Advertisement

ವರ್ಷವಿಡೀ ಕದ್ದಾಲಿಕೆ, ಹನಿಟ್ರ್ಯಾಪ್‌ ಸದ್ದು

12:14 AM Dec 31, 2019 | Lakshmi GovindaRaj |

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ರಾಜಕಾರಣಿಗಳ ಹನಿಟ್ರ್ಯಾಪ್‌ ಪ್ರಕರಣ, ಟೆಲಿಫೋನ್‌ ಕದ್ದಾಲಿಕೆ, ಪ್ರಮುಖ ರಾಜಕೀಯ ನಾಯಕರಿಗೆ ಐಟಿ ಶಾಕ್‌, ಐಎಂಎ ವಂಚನೆ ಪ್ರಕರಣದಲ್ಲಿ ಕೇಳಿಬಂದ ಐಪಿಎಸ್‌ ಅಧಿಕಾರಿಗಳ ಹೆಸರು, ಕೆಪಿಎಲ್‌ನಲ್ಲೂ ಕೇಳಿಬಂದ ಫಿಕ್ಸಿಂಗ್‌ ದಂಧೆ, ಅತ್ತ ಆಗಸದಲ್ಲಿ ಲೋಹದ ಹಕ್ಕಿಗಳ ಡಿಕ್ಕಿ ಇತ್ತ ನಿಲುಗಡೆಯಾಗಿದ್ದ ನೂರಾರು ವಾಹನಗಳು ಬೆಂಕಿಗಾಹುತಿ…

Advertisement

ಇಂತಹ ಹುಬ್ಬೇರಿಸುವಂತಹ ಹಲವು ಪ್ರಮುಖ ಘಟನೆಗಳಿಗೆ 2019 ಸಾಕ್ಷಿಯಾಯಿತು. ಇದರಿಂದಾಗಿ ನಗರ ಪೊಲೀಸರಿಗೆ ಸವಾಲಿನ ವರ್ಷವೂ ಆಗಿತ್ತು. ಇದರಲ್ಲಿ ಕೆಲವು ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯೂ ಆದರು. ಗೌರಿ ಹತ್ಯೆ, ಭೂಗತಪಾತಕಿ ಲಕ್ಮಣ್‌ ಕೊಲೆ ಸೇರಿದಂತೆ ಕೆಲವು ಹಿಂದಿನ ಪ್ರಕರಣಗಳನ್ನು ಭೇದಿಸಿದ್ದೂ ಇದೇ ಅವಧಿಯಲ್ಲಿ. ಈ ಮೂಲಕ ಮೆಚ್ಚುಗೆಗೂ ಪೊಲೀಸರು ಪಾತ್ರವಾದರು. ಆ ಆಗು-ಹೋಗುಗಳ ಒಂದು ನೋಟ ಇಲ್ಲಿದೆ.

ಫೆಬ್ರವರಿ: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆದ ಏರೋಇಂಡಿಯಾ ಶೋನಲ್ಲಿ ಸೂರ್ಯ ಕಿರಣ್‌ ಜೆಟ್‌ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ಒಬ್ಬ ಪೈಲೆಟ್‌ ಸಾವು. ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ವೀಕ್ಷಕರ 300 ಕಾರುಗಳು ಬೆಂಕಿಗಾಹುತಿ.

ಮಾ.7: ಬೆಂಗಳೂರು ಭೂಗತ ಪಾತಕಿ ಲಕ್ಷ್ಮಣ ಹತ್ಯೆ. ಸ್ನೇಹಿತ ಮೂಟೆ ಹರೀಶ್‌ ಪುತ್ರಿ ವರ್ಷಿಣಿ ಹಾಗೂ ಆಕೆಯ ಪ್ರೀಯಕರ ರೂಪೇಶ್‌ ಜತೆ ಸಂಚು ರೂಪಿಸಿ ಹತ್ಯೆ. ಪ್ರಕರಣ ಸಂಬಂಧ ಎಂಟು ಮಂದಿ ಸೆರೆ.

ಏಪ್ರಿಲ್‌: ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು, ಸಚಿವರ ಮನೆಗಳ ಮೇಲೆ ಐಟಿ ದಾಳಿ ಖಂಡಿಸಿ ಮೈತ್ರಿ ಸರ್ಕಾರದ ಪ್ರತಿಭಟನೆ. ಅಂದಿನ ಸಿಎಂ, ಮಾಜಿ ಸಿಎಂ ಸೇರಿ 18 ಮಂದಿ ವಿರುದ್ಧ ಪ್ರಕರಣ ದಾಖಲು.

Advertisement

ಮೇ: ಗೌರಿ ಹತ್ಯೆ ಪ್ರಕರಣ ಬೇಧಿಸಿದ ಎಸ್‌ಐಟಿ. ಈ ಸಂಬಂಧ ಸರ್ಕಾರ 25 ಲಕ್ಷ ರೂ. ಬಹುಮಾನ ಘೋಷಣೆ.

ಜೂ.10: ಐಎಂಎ ವಂಚನೆ ಪ್ರಕರಣ. ಸುಮಾರು 45 ಸಾವಿರಕ್ಕೂ ಹೆಚ್ಚು ಮಂದಿಗೆ ವಂಚನೆ. ಐಎಂಎ ಸಂಸ್ಥೆಯ ಮನ್ಸೂರ್‌ ಖಾನ್‌ ಪರಾರಿ. ಅಧಿಕಾರಿಗಳು, ರಾಜಕೀಯ ನಾಯಕರೂ ಶಾಮೀಲು ಆರೋಪ. ತನಿಖಾ ಇನ್ನೂ ಮುಂದುವರಿದಿದೆ.

ಜೂ.17: ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ವರ್ಗಾವಣೆ. ಆ ಸ್ಥಾನಕ್ಕೆ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ನೇಮಕ.

ಜುಲೈ: ಕೇಂದ್ರ ಮಾಜಿ ಸಚಿವ ಎಸ್‌.ಎಂ. ಕೃಷ್ಣ ಅಳಿಯ ಹಾಗೂ ಕಾಫಿ ಡೇ ಮಾಲಿಕ ಸಿದ್ದಾರ್ಥ್ ಸಾವು.

ಆಗಸ್ಟ್‌: ಕೇವಲ 48 ದಿನಗಳ ಅಂತರದಲ್ಲಿ ಇಬ್ಬರು ನಗರ ಪೊಲೀಸ್‌ ಆಯುಕ್ತರ ವರ್ಗಾವಣೆ. ಬೆಂಗಳೂರು ಪೊಲೀಸ್‌ ಇತಿಹಾಸದಲ್ಲೇ ಇದು ಮೊದಲು.

ಆಗಸ್ಟ್‌: ಫೋನ್‌ ಕದ್ದಾಲಿಕೆ ರಾಷ್ಟ್ರೀಯ ಮಟ್ಟದಲ್ಲೂ ಹೆಚ್ಚು ಚರ್ಚೆಗೆ ಗ್ರಾಸವಾಯಿತು. ಶಾಸಕರನ್ನು ಉಳಿಸಿಕೊಳ್ಳಲು ಕದ್ದಾಲಿಕೆಗೆ ಸ್ವತಃ ಮೈತ್ರಿ ಸರ್ಕಾರ ಸೂಚಿಸಿತ್ತು ಎಂದು ಹೇಳಲಾಗಿತ್ತು. ಇದೇ ವೇಳೆ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಪೊಲೀಸ್‌ ಆಯುಕ್ತರ ಹುದ್ದೆಗಾಗಿ ರಾಜಕೀಯ ಮುಖಂಡ ಹಾಗೂ ಅಪರಾಧ ಹಿನ್ನೆಲೆವುಳ್ಳ ವ್ಯಕ್ತಿ ಜತೆ ಸಂಭಾಷಣೆ ನಡೆಸಿದ್ದರು ಎಂಬ ಆಡಿಯೋ ವೈರಲ್‌.

ಸೆಪ್ಟೆಂಬರ್‌: ಕರ್ನಾಟಕ ಪ್ರೀಮಿಯರ್‌ ಲೀಗ್‌ ಪಂದ್ಯಾವಳಿಯಲ್ಲೂ ಬೆಟ್ಟಿಂಗ್‌ ಹಾಗೂ ಫಿಕ್ಸಿಂಗ್‌ ದಂಧೆ. ಬೆಳಗಾವಿ ಪ್ಯಾಂಥರ್ಸ್‌ ಮಾಲಿಕ ಎ. ಅಲಿ ಬಂಧನ. ಪ್ರಕರಣ ಸಂಬಂಧ ಹತ್ತಾರು ಆಟಗಾರರ ವಿಚಾರಣೆ. ಆಟಗಾರ ಸಿ.ಎಂ.ಗೌತಮ್‌, ಡ್ರಮರ್‌, ಬೌಲಿಂಗ್‌ ಕೋಚ್‌ ಮತ್ತಿತರರ ಬಂಧನ.

ನವೆಂಬರ್‌: ಹನಿಟ್ರ್ಯಾಪ್‌ನಲ್ಲಿ ರಾಜ್ಯದ ಪ್ರಭಾವಿ ಶಾಸಕರು ಹಾಗೂ ರಾಜಕಾರಣಿಗಳು.

ಆದಾಯ ತೆರಿಗೆ-ಜಾರಿ ನಿರ್ದೇಶನಾಲಯ
ಜನವರಿ: ವರ್ಷದ ಆರಂಭದಲ್ಲೇ ಐಟಿ ಅಧಿಕಾರಿಗಳಿಂದ ಸ್ಯಾಂಡಲ್‌ವುಡ್‌ ನಟ, ನಿರ್ಮಾಪಕರ ನಿವಾಸದ ಮೇಲೆ ದಾಳಿ ನಡೆಸಿ 109 ಕೋಟಿ ರೂ. ಅಕ್ರಮ ಆಸ್ತಿ, 2.85 ಕೋಟಿ ರೂ. ಮತ್ತು 25.3 ಕೆಜಿ ಚಿನ್ನಾಭರಣ ಪತ್ತೆ.

ಏಪ್ರಿಲ್‌: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಆಪ್ತರು, ಗುತ್ತಿಗೆದಾರರು ಹಾಗೂ ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ಐಟಿ ದಾಳಿ. ಅಲ್ಲದೆ, ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಸೇರಿದ್ದು ಎನ್ನಲಾದ 75 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಜಪ್ತಿ.

ಏಪ್ರಿಲ್‌: ಜಯನಗರದ ಕೆಫೆ ಕಾಫಿ ಡೇಯಲ್ಲಿ ಐಟಿ ಅಧಿಕಾರಿ ನಾಗೇಶ್‌ ಎಂಬಾತ ಗುತ್ತಿಗೆದಾರನ ಪರ ವರದಿ ನೀಡಲು ಲಂಚ ಸ್ವೀಕರಿಸುತ್ತಿದ್ದಾಗ ದಿಢೀರ್‌ ದಾಳಿ ನಡೆಸಿದ ಸಿಬಿಐ ತಂಡ. ಆರೋಪಿ ವಶಕ್ಕೆ.

ಸೆಪ್ಟೆಂಬರ್‌: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಇಡಿ ಅಧಿಕಾರಿಗಳಿಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಬಂಧನ. ಡಿಕೆಶಿಗೆ ಸುಮಾರು 50 ದಿನಗಳ ಕಾಲ ಜೈಲು.

ಅ.11: ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹಾಗೂ ಕಾಂಗ್ರೆಸ್‌ ಹಿರಿಯ ಮುಖಂಡ ಆರ್‌.ಎಲ್‌. ಜಾಲಪ್ಪ ಅವರ ನಿವಾಸ, ಕಚೇರಿ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ.

ಅ.13: ಐಟಿ ಅಧಿಕಾರಿಗಳ ವಿರುದ್ಧ ಕಿರುಕುಳ ಆರೋಪ ಮಾಡಿ, ಆತ್ಮಹತ್ಯೆಗೆ ಶರಣಾದ ಪರಮೇಶ್ವರ ಆಪ್ತ ರಮೇಶ್‌.

Advertisement

Udayavani is now on Telegram. Click here to join our channel and stay updated with the latest news.

Next