Advertisement
ಬೆಳಗ್ಗೆ ಗಣಪತಿ ಹವನ, ಚಂಡಿಕಾ ಹೋಮ, ಪಟ್ಟದ ದೇವರಿಗೆ ಪೂಜೆ ಜರಗಿತು. ಕಳೆದ ಸೋಮವಾರ ಕಾಂಚಿ ಜಗದ್ಗುರು ಪೀಠದಲ್ಲಿ ನಡೆದ ಸಮಾರಂಭದಲ್ಲಿ ಭಾರತೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿಯವರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರಿಗೆ ವಿಧ್ಯುಕ್ತವಾಗಿ ಸನ್ಯಾಸ ದೀಕ್ಷೆ ನೀಡಿದ್ದರು. ಶುಭ ಮುಹೂರ್ತ ದಲ್ಲಿ ವಿವಿಧ ಅಭಿಷೇಕಗಳ ಬಳಿಕ ಚಿನ್ನದ ಕಿರೀಟ ಧಾರಣೆಯೊಂದಿಗೆ ಪೀಠಾರೋಹಣ ನಡೆಯಿತು.
ಸ್ವಾಮೀಜಿ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ, ಪೇಜಾವರ ಮಠ ಸಹಿತ ವಿವಿಧ ಮಠ ಸಂಸ್ಥಾನಗಳ ವತಿಯಿಂದ ಪಟ್ಟದ ಗೌರವ ಸಮರ್ಪಣೆಯಾದವು. ಕರ್ನಾಟಕ ಸರಕಾರದ ಪರವಾಗಿ ಮುಜರಾಯಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅವರ ಶುಭ ಸಂದೇಶವನ್ನು ಅರ್ಪಿಸಿದರು. ಕೇಂದ್ರ ಸರಕಾರದ ಪರವಾಗಿ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ.ವಿ. ಸದಾನಂದ ಗೌಡ, ಸಂಸದೀಯ ವ್ಯವಹಾರ ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಷಿ ಅವರು ಕಳುಹಿಸಿದ ಶುಭ ಸಂದೇಶ ಪತ್ರಗಳನ್ನೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಸ್ತಾಂತರಿಸಿದರು. ವಿಹಿಂಪ ರಾಷ್ಟ್ರೀಯ ಉಪಾಧ್ಯಕ್ಷ ಜೀವೇಶ್ವರ ಮಿಶ್ರಾ ಅವರ ಸಂದೇಶವನ್ನು ಪೇಜಾವರ ಮಠದ ದಿವಾನ ಎಂ. ರಘುರಾಮಾಚಾರ್ಯರು ಸಲ್ಲಿಸಿದರು. ಪೇಜಾವರ ಮಠದ ಸಿಇಒ ಸುಬ್ರಹ್ಮಣ್ಯ ಭಟ್, ಎಸ್.ವಿ. ಭಟ್, ವಾಸುದೇವ ಭಟ್ ಪೆರಂಪಳ್ಳಿ ಜತೆಯಲ್ಲಿದ್ದರು.
Related Articles
ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ
ದ್ದರು. ತೃಶ್ಶೂರ್ ಮೂಲ ಮಠದ ಪ್ರತಿನಿಧಿಯಾಗಿ ಶ್ರೀಪರಮೇಶ್ವರ ಬ್ರಹ್ಮಾನಂದತೀರ್ಥ ಸ್ವಾಮೀಜಿ, ಕಾಸರಗೋಡು ಚಿನ್ಮಯ ಮಿಷನ್‌ನ
ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ, ಕಟೀಲು ಶ್ರೀ ಕ್ಷೇತ್ರದ ಶ್ರೀ ಕಮಲಾದೇವಿ ಆಸ್ರಣ್ಣ, ಶ್ರೀ ಹರಿನಾರಾಯಣ ಆಸ್ರಣ್ಣ, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,
ಪೀಠಾರೋಹಣ ಸಮಿತಿ ಗೌರವಾಧ್ಯಕ್ಷ ಟಿ. ಶಾಮ್ ಭಟ್, ಕೊಲ್ಲೂರು ದೇವಸ್ಥಾನದ ನರಸಿಂಹ ಅಡಿಗ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು,
ಕರ್ಣಾಟಕ ಬ್ಯಾಂಕ್ ಮುಖ್ಯಸ್ಥ ಮಹಾಬಲೇಶ್ವರ ಭಟ್, ನ್ಯಾಯವಾದಿ ಕೆ. ಶ್ರೀಕಾಂತ್ ಸಹಿತ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
Advertisement
ಏಳು ಶತಮಾನಗಳ ಇತಿಹಾಸವುಳ್ಳ ಮಠಏಳು ಶತಮಾನಗಳಿಗಿಂತಲೂ ಹೆಚ್ಚು ಪ್ರಾಚೀನ ಇತಿಹಾಸವುಳ್ಳ ಶ್ರೀ ಎಡನೀರು ಮಠ ಭಾಗವತ ಪರಂಪರೆಯ ಅಪೂರ್ವ ಧಾರ್ಮಿಕ ಕೇಂದ್ರ. ಕಾಸರಗೋಡು ಜಿಲ್ಲೆಯ ಮಧುವಾಹಿನೀ ನದೀ ತಟದಲ್ಲಿರುವ ಈ ಪುಣ್ಯಸ್ಥಳ ಶ್ರೀ ಶಂಕರಾಚಾರ್ಯರ ಮುಖ್ಯ ಶಿಷ್ಯರಲ್ಲೊಬ್ಬರಾದ ಶ್ರೀ ತೋಟಕಾಚಾರ್ಯರ ಪರಂಪರೆಯ ಮಠ. ಅದ್ವೈತ ಪಂಥವನ್ನನುಸರಿಸುವ ಸ್ಮಾರ್ತ-ಭಾಗವತ ಸಂಪ್ರದಾಯದ ಮಠವಾಗಿದೆ. ಶ್ರೀ ಮಠದ ರಾಧ್ಯಮೂರ್ತಿ ದೇವರು ಗಳೆಂದರೆ ಶೀ ದಕ್ಷಿಣಾಮೂರ್ತಿ ಮತ್ತು ಗೋಪಾಲಕೃಷ್ಣ.
ಎಡನೀರು ಮಠದ ಮೂಲ ಮಠವು ತೃಶ್ಶೂರ್ ಹಾಗೂ ಶಾಖಾ ಮಠವು ತ್ರಿಚಂಬರದಲ್ಲಿದೆ. ಶ್ರೀ ಮಠದ ಪೀಠಾಧಿಪತಿಗಳಾಗುವ ಸ್ವಾಮಿಗಳ ಹೆಸರುಗಳು ನಾಲ್ಕು ಹೆಸರಿನಲ್ಲಿ ಪುನರ್ನಾಮಕರಣವಾಗುತ್ತವೆ.
1. ಶ್ರೀ ಕೇಶವಾನಂದ ಭಾರತೀ ಶ್ರೀಪಾದರು
2. ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು
3. ಶ್ರೀ ಬಾಲಕೃಷ್ಣಾನಂದ ಭಾರತೀ ಶ್ರೀಪಾದರು
4. ಶ್ರೀ ಈಶ್ವರಾನಂದ ಭಾರತೀ ಶ್ರೀಪಾದರು
ಶ್ರೀ ಮಠದಲ್ಲಿ ಒಟ್ಟು 13 ಸಮಾಧಿಗಳಿವೆ. ಶ್ರೀ ಕೇಶವಾನಂದ ಭಾರತೀ ಶ್ರೀಪಾದರು 1960ರಿಂದ 2020ರ ತನಕ ಪೀಠಾಧಿಪತಿಗಳಾಗಿದ್ದು ದೇಶ ವಿದೇಶಗಳಲ್ಲಿ ಶ್ರೀ ಎಡನೀರು ಮಠವನ್ನು ಅತ್ಯಂತ ಉನ್ನತಿಗೆ ಕೊಂಡೊಯ್ದವರು. ದೇಶದ ನ್ಯಾಯಾಂಗ ಇತಿಹಾಸದಲ್ಲಿ ಶ್ರೀ ಕೇಶವಾನಂದ ಭಾರತೀ ಅವರ ಹೆಸರು ಚಿರಸ್ಥಾಯಿ. ಮೂಲಭೂತ ಹಕ್ಕುಗಳ ವಿಚಾರವಾಗಿ ಅವರು ಮಂಡಿಸಿದ ಮೊಕದ್ದಮೆ ಇಂದಿಗೂ ಕಾನೂನು ವಿದ್ಯಾರ್ಥಿಗಳ ಪಠ್ಯವಾಗಿ ಕಲಿಯುತ್ತಿದ್ದಾರೆ.