Advertisement
“ಕುಮಾರಸ್ವಾಮಿ ಬಗ್ಗೆ “ಭೂಮಿಪುತ್ರ’ ಎಂಬ ಸಿನಿಮಾ ಬರುತ್ತಿದೆ. ಆ ಭೂಮಿಪುತ್ರನ ನಿಜವಾದ ಜನಕ ಯಡಿಯೂರಪ್ಪ. ಇಪ್ಪತ್ತು ತಿಂಗಳು ಮುಖ್ಯಮಂತ್ರಿಗಿರಿ ಮಾಡಿಕೊಂಡು ಆಡಳಿತ ನಡೆಸಿದ ಮಾತ್ರಕ್ಕೆ ಕುಮಾರಸ್ವಾಮಿ ಭೂಮಿಪುತ್ರನಾಗುವುದಾದರೆ ನಲವತ್ತು ವರ್ಷ ಹೋರಾಟ ಮಾಡಿಕೊಂಡು ಬಂದಿರುವ, ಇಳಿವಯಸ್ಸಿನಲ್ಲೂ ಪರಿಶ್ರಮದರಾಜಕಾರಣ ಮಾಡುತ್ತಿರುವ ಯಡಿಯೂರಪ್ಪ ಬಗ್ಗೆ ಸಿನಿಮಾ ಮಾಡಲೇಬೇಕು ಎಂಬ ಹಠಕ್ಕೆ ಬಿಜೆಪಿ ಕಾರ್ಯಕರ್ತರು ಬಿದ್ದಿದ್ದಾರೆ’ ಎಂದು ಶುಕ್ರವಾರ ಪ್ರವಾಸಿಮಂದಿರದಲ್ಲಿ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಸುದ್ದಿಗಾರರಿಗೆ ತಿಳಿಸಿದರು.
ಕೃಪಾಶೀರ್ವಾದದಿಂದ ಮುಖ್ಯಮಂತ್ರಿ ಹುದ್ದೆಗೇರಿದ ಕುಮಾರಸ್ವಾಮಿ ಯಾವ ರೀತಿ ವಂಚನೆ ಮಾಡಿದರು. ಅವರ ಅವಕಾಶವಾದಿ ರಾಜಕಾರಣ ಹೇಗಿರುತ್ತೆ ಎನ್ನುವುದನ್ನು ನಮ್ಮ ಚಿತ್ರದಲ್ಲಿ ತೋರಿಸೋಣ ಎಂದು ನನ್ನ ಬೆನ್ನು ಹತ್ತಿದ್ದಾರೆ’ ಎಂದು ಹೇಳಿದರು. “ನಾನೇ ಈ ಚಿತ್ರವನ್ನು ನಿರ್ದೇಶಿಸಬೇಕೆಂಬ ಕಾರ್ಯಕರ್ತರ ಹಠಕ್ಕೆ ಒಂದು ಕಾರಣವೂ ಇದೆ.
ಚಿತ್ರದಲ್ಲಿ ಬರುವ ಪಾತ್ರಗಳನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ದೇವೇಗೌಡ, ಕುಮಾರಸ್ವಾಮಿ, ಿ.ಕೆ.ಶಿವಕುಮಾರ್‌ರನ್ನು ಬಿಟ್ಟು ರಾಜಕಾರಣ ನೋಡಲಿಕ್ಕೆ ಸಾಧ್ಯವಿಲ್ಲ. ಅವೆಲ್ಲವನ್ನೂ ಚಿತ್ರದಲ್ಲಿ ತೋರಿಸಲಾಗುವುದು’ ಎಂದು ಹೇಳಿದರು. “ಮುಖ್ಯವಾಗಿ ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣ ಎಂಥದ್ದು ಎನ್ನುವುದನ್ನು ತೋರಿಸಬೇಕಿದೆ.
ಪಕ್ಷ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ನಿಂದಲೂ ಲಾಭ ಪಡೆಯುತ್ತಾರೆ. ಆನಂತರ ಬಿಜೆಪಿ ಸೇರಿಕೊಂಡು ಮುಖ್ಯಮಂತ್ರಿನೂ ಆಗುತ್ತಾರೆ. ಅದಕ್ಕೆ ಅವರು “ಭೂಮಿಪುತ್ರ’ ಆದರು. ಈಗ ತಯಾರಾಗುತ್ತಿರುವ ಭೂಮಿಪುತ್ರದಲ್ಲಿ ನೈಜ ಚಿತ್ರಣ ಸಿಗುವುದಿಲ್ಲ.
Related Articles
Advertisement