Advertisement
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಎಲೆರಾಮಪುರ ಗ್ರಾ.ಪಂ.ನ ಡಿ. ನಾಗೇನಹಳ್ಳಿ ಗ್ರಾಮದಲ್ಲಿ ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಕೇಂದ್ರ ಸರಕಾರದ ನಿಕಾ ಯೋಜನೆಯಡಿ ಅಂತರ್ಜಲ ವೃದ್ಧಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ 3ನೇ ರಾಷ್ಟ್ರೀಯ ನೀರು ಅಭಿವೃದ್ಧಿ ಪ್ರಶಸ್ತಿ ಲಭಿಸಿದೆ.
ಡಿ. ನಾಗೇನಹಳ್ಳಿಯ ಸುಮಾರು 400 ಹೆಕ್ಟೇರ್ ಭೂ ಪ್ರದೇಶದಲ್ಲಿ 85 ಚೆಕ್ ಡ್ಯಾಂ, 5 ನಾಲೆ, ಅಣೆಕಟ್ಟು ಸೇರಿದಂತೆ ಹಲವು ಕೃಷಿ ಹೊಂಡ, ಗೋ-ಕಟ್ಟೆ, ಕೆರೆಗಳ ಅಭಿವೃದ್ಧಿ ಮಾಡಲಾಗಿದೆ. ಜತೆಗೆ ಒಣ ಬೇಸಾಯ ತೋಟಗಾರಿಕೆಗೆ ಒತ್ತು ನೀಡಲಾಗಿದೆ. ಇದಲ್ಲದೆ ಅರಣ್ಯೀಕರಣಕ್ಕೆ ಒತ್ತು ನೀಡಿದ್ದು, ಹಣ್ಣಿನ ಗಿಡಗಳನ್ನು ಬೆಳೆಸಿ, ನೀರಿನ ಮೂಲ ಹೆಚ್ಚಿಸಿ ಪ್ರಾಣಿ ಪಕ್ಷಿಗಳು ಮತ್ತು ಜಾನುವಾರುಗಳಿಗೆ ಆಶ್ರಯ ಕಲ್ಪಿಸ ಲಾಗಿದೆ. ಅಭಿವೃದ್ಧಿ ಕಾಮಗಾರಿ ಗಳಿಂದಾಗಿ ಈ ಭಾಗದಲ್ಲಿ ಫಲವತ್ತತೆ ಹೆಚ್ಚಿ ಕೃಷಿಗೆ ಪೂರಕ ವಾತಾವರಣ ಉಂಟಾಗಿದೆ. ಮಣ್ಣು ಸವಕಳಿ ತಪ್ಪಿಸಲು ಮತ್ತು ಮಳೆ
ನೀರು ಇಂಗಿಸಲು ಬದುಗಳ ನಿರ್ಮಾಣ, ಬರ ನಿರೋಧಕ ತಳಿಗಳಾದ ರಾಗಿ ಎಂಎಲ್ 365, ಎರೋಬಿಕ್ ಭತ್ತ, ಕಡಿಮೆ ಅವಧಿಯ ತೊಗರಿ ಬೆಳೆಗೆ ಆದ್ಯತೆ ನೀಡಲಾಗಿದೆ.
Related Articles
Advertisement
ಇದನ್ನೂ ಓದಿ:ನಿಯಮ ಜಾರಿ ಯಾರಿಗೂ ತೊಂದರೆ ಮಾಡುವುದ್ದಲ್ಲ
ಎಲೆರಾಂಪುರ ಗ್ರಾ.ಪಂ.ನಲ್ಲಿ ನಡೆ ದಿರುವ ಕಾಮಗಾರಿಗಳಿಂದಾಗಿ ಈ ಭಾಗದ ಬೋರ್ ವೆಲ್‌ಗಳಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಇದನ್ನೆಲ್ಲಾ ಪರಿಗಣಿಸಿರುವ ಕೇಂದ್ರ ಸರಕಾರ, ಎಲೆರಾಂಪುರ ಗ್ರಾ.ಪಂ.ಗೆ ಉತ್ತಮ ಪ್ರಶಸ್ತಿ ಜತೆಗೆ 3 ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದು, ಅದರಲ್ಲಿ 1.50 ಲಕ್ಷ ಗ್ರಾ.ಪಂ.ಗೆ, 1.50 ಲಕ್ಷ ರೂ. ಹಿರೇಹಳ್ಳಿಗೆ ನೀಡಲಾಗಿದೆ.
ಎಲೆರಾಂಪುರ ಗ್ರಾ.ಪಂ. ವ್ಯಾಪ್ತಿಯ ಡಿ. ನಾಗೇನಹಳ್ಳಿ ಯಲ್ಲಿ ಗ್ರಾ.ಪಂ. ಮತ್ತು ಕೆವಿಕೆ ಸೇರಿ ಮಾಡಿರುವ ಅಭಿವೃದ್ಧಿ ಕಾರ್ಯಕ್ಕೆ ಕೇಂದ್ರ ಸರಕಾರದ ಪ್ರಶಸ್ತಿ ಲಭಿ ಸಿರುವುದು ಸಂತಸ ತಂದಿದೆ. ಇದು ಇತರೆ ಪಂಚಾಯ್ತಿಗಳಿಗೆ ಮಾದರಿಯಾಗಲಿದೆ.– ಡಾ| ಕೆ. ವಿದ್ಯಾಕುಮಾರಿ, ಸಿಇಒ, ತುಮಕೂರು ಜಿ.ಪಂ.