Advertisement
ಯೆಮೆನ್‌ನಿಂದ ಸುಮಾರು 540 ಕಿ.ಮೀ ದೂರದ ಅಲ್-ಶಿಹರ್‌ಪಟ್ಟಣದ ಬಂದರು ಕೆಲಸಗಾರನಲ್ಲಿ ಮೊದಲು ಸೋಂಕು ಪತ್ತೆಯಾಗಿದ್ದು, ಆ ವ್ಯಕ್ತಿ ಚೇತರಿಕೆ ಕಂಡಿದ್ದಾನೆ. ಆದರೆ ಈಗ ಇಬ್ಬರು ಮೃತಪಟ್ಟಿದ್ದಾರೆ.
ಪ್ರತ್ಯೇಕತಾವಾದಿ ಆಡಳಿತವನ್ನು ನಡೆಸುತ್ತಿರುವ ಇಲ್ಲಿನ ಸ್ಥಳೀಯ ನಗರ ಅಡೆನ್‌ನಲ್ಲಿ ಬುಧವಾರ ಐದು ಹೊಸ ಪ್ರಕರಣಗಳು ದೃಢಪಟ್ಟಿದ್ದು, ಮತ್ತೇ 2 ವಾರ ಲಾಕ್‌ಡೌನ್ ವಿಧಿಸಲಾಗಿತ್ತು. ಆದರೆ ಈ ನಡುವೆಯೂ ಇಲ್ಲಿನ ಸ್ಥಳೀಯರು ಕಳೆದ ವಾರ ಲಾಕ್‌ಡೌನ್ ತೆರವುಗೊಳಿಸುವಂತೆ ಪ್ರತಿಭಟನೆ ನಡೆಸಿದ್ದರು. ಐದು ವರ್ಷದ ಹಿಂದೆ ನಡೆದ ಯುದ್ಧದ ವೇಳೆ ಇಲ್ಲಿನ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದ್ದು, ಪ್ರಸ್ತುತ ಎದುರಾಗಿರುವ ಸೋಂಕು ಬಿಕ್ಕಟ್ಟನ್ನು ಎದುರಿಸಲು ಕನಿಷ್ಠ ಮಟ್ಟದ ಸವಲತ್ತೂ¤ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಪರೀಕ್ಷಾ ಮಾದರಿಯನ್ನು ಅನುಸರಿಸುವಲ್ಲಿ ದೇಶ ವಿಫಲಗೊಂಡಿದೆ.
Related Articles
Advertisement
ಈಗಾಗಲೇ ಯೆಮೆನ್ ದೇಶ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಲಕ್ಷಾಂತರ ಮಂದಿ ಆಹಾರವಿಲ್ಲದೇ ಕಂಗಾಲಾಗಿದ್ದಾರೆ ಇದರೊಂದಿಗೆ ಆರೋಗ್ಯ ವ್ಯವಸ್ಥೆ ಸರಿ ಇಲ್ಲದ ಯೆಮನ್‌ನಲ್ಲಿ ಸೋಂಕು ತೀವ್ರಗೊಂಡರೆ ಮಹಾ ದುರಂತವೇ ಘಟಿಸುತ್ತದೆ ಎನ್ನುತ್ತಾರೆ ವಿಶ್ವಸಂಸ್ಥೆಯ ಅಧಿಕಾರಿಗಳು.