ಜೈಪುರ್: ತಾನು ಹಾಗೂ ಇತರ ಕಾಂಗ್ರೆಸ್ ಮುಖಂಡರು ಗಾಂಧಿ ಮತ್ತು ನೆಹರು ಕುಟುಂಬದ ಗುಲಾಮರು ಎಂಬುದಾಗಿ ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಲಹೆಗಾರ, ಸಿರೋಹಿ ಕ್ಷೇತ್ರದ ಶಾಸಕ ಸಂಯಮ್ ಲೋಧಾ ವಿಧಾನಸಭೆ ಕಲಾಪದಲ್ಲಿ ಎಲ್ಲರ ಹುಬ್ಬೇರಿಸುವಂತ ಹೇಳಿಕೆಯನ್ನು ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಹತ್ತು ಅಡಿ ಆಳಕ್ಕೆ ಬಿದ್ದ ಕಾರು: ಅಪಾಯದಿಂದ ಪಾರು
ಹರಿದೇವ್ ಜೋಶಿ ಯೂನಿರ್ವಸಿಟಿ ಆಫ್ ಜರ್ನಲಿಸಂ ಆ್ಯಂಡ್ ಮಾಸ್ ಕಮ್ಯೂನಿಕೇಷನ್ (ತಿದ್ದುಪಡಿ) ಮಸೂದೆ 2002ರ ಕುರಿತು ಕಲಾಪದಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದ ಮಧ್ಯದಲ್ಲಿ ಎದ್ದು ನಿಂತ ಲೋಧಾ, ಹೌದು ನಾವು ಗುಲಾಮರು. ಈ ದೇಶವನ್ನು ಗಾಂಧಿ-ನೆಹರು ಕುಟುಂಬ ದೇಶವನ್ನು ಕಟ್ಟಿದ್ದು, ಈ ನಿಟ್ಟಿನಲ್ಲಿ ನಾವು ನಮ್ಮ ಕೊನೆಯ ಉಸಿರು ಇರುವವರೆಗೂ ಗಾಂಧಿ, ನೆಹರು ಕಟುಂಬದ ಗುಲಾಮರಾಗಿರುತ್ತೇವೆ ಎಂದು ಹೇಳಿದರು.
ಲೋಧಾ ಕಾಂಗ್ರೆಸ್ಸಿಗರನ್ನು ಗುಲಾಮರು ಎಂದು ಬಣ್ಣಿಸಿದ ಕೂಡಲೇ ಪ್ರತಿಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್, ಓಹ್…ಗುಲಾಮರು! ಇದೊಂದು ಹೊಸ ಸಂಸ್ಕೃತಿಯಾಗಿ ಬಂದಿದೆ. ನಿಮ್ಮ ಗುಲಾಮಗಿರಿಗೆ ಅಭಿನಂದನೆಗಳು ಎಂದು ವ್ಯಂಗ್ಯವಾಡಿದರು.
“ಅಯ್ಯೋ ನೀವು ಎಷ್ಟೊಂದು ಗುಲಾಮಗಿರಿ ಕೆಲಸ ಮಾಡಿದ್ದರೂ ಕೂಡಾ ಕಾಂಗ್ರೆಸ್ ಪಕ್ಷ ನಿಮಗೆ (ಲೋಧಾ) ಟಿಕೆಟ್ ನೀಡಲಿಲ್ಲ ಎಂದು ಬಿಜೆಪಿ ಶಾಸಕ ಕಾಳಿಚರಣ್ ಸರಾಫ್ ಟೀಕಿಸಿದ್ದಾರೆ. 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಲೋಧಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು, ನಂತರ ಅವರು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದರು. ಇತ್ತೀಚೆಗೆ ಲೋಧಾ ಅವರನ್ನು ಮುಖ್ಯಮಂತ್ರಿ ಗೆಹ್ಲೋಟ್ ಅವರ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ.