Advertisement

Yatra 2 ರಿಲೀಸ್: ಥಿಯೇಟರ್‌ನಲ್ಲಿ ಪವನ್ ಕಲ್ಯಾಣ್- ವೈಎಸ್ ಜಗನ್ ಅಭಿಮಾನಿಗಳ ನಡುವೆ ಮಾರಾಮಾರಿ

06:25 PM Feb 08, 2024 | Team Udayavani |

ಹೈದರಾಬಾದ್: ಟಾಲಿವುಡ್‌ ನಲ್ಲಿ ಪ್ರೇಕ್ಷಕರ ಮನಗೆದ್ದು, ರಾಜಕೀಯವಾಗಿಯೂ ಸದ್ದು ಮಾಡಿದ್ದ ʼಯಾತ್ರಾʼ ಸಿನಿಮಾದ ಸೀಕ್ವೆಲ್‌ ಗುರುವಾರ(ಫೆ.8 ರಂದು) ರಿಲೀಸ್ ಆಗಿದೆ. ನಿರೀಕ್ಷೆಯಂತೆ ಆಂಧ್ರದ ಹಲವು ಕಡೆ ಸಿನಿಮಾಕ್ಕೆ ಭರ್ಜರಿ ಆರಂಭ ಸಿಕ್ಕಿದೆ.

Advertisement

ಸಿನಿಮಾ ರಿಲೀಸ್‌ ಆದ ಬೆನ್ನಲ್ಲೇ ಥಿಯೇಟರ್‌ ವೊಂದರಲ್ಲಿ ಅಭಿಮಾನಿಗಳ ನಡುವೆ ವಾಗ್ವಾದ ಉಂಟಾದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನಟ ಕಂ ರಾಜಕಾರಣಿ ಪವನ್‌ ಕಲ್ಯಾಣ್‌ ಹಾಗೂ ಆಂಧ್ರ ಸಿಎಂ ವೈಎಸ್‌ ಜಗನ್‌ ಮೋಹನ್‌ ರೆಡ್ಡಿ ಅವರ ಅಭಿಮಾನಿಗಳ ನಡುವೆ ಈ ಜಗಳ ನಡೆದಿದೆ.

ಹೈದರಾಬಾದ್‌ನ ಪ್ರಸಾದ್ ಥಿಯೇಟರ್‌ನಲ್ಲಿ ಈ ಮಾರಾಮಾರಿ ನಡೆದಿದೆ. ಎರಡೂ ಕಡೆ ಅಭಿಮಾನಿಗಳ ನಡುವೆ ವಾಗ್ವಾದ ಉಂಟಾಗಿದೆ. ಪರಿಣಾಮ ಒಬ್ಬರನ್ನೊಬ್ಬರು ದೂಡಿಕೊಂಡಿದ್ದಾರೆ. ಗಲಾಟೆಗೆ ಏನು ಕಾರಣ ಎನ್ನುವುದು ಇದುವರೆಗೆ ತಿಳಿದು ಬಂದಿಲ್ಲ.

ರಾಜಕೀಯವಾಗಿ ಜಗನ್‌ ಹಾಗೂ ಪವನ್‌ ಕಲ್ಯಾಣ್‌ ನಡುವೆ ಪೈಪೋಟಿ ಇದೆ. ಈ ಎರಡು ನಾಯಕರ ನಡುವಿನ ಪೈಪೋಟಿ ಆಂಧ್ರ ರಾಜಕೀಯದಲ್ಲಿ ಹೊಸದೇನಲ್ಲ.

ಮಹಿ ವಿ ರಾಘವ್ ನಿರ್ದೇಶನದಲ್ಲಿ 2019 ರಲ್ಲಿ ʼಯಾತ್ರಾʼ ಸಿನಿಮಾ ಬಂದಿತ್ತು. ಈ ಸಿನಿಮಾ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಅವರ ಜೀವನವನದ ಕಥೆಯನ್ನೊಳಗೊಂಡಿದೆ. ಈಗ ಬಂದಿರುವ ʼಯಾತ್ರಾ-2ʼ ಸಿನಿಮಾ ಆಂಧ್ರ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಬಯೋಪಿಕ್ ಆಗಿದೆ. ಈ ಸಿನಿಮಾದಲ್ಲಿ ಜೀವಾ ಮತ್ತು ಮಮ್ಮುಟ್ಟಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

Advertisement

ಈ ಎರಡೂ ಸಿನಿಮಾಗಳು ಆಂಧ್ರಪ್ರದೇಶದ ರಾಜಕೀಯದಲ್ಲಿನ ಈ ಪ್ರಭಾವಿ ವ್ಯಕ್ತಿಗಳ ರಾಜಕೀಯ ಪ್ರಯಾಣ ಮತ್ತು ಜೀವನದ ಪ್ರಮುಖ ಘಟನೆಗಳನ್ನು ಒಳಗೊಂಡಿದ್ದು, ರಾಜಕೀಯವಾಗಿಯೂ ಸದ್ದು ಮಾಡಿದೆ.

ಈ ನಡುವೆ 2012 ರಲ್ಲಿ ತೆರೆಕಂಡು ರಾಜಕೀಯವಾಗಿ ಭಾರೀ ವಿವಾದಕ್ಕೆ ಕಾರಣವಾಗಿದ್ದ, ಪವನ್‌ ಕಲ್ಯಾಣ್‌ ಅವರ ʼಕ್ಯಾಮೆರಾಮ್ಯಾನ್ ಗಂಗತೋ ರಾಂಬಾಬುʼ ಸಿನಿಮಾವನ್ನು ಆಂಧ್ರದ ಕೆಲವಡೆ ಮರು ಬಿಡುಗಡೆ ಮಾಡಲಾಗಿದೆ. ಈ ಸಿನಿಮಾ ಅಂದು ಸಿಎಂ ವೈಎಸ್ ರಾಜಶೇಖರ ರೆಡ್ಡಿ ಅವರ ಅಧಿಕಾರದ ಅವಧಿಯಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಇಲ್ಲಿ ಹೇಳಿದ ಕೆಲ ವಿಚಾರಗಳು ಸಿಎಂ ಅವರಿಗೆ ಅಪಮಾನ ಮಾಡಿದ್ದಂತೆ ಇತ್ತು ಎನ್ನುವ ಕಾರಣಕ್ಕೆ ಸಿನಿಮಾ ಬ್ಯಾನ್‌ ಗೆ ಕೂಗು ಕೇಳಿ ಬಂದಿತ್ತು. ಕೊನೆಗೂ ಒಂದಷ್ಟು ಸೀನ್‌ ಹಾಗೂ ಡೈಲಾಗ್‌ ಗಳ ಕಡಿತದಿಂದ ಸಿನಿಮಾವನ್ನು ರಿಲೀಸ್‌ ಮಾಡಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next