Advertisement
ಜಿಲ್ಲೆಯಲ್ಲಿ ಭೀರಕ ಪ್ರವಾಹ ಮತ್ತು ಮಳೆಯಿಂದ 88 ಸಾವಿರ ರೈತರ ಸುಮಾರು77 ಸಾವಿರ ಹೆಕ್ಟೇರ್‌ನಷ್ಟು ಅಂದಾಜು 69ಕೋಟಿ ರೂ. ಬೆಳೆ ಹಾನಿಯಾಗಿದೆ. ಸರ್ಕಾರನವೆಂಬರ್ ತಿಂಗಳ 23ರ ವರೆಗೆ 5,300 ರೈತರಖಾತೆಗಳಿಗೆ ಕೇವಲ 3.52 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿರುವ ಕುರಿತು ಜಿಲ್ಲಾ ಉಸ್ತುವಾರಿಸಚಿವರ ಸಭೆಗೆ ಜಿಲ್ಲಾಡಳಿತ ಮಾಹಿತಿ ನೀಡಿತ್ತು. ಜಿಲ್ಲೆಯ ರೈತರಿಗೆ ಹಾನಿಯ ಪರಿಹಾರವೇ ಸಮರ್ಪಕವಾಗಿ ಬಿಡುಗಡೆಯಾಗಿಲ್ಲ ಎನ್ನುವುದು ರೈತರ ಗೋಳು. ಇದರ ಮಧ್ಯೆಯೇ ಅಲ್ಪಸ್ವಲ್ಪ ಉಳಿದ ಹತ್ತಿ ಬೆಳೆಯನ್ನು ಮಾರಾಟ ಮಾಡಿರುವ ರೈತರ ಕೈಗೆ ಹಣ ಬಂದು ಸೇರುವಷ್ಟರಲ್ಲಿಯೇ ಗ್ರಾಪಂ ಚುನಾವಣೆ ಅಖಾಡ ಸಿದ್ಧಗೊಂಡಿದೆ. ಗ್ರಾಮೀಣ ಕಟ್ಟೆಗಳಲ್ಲೆಲ್ಲಾ ರಾಜಕೀಯದ್ದೇ ಮಾತು ಆರಂಭವಾಗಿದೆ.
Related Articles
Advertisement
ಮೂರು ಗ್ರಾಪಂಗಿಲ್ಲ ಚುನಾವಣೆ :
ಜಿಲ್ಲೆಯ ಸುರಪುರ ತಾಲೂಕಿನ ಎರಡು ಗ್ರಾಪಂ ಮತ್ತು ಗುರುಮಠಕಲ್ ತಾಲೂಕಿನ ಅನಪುರ ಗ್ರಾಪಂಗೆ ಈ ವರ್ಷ ಚುನಾವಣೆ ನಡೆಯುತ್ತಿಲ್ಲ. ಅನಪೂರ ಗಾಪಂಗೆ ಮೂರು ಗ್ರಾಮಗಳು ಒಳಪಟ್ಟು 14 ಸದಸ್ಯ ಸ್ಥಾನಗಳಿವೆ. 2018ರಲ್ಲಿ ಇಲ್ಲಿ ಚುನಾವಣೆ ನಡೆದಿದೆ. ಇನ್ನು ಅಧಿಕಾರ ಅವಧಿ ಮೂರು ವರ್ಷ ಬಾಕಿಯಿದೆ. ನಸಲವಾಯಿ ಗ್ರಾಮಕ್ಕೆ ಈ ಹಿಂದೆ 8 ಸದಸ್ಯರಿದ್ದರು, ಆದರೆ, ಚುನಾವಣೆ ವೇಳ ಸ್ಥಾನಗಳನ್ನು 6ಕ್ಕೆ ನಿಗದಿ ಮಾಡಿದ್ದರಿಂದ ಆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗಾಗಿಎರಡು ವರ್ಷ ಗ್ರಾಪಂ ಚುನಾವಣೆ ನಡೆದಿರಲಿಲ್ಲ. ಈ ಪಂಚಾಯಿತಿಯ ಅವ ಧಿ 2023ಕ್ಕೆ ಪೂರ್ಣಗೊಳ್ಳಲಿದೆ. ಇನ್ನು ಸುರಪುರ ತಾಲೂಕಿನ ಕರಡಕಲ್ ಗ್ರಾಪಂ ವ್ಯಾಪ್ತಿಗೆ ಎರಡು ಗ್ರಾಮ ಒಳಪಟ್ಟಿವೆ. ಈ ಗ್ರಾಪಂಗೆ ಇನ್ನು ಮೂರು ವರ್ಷ ಅಧಿಕಾರ ಅವಧಿ ಇದೆ.
ಯಕ್ಷಿಂತಿ, ಹಯ್ನಾಳ ಸೇರಿದಂತೆ ಇತರೆ ಪ್ರವಾಹದಿಂದ ರೈತರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಸರ್ಕಾರ ಸರಿಯಾಗಿ ಪರಿಹಾರ ಒದಗಿಸಿಲ್ಲ. ಸಂಕಷ್ಟದ ಮಧ್ಯೆಯೇ ಕೋವಿಡ್ ಆತಂಕವೂ ಮನೆ ಮಾಡಿದೆ. ಇದರ ನಡುವೆ ಚುನಾವಣೆ ಬಂದಿದ್ದು, ರಾಜಕಾರಣಿಗಳು ಗ್ರಾಮಗಳಲ್ಲಿ ಸಭೆ ನಡೆಸುತ್ತಿದ್ದಾರೆ. ಇಷ್ಟೇ ಕಾಳಜಿ ರೈತರ, ಗ್ರಾಮೀಣ ಜನರಕಷ್ಟವನ್ನು ಕೇಳುವುದಕ್ಕೆ ವಹಿಸಬೇಕು. -ಮಲ್ಲಿಕಾರ್ಜುನ ಬಿ., ಹಯ್ನಾಳ ಗ್ರಾಪಂ ಮಾಜಿ ಅಧ್ಯಕ್ಷ
-ಅನೀಲ ಬಸೂದೆ