗ್ಯ ಸೇವೆಗಳನ್ನು ಆಯುಷ್ಮಾನ್ ಭಾರತ್ ಜತೆ ವಿಲೀನಗೊಳಿಸಿದೆ. ಬಳಿಕ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸಾ ಸೌಲಭ್ಯದಿಂದ ಜನರು ವಂಚಿತರಾ ದರು. ಸರಕಾರಿ ಆಸ್ಪತ್ರೆಗಳ ಜಿಲ್ಲಾ ಶಸ್ತ್ರಚಿಕಿತ್ಸಕರಿಂದ ಅನುಮತಿ ಪತ್ರ ಪಡೆದು ಖಾಸಗಿ ಆಸ್ಪತ್ರೆಗೆ ದಾಖ ಲಾದರೆ ಮಾತ್ರ ಆರೋಗ್ಯ ಕರ್ನಾ ಟಕ ಯೋಜನೆಯಡಿ ಚಿಕಿತ್ಸೆ ನೀಡಲಾ ಗುತ್ತಿದ್ದು, ಇದರಿಂದ ಜನರಿಗೆ ನಿರೀಕ್ಷಿತ ಪ್ರಯೋಜನ ಸಿಗುತ್ತಿಲ್ಲ. ಯಶಸ್ವಿನಿಗೆ ಹೋಲಿಸಿದರೆ ಈಗಿನ ಯೋಜನೆ ಕಠಿನ ನಿಯಮ ಒಳಗೊಂಡಿದ್ದು, ಅಗತ್ಯ ಸಂದರ್ಭದಲ್ಲಿ ನೆರವಾಗುತ್ತಿಲ್ಲ ಎಂಬ ಆರೋಪ ಇದೆ ಹಾಗೂ ಯಶಸ್ವಿನಿ ಪುನರಾರಂಭಕ್ಕೆ ಆಗ್ರಹ ವ್ಯಕ್ತವಾಗಿದೆ. ಕಡಿಮೆ ಶುಲ್ಕ, ಗರಿಷ್ಠ ಲಾಭ
ಆಯಾ ಸಹಕಾರ ಕ್ಷೇತ್ರದಲ್ಲಿ (ಸೊಸೈಟಿ) ನೋಂದಣಿ ಆಗಿರುವ ಸದಸ್ಯರಿಗೆ ಪ್ರತೀ ವರ್ಷ 300 ರೂ.ಗಳನ್ನು ಯಶಸ್ವಿನಿಗಾಗಿ ಪಾವತಿಸ ಲಾ ಗು ತ್ತಿತ್ತು. ಎಸ್‌ಸಿ, ಎಸ್‌ಟಿ ಸಮುದಾಯ ಗಳಿಗೆ 250 ರೂ. ಹಾಗೂ ಇತರ ವರ್ಗಗಳಿಗೆ 50 ರೂ. ಸರಕಾರ ಸಬ್ಸಿಡಿ ನೀಡುತ್ತಿತ್ತು. ಕುಟುಂಬಸ್ಥರೆಲ್ಲರೂ ಯೋಜನೆಗೆ ಒಳಪಡುವುದರಿಂದ ಜನರಿಗೆ ಹೆಚ್ಚು ಅನುಕೂಲಕರವಾಗಿತ್ತು. ಖಾಸಗಿ ವಿಮಾ ಕಂಪೆನಿಗಳು ಆರೋಗ್ಯ ವಿಮೆ ನೀಡುತ್ತಿದ್ದರೂ ವಯಸ್ಸು, ಚಿಕಿತ್ಸಾ ವೆಚ್ಚ, ಕಾಯಿಲೆ ಮಿತಿ -ಹೀಗೆ ನಾನಾ ಇತಿಮಿತಿಗಳಲ್ಲಿ ಚಿಕಿತ್ಸಾ ಸೌಲಭ್ಯ ಒದಗಿಸುತ್ತವೆ. ಆದರೆ “ಯಶಸ್ವಿನಿ’ ಯೋಜನೆಯಲ್ಲಿ ಯಾವುದೇ ಇತಿಮಿತಿ ಇಲ್ಲದಿರುವುದರಿಂದ ಗ್ರಾಮೀಣ ಜನರಿಗೆ ಅನುಕೂಲವಾಗಿತ್ತು.
Related Articles
ವೈದ್ಯಕೀಯ ಕ್ಷೇತ್ರದ 14 ವಿಭಾಗಗಳಲ್ಲಿ ಗುರುತಿಸಿದ 295 ಕಾಯಿಲೆಗಳ 823 ಶಸ್ತ್ರಚಿಕಿತ್ಸೆಗೆ ನಗದು ರಹಿತ ಸೌಲಭ್ಯ ಪಡೆಯಬಹುದು. ಗ್ರಾಮೀಣ ಯಶಸ್ವಿನಿ ಯೋಜನೆಯಡಿ ಒಂದು ಬಾರಿ ಚಿಕಿತ್ಸೆಗೆ ಒಳಗಾದರೆ 1.25 ಲಕ್ಷ ರೂ. ಮಿತಿ ಹಾಗೂ ಒಂದಕ್ಕಿಂತ ಹೆಚ್ಚು ಬಾರಿ ಚಿಕಿತ್ಸೆಗೆ ಒಳಗಾದರೆ 2 ಲಕ್ಷ ರೂ. ವರೆಗೆ ನಗದು ರಹಿತ ಶಸ್ತ್ರ ಚಿಕಿತ್ಸಾ ಸೌಲಭ್ಯ ಪಡೆಯಬಹುದು. ಕೇವಲ 200ರಿಂದ 300 ರೂ. ಪಾವತಿಸಿ ಹಲವು ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಈ ಯೋಜನೆ ವಿಶ್ವದ ಬೃಹತ್ ಆರೋಗ್ಯ ರಕ್ಷಣ ಯೋಜನೆ ಎಂದೇ ಗುರುತಿಸಲಾಗಿತ್ತು. ವಿದೇಶಿ ರಾಷ್ಟ್ರಗಳು ಈ ಯೋಜನೆ ಬಗ್ಗೆ ಮಾಹಿತಿ ಪಡೆಯಲು ಭಾರತವನ್ನು ಸಂಪರ್ಕಿಸಿದ್ದವು. ಫಿಲಿಪ್ಪಿನ್ಸ್‌ನ ವಿಶ್ವ ವಿದ್ಯಾನಿಲಯಗಳಲ್ಲಿ “ಯಶಸ್ವಿನಿ’ ಬಗ್ಗೆ ಪ್ರಬಂಧ ಕೂಡ ಮಂಡನೆಯಾಗಿದೆ. ಈ ಯೋಜನೆಯಡಿ 2018ರ ವರೆಗೆ 13.64 ಲಕ್ಷ ರೈತರಿಗೆ 1,700 ಕೋಟಿ ರೂ. ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಹಾಗೂ 24.48 ಲಕ್ಷ ಹೊರರೋಗಿ ಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ ಎನ್ನುತ್ತಿದೆ ಅಂಕಿ -ಅಂಶ.
Advertisement
ಮರು ಆರಂಭದ ಪ್ರಸ್ತಾವಯಶಸ್ವಿನಿಯನ್ನು ಮರು ಆರಂಭಿಸುವ ಬಗ್ಗೆ ಕಳೆದ ವರ್ಷದ ಸರಕಾರ ಹಂತದಲ್ಲಿ ಪ್ರಸ್ತಾವ ಕೇಳಿ ಬಂದಿತ್ತು. ಈ ಮೊದಲಿದ್ದ 905 ಯಶಸ್ವಿನಿ ಯೋಜನೆಗೆ ಒಳಪಟ್ಟ ಆಸ್ಪತ್ರೆಗಳನ್ನು 1,800ಕ್ಕೆ ಹೆಚ್ಚಿಸುವ ಚಿಂತನೆಯೂ ನಡೆದಿತ್ತು. ಯೋಜನೆಗೆ ಸಹಕಾರ ಇಲಾಖೆ ಪ್ರತೀ ವರ್ಷ 300 ಕೋಟಿ ರೂ. ವ್ಯಯಿಸುವ ಬಗ್ಗೆ ಪ್ರಸ್ತಾವ ಕೇಳಿ ಬಂದಿತ್ತು. ಆದರೆ ಅದಿನ್ನೂ ಕಾರ್ಯ ರೂಪಕ್ಕೆ ಬಂದಿಲ್ಲ. “ಯಶಸ್ವಿನಿ’ ಸ್ವಯಂನಿಧಿ ಶಸ್ತ್ರಚಿಕಿತ್ಸಾ ಯೋಜನೆ ಪುನಾರರಂಭದ ಬೇಡಿಕೆ ಬಂದಿದ್ದು, ಈ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ.
– ಎಸ್.ಟಿ. ಸೋಮಶೇಖರ್, ಸಹಕಾರ ಸಚಿವ – ಕಿರಣ್ ಪ್ರಸಾದ್ ಕುಂಡಡ್ಕ