Advertisement

ಹೌದು ಕಣೋ; ನನ್ನ ಲೋಕದಲ್ಲಿ ಈಗ ನೀನಿಲ್ಲ!

04:53 PM Jun 19, 2018 | Harsha Rao |

ನಾಟಕದಲ್ಲಿ ಮುಖಕ್ಕೆ ಬಣ್ಣ ಹಚ್ಚುವವರನ್ನು ನೋಡಿದ್ದೇನೆ. ಅವರ ಉದ್ದೇಶ ಇನ್ನೊಬ್ಬರನ್ನು ರಂಜಿಸುವುದಾಗಿರುತ್ತದೆ. ಆದರೆ, ನಿನ್ನ ಥರ ಇನ್ನೊಬ್ಬರನ್ನು ನೋಯಿಸಲು, ಬಣ್ಣ ಬಣ್ಣದ ಮಾತುಗಳನ್ನು ಆಡುವವರನ್ನು ನಾನು ನೋಡಿರಲಿಲ್ಲ.

Advertisement

ಮನುಷ್ಯನ ಮನಸ್ಸು ಎಷ್ಟು ವಿಚಿತ್ರ ಅಲ್ವಾ ಗೆಳೆಯ?
ಅಂದು ನೀನು ಪ್ರೇಮದ ವಿಚಾರವನ್ನು ನನ್ನಲ್ಲಿ ನಿವೇದಿಸಿಕೊಂಡೆ. ಆಗ ನಿರ್ಧಾರ ತೆಗೆದುಕೊಳ್ಳುವ ವಯಸ್ಸು ನನ್ನದಾಗಿರಲಿಲ್ಲ. ಆದರೂ ನಿನ್ನ ಅದೃಷ್ಟವೋ ಏನೋ; ನಾನು ನಿನ್ನನ್ನು ಒಪ್ಪಿದೆ. ಸ್ವಲ್ಪ ದಿನ ಕಳೆದ ಮೇಲೆ ಇದ್ದಕ್ಕಿದ್ದಂತೆ ಜ್ಞಾನೋದಯವಾಯೆ¤àನೋ; ನಿನಗೆ ಈ ಹಳೆಯ ಪ್ರೀತಿ ಬೇಡವಾಯಿತಲ್ಲವೇ?

ಪ್ರೀತಿಯನ್ನು ಹೇಳಿಕೊಳ್ಳುವಾಗ ಮಾಡಿದ ಆಣೆ, ಪ್ರಮಾಣಗಳು ಇಂದು ಏನಾದವು? ಹುಡುಗನಾಗಲಿ ಅಥವಾ ಹುಡುಗಿಯಾಗಲಿ: ಇನ್ನೊಂದು ಮನಸ್ಸಿನ ಜೊತೆ ಏನನ್ನಾದರೂ ಹೇಳುವಾಗ ಹತ್ತು ಬಾರಿ ಯೋಚಿಸಬೇಕು. ಉಹೂಂ, ಅದೇನನ್ನೂ ನೀನು ಯೋಚಿಸಲೇ ಇಲ್ಲ. ಅಗತ್ಯವಿದ್ದಷ್ಟು ದಿನ ನನ್ನೊಂದಿಗೆ ಓಡಾಡಿ, ಓದು ಮುಗಿದು, ನಿನಗೆ ಕೆಲಸ ಸಿಕ್ಕಿದ ನಂತರ ನನ್ನೊಂದಿಗೆ ಸರಿಯಾಗಿ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟೆ. ನಾನಂದುಕೊಂಡೆ: ಎÇÉೋ ಕೆಲಸದ ಒತ್ತಡದಲ್ಲಿ ಸಿಲುಕಿರಬೇಕು ಅಂತ. 

ಆದರೆ ನನಗೆ ನಿಜ ಸಂಗತಿ ತಿಳಿದಿದ್ದು ಸ್ವಲ್ಪ ತಡವಾಗಿಯೇ. ಹಿಂದಿನ ವರ್ಷ ಜುಲೈ 3ರಂದು, ನಿನ್ನ ವಾಟ್ಸಾéಪ್‌ ಸ್ಟೇಟಸ್‌ ನೋಡಿದಾಗಲೇ ಗೊತ್ತಾಗಿದ್ದು, ನೀನು ಇನ್ನೊಂದು ಹುಡುಗಿಯನ್ನು ಪ್ರೀತಿಸುತಿದ್ದೀಯ ಅಂತ. ಅವತ್ತೇ ನಿನ್ನೊಂದಿಗೆ ಮಾತು ಬಿಟ್ಟೆ. ಹೇಳ್ಳೋ-ಅಗತ್ಯವಿದ್ದಷ್ಟು ದಿನ ನನ್ನೊಂದಿಗೆ ಓಡಾಡಿದ ನೀನ್ಯಾಕೆ ಹೀಗೆ ಮಾಡಿದೆ? ನಾಟಕದಲ್ಲಿ ಮುಖಕ್ಕೆ ಬಣ್ಣ ಹಚ್ಚುವವರನ್ನು ನೋಡಿದ್ದೇನೆ. ಅವರ ಉದ್ದೇಶ ಇನ್ನೊಬ್ಬರನ್ನು ರಂಜಿಸುವುದಾಗಿರುತ್ತದೆ. ಆದರೆ, ನಿನ್ನ ಥರ ಇನ್ನೊಬ್ಬರನ್ನು ನೋಯಿಸಲು, ಬಣ್ಣ ಬಣ್ಣದ ಮಾತುಗಳನ್ನು ಆಡುವವರನ್ನು ನಾನು ನೋಡಿರಲಿಲ್ಲ. ವಿಧಿ ಎಷ್ಟೊಂದು ಕ್ರೂರಿ! ನನ್ನ ಜೀವನದಲ್ಲಿಯೇ ಈ ರೀತಿ ಆಟವಾಡಿಬಿಟ್ಟಿತು.

3 ವರ್ಷಗಳಿಂದ ನಿನ್ನ ಹುಟ್ಟುಹಬ್ಬಕ್ಕೆ ಮೊದಲ ಶುಭಾಶಯ ನನ್ನದೇ ಆಗಿರುತ್ತಿತ್ತು. ಆದರೆ, ಈಗ ಆ ಜಾಗವನ್ನು ಬೇರೆ ಯಾರೋ ಆಕ್ರಮಿಸಿದ್ದಾರೆ. ಇರಲಿ, ನೀನು ನನಗೆ ನೋವು ಮಾಡಿದ್ದರೂ, ನಿನಗೆ ಶುಭ ಹಾರೈಸುತ್ತಿದ್ದೇನೆ.  ಹುಟ್ಟುಹಬ್ಬದ ಶುಭಾಶಯಗಳು, ನಿನಗೆ ಒಳ್ಳೆಯದಾಗಲಿ!

Advertisement

ಒಂದು ಮಾತು ನೆನಪಿಟ್ಟುಕೋ; ಇನ್ಮುಂದೆ ಯಾವ ಹುಡುಗಿಯ ಜೀವನದಲ್ಲಿಯೂ ಈ ರೀತಿ ಆಟವಾಡಬೇಡ, ಪ್ಲೀಸ್‌. 
ನನಗೆ ನನ್ನ ಅಪ್ಪ ,ಅಮ್ಮ  ಮುಖ್ಯ. ಬದುಕು ವಿಶಾಲವಾಗಿದೆ. ನೀನು ಜೊತೆಗಿರದಿದ್ದರೂ, ನಾನು ಜೀವನದಲ್ಲಿ ನನ್ನ ಗುರಿ ತಲುಪುತ್ತೇನೆ. ಒಂದು ವೇಳೆ ನಾನು ನಿನಗೆ ಮುಂದೆ ಎಲ್ಲಾದರೂ ಸಿಕ್ಕಿದರೆ, ದಯವಿಟ್ಟು ನನ್ನನ್ನು ಮಾತನಾಡಿಸಬೇಡ. ಏಕೆಂದರೆ ನನ್ನ ಮನಸ್ಸಿನಿಂದ ನಿನ್ನನ್ನು ಆಚೆಗೆ ಹಾಕಿದ್ದೇನೆ. ಅರ್ಥಾತ್‌, ನೀನು ಈ ಲೋಕದಲ್ಲಿಯೇ  ಇಲ್ಲವೆಂದು  ತಿಳಿದಿದ್ದೇನೆ. ಸರಿ, ಚೆನ್ನಾಗಿರು…  

ಇಂತಿ, ನೊಂದ, ಮೋಸಹೋದ ಮನಸ್ಸು 
– ಶ್ರೇಯಾ ಭಂಡಾರಿ

Advertisement

Udayavani is now on Telegram. Click here to join our channel and stay updated with the latest news.

Next