Advertisement

ಅಡಿಕೆಗೆ ಹಳದಿ ರೋಗ: ಪರಿಹಾರಕ್ಕೆ ಮನವಿ 

05:15 PM Nov 11, 2017 | |

ಬೆಳ್ಳಾರೆ: ಅಡಿಕೆ ಹಳದಿ ರೋಗ ಪೀಡಿತ ಪ್ರದೇಶದ ಕೃಷಿಕರ ಸಂಪೂರ್ಣ ಸಾಲ ಮನ್ನಾ ಮತ್ತು ಕೃಷಿಕರಿಗೆ ಜೀವೋನೋಪಾಯಕ್ಕಾಗಿ ಬದಲಿ ಜೀವನ ನಿರ್ವಹಣೆ  ವಿಶೇಷ ಪ್ಯಾಕೇಜ್‌ ನೀಡಲು ಒತ್ತಾಯಿಸಿ ಅರಂತೋಡಿನಿಂದ – ಸುಳ್ಯದ ತನಕ ಸ್ಥಳೀಯರು ಪಾದಯಾತ್ರೆ ನಡೆಸಿ ಸುಳ್ಯದಲ್ಲಿ ನಡೆದ ಪರಿವರ್ತನಾ ಯಾತ್ರೆಗೆ ಆಗಮಿಸಿದ್ದ ಮಾಜಿ ಮುಖ್ಯ ಮುಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ
ಸಲ್ಲಿಸಿದ್ದಾರೆ.

Advertisement

ಜಿ.ಪಂ. ಸದಸ್ಯ ಹರೀಶ್‌ ಕಂಜಿಪಿಲಿ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆಯಲ್ಲಿ ತಾ.ಪಂ. ಸದಸ್ಯೆ ಪುಷ್ಪಾ ಮೇದಪ್ಪ, ನೀಲಾವತಿ ಕೊಡಂಕೇರಿ, ಶಿವಾನಂದ ಕುಕ್ಕುಂಬಳ, ಗಂಗಾಧರ ಬನ, ಚಿತ್ರಾ ದೇರಾಜೆ, ಅರಂತೋಡು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಸಂತೋಷ್‌ ಕುತ್ತಮೊಟ್ಟೆ, ಉಪಾಧ್ಯಕ್ಷ ದಯಾನಂದ ಕುರುಂಜಿ, ವಿಹಿಂಪ ವಲಯ ಅಧ್ಯಕ್ಷ ಸೋಮಶೇಖರ್‌ ಪೈಕ, ಅರಂತೋಡು ದುರ್ಗಾ ಮಾತಾ ಭಜನ ಮಂಡಳಿ ಅಧ್ಯಕ್ಷ ಎಂ.ಎಂ. ನಾರಾಯಣ, ಎಪಿಎಂಸಿ ಸದಸ್ಯ ದೀಪಕ್‌ ಕುತ್ತಮೊಟ್ಟೆ, ಉಬಡ್ಕ ಗ್ರಾ.ಪಂ. ಅಧ್ಯಕ್ಷ ಹರೀಶ್‌ ಉಬರಡ್ಕಲ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕಿಶೋರ್‌ಕುಮಾರ್‌ ಉಳುವಾರು, ನಾಗೇಶ್‌ ಕುಂದಲ್ಪಾಡಿ, ಬಾಲಚಂದ್ರ ಕಳಗಿ, ಎ.ಸಿ. ಹೊನ್ನಪ್ಪ, ಮಂಜಪ್ಪ ಪೆರಾಜೆ , ಎನ್‌.ಎ. ರಾಮಚಂದ್ರ ಗಣಪತಿ ಭಟ್‌ ಮಜಿಗುಂಡಿ ಮೊದಲಾದವರು ಉಪಸ್ಥಿತರಿದ್ದರು. 

ಅರಂಬೂರು ಬಳಿ ಸ್ಥಳೀಯರು, ಬಿಳಿಯಾರಿನಲ್ಲಿ ಹರೀಶ್ಚಂದ್ರ ಪಾನೀಯ ವ್ಯವಸ್ಥೆ ಮಾಡಿದ್ದರು. ಪಾದಯಾತ್ರೆಯಲ್ಲಿ ಸುಮಾರು ಮೂರು ಸಾವಿರ ಜನರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next