Advertisement

T20 World Cup; ಪ್ರಾಕ್ಟಿಸ್ ಬಿಟ್ಟು ಬಾಣಸಿಗರಾದ ಅಫ್ಘಾನ್ ಆಟಗಾರರು; ಇಲ್ಲಿದೆ ಕಾರಣ

06:23 PM Jun 22, 2024 | Team Udayavani |

ಬಾರ್ಬಡೋಸ್: ಐಸಿಸಿ ಟಿ20 ವಿಶ್ವಕಪ್ ಗಾಗಿ ವೆಸ್ಟ್ ಇಂಡೀಸ್ ನಲ್ಲಿರುವ ಅಫ್ಘಾನಿಸ್ತಾನ ಆಟಗಾರರು ಬಾಣಸಿಗರಾಗಿ ಬದಲಾಗಿದ್ದಾರೆ. ಕಾರಣ ವೆಸ್ಟ್ ಇಂಡೀಸ್ ನಲ್ಲಿ ಹಲಾಲ್ ಮಾಂಸ ಸಿಗದಿರುವುದು.

Advertisement

ಬ್ರಿಡ್ಜರ್ಟನ್ ಹೋಟೆಲ್‌ ನಲ್ಲಿರುವ ಅಫ್ಘಾನಿ ಆಟಗಾರರಿಗೆ ಹಲಾಲ್ ಅತ್ಯಗತ್ಯವಾಗಿದೆ. ಹಲಾಲ್ ಮಾಂಸವು ಸಾಮಾನ್ಯವಾಗಿ ವೆಸ್ಟ್ ಇಂಡೀಸ್‌ನಲ್ಲಿ ಲಭ್ಯವಿರುತ್ತದೆ. ಆದರೆ ಎಲ್ಲಾ ಹೋಟೆಲ್ ಗಳಲ್ಲಿ ಸಿಗುವುದಿಲ್ಲ. ಹೀಗಾಗಿ ಅಫ್ಘಾನ್ ಆಟಗಾರರು ಏಪ್ರನ್ ತೊಟ್ಟು ಅಡುಗೆ ಮಾಡಬೇಕಾಯಿತು.

ಹೋಟೆಲ್ ನಲ್ಲಿ ಹಲಾಲ್ ಮಾಂಸದಡುಗೆ ಸಿಗದ ಕಾರಣ ಕೆಲವು ಆಟಗಾರು ತಾವೇ ಅಡುಗೆ ಮಾಡುತ್ತಿದ್ದಾರೆ. ಕೆಲವರು ಹಲಾಲ್ ಲಭ್ಯವಿರುವ ಬೇರೆ ಹೋಟೆಲ್ ಗಳಿಗೆ ಊಟಕ್ಕೆ ತೆರಳಿದ್ದಾರೆ.

“ನಮ್ಮ ಹೋಟೆಲ್‌ನಲ್ಲಿ ಹಲಾಲ್ ಮಾಂಸ ಲಭ್ಯವಿಲ್ಲ. ಕೆಲವೊಮ್ಮೆ ನಾವು ಸ್ವಂತವಾಗಿ ಅಡುಗೆ ಮಾಡುತ್ತೇವೆ, ಕೆಲವೊಮ್ಮೆ ನಾವು ಹೊರಗೆ ಹೋಗುತ್ತೇವೆ. ಭಾರತದಲ್ಲಿ ನಡೆದಿದ್ದ ಕಳೆದ ವಿಶ್ವಕಪ್‌ ನಲ್ಲಿ ಎಲ್ಲವೂ ಸರಿಯಾಗಿತ್ತು. ಹಲಾಲ್ ಗೋಮಾಂಸವು ಇಲ್ಲಿ ನಮಗೆ ಸಮಸ್ಯೆಯಾಗಿದೆ. ಸೇಂಟ್ ಲೂಸಿಯಾದಲ್ಲಿ ನಮಗೆ ಲಭ್ಯವಾಗಿತ್ತು, ಆದರೆ ಅದು ಎಲ್ಲಾ ಸ್ಥಳಗಳಲ್ಲಿ ಇಲ್ಲ. ಸ್ನೇಹಿತರೊಬ್ಬರು ಅದನ್ನು ನಮಗೆ ವ್ಯವಸ್ಥೆ ಮಾಡಿದರು, ನಾವು ನಾವೇ ಅಡುಗೆ ಮಾಡಿದ್ದೇವೆ” ಎಂದು ಆಟಗಾರರೊಬ್ಬರು ಪಿಟಿಐಗೆ ತಿಳಿಸಿದರು.

Advertisement

2024 ರ ಟಿ20 ವಿಶ್ವಕಪ್‌ ನ ಸೂಪರ್ 8 ರ ವೇಳಾಪಟ್ಟಿಯು ಮೂರು ವಿಭಿನ್ನ ದೇಶಗಳಲ್ಲಿ ಮೂರು ಪಂದ್ಯಗಳನ್ನು ಆಡುವ ಮೂಲಕ ಸಾಕಷ್ಟು ಕಠಿಣವಾಗಿದೆ. ಗೆಲ್ಲಲೇಬೇಕಾದ ಪಂದ್ಯಗಳ ನಡುವೆ ಒಂದು ದಿನದ ಗ್ಯಾಪ್ ಇರುವುದರಿಂದ, ಹೆಚ್ಚಿನ ಪ್ರಯಾಣದ ಕಾರಣದಿಂದ ಲಾಜಿಸ್ಟಿಕ್ ತಂಡಗಳಿಗೆ ಕಷ್ಟವಾಗಿದೆ.

ಸೂಪರ್ 8 ವೇಳಾಪಟ್ಟಿಯು ಅವರ ಸಿದ್ಧತೆಗಳ ಮೇಲೆ ಪ್ರಭಾವ ಬೀರಿದೆ ಎಂದು ಇನ್ನೊಬ್ಬ ಅಫ್ಘಾನಿಸ್ತಾನ ತಂಡದ ಸದಸ್ಯ ಹೇಳಿಕೊಂಡಿದ್ದಾರೆ.

“ವಿಮಾನಗಳು ಮತ್ತು ತರಬೇತಿ ವೇಳಾಪಟ್ಟಿಗಳು ತುಂಬಾ ಅನಿಶ್ಚಿತವಾಗಿದೆ. ಕೊನೆಯ ಕ್ಷಣದಲ್ಲಿ ಅದರ ಬಗ್ಗೆ ನಮಗೆ ತಿಳಿಸಲಾಗುತ್ತದೆ. ಕೆರಿಬಿಯನ್‌ ನಲ್ಲಿ ಎಲ್ಲಕ್ಕಿಂತ ದೊಡ್ಡದಾದ ಲಾಜಿಸ್ಟಿಕಲ್ ಸವಾಲುಗಳನ್ನು ಪರಿಗಣಿಸಿ ಸಂಘಟಕರು ತಮ್ಮ ಅತ್ಯುತ್ತಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ” ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next