Advertisement

ಬಿಎಸ್‌ವೈ ವಿರುದ್ಧ ಸಿಡಿದೆದ್ದ ಯತ್ನಾಳ್

07:11 PM Jan 14, 2021 | Team Udayavani |

ವಿಜಯಪುರ: ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಎರಡನೇ ಬಾರಿಯ ಸಂಪುಟ ವಿಸ್ತರಣೆಯಲ್ಲೂ ಆಡಳಿತ ಬಿಜೆಪಿಯ ಮೂವರು ಶಾಸಕರಿದ್ದರೂ ಒಬ್ಬರಿಗೂ ಅವಕಾಶ ಸಿಗದೇ ಬಸವನಾಡಿಗೆ ಅನ್ಯಾಯವಾಗಿದೆ. ಈ ಅನ್ಯಾಯದ ವಿರುದ್ಧ ಸಚಿವಾಕಾಂಕ್ಷಿಯಾಗಿದ್ದ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಬಂಡಾಯ ಸಾರಿದ್ದು, ಮುಖ್ಯಮಂತ್ರಿ ವಿರುದ್ಧ ಸಿಡಿ ಬ್ಲ್ಯಾಕ್ ಮೇಲ್ ಎಂಬ ನಿಗೂಢ ಬಾಂಬ್‌ ಸಿಡಿಸಿ ರೆಬೆಲ್‌ ಸ್ಟಾರ್‌ ಆಗಿ ಸಿಡಿದೆದ್ದಿದ್ದಾರೆ.

Advertisement

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಮೂವರು ಶಾಸಕರಲ್ಲಿ ಬಬಲೇಶ್ವರ ಕ್ಷೇತ್ರದ ಎಂ.ಬಿ. ಪಾಟೀಲ ಗೃಹ ಹಾಗೂ ಬಸವನಬಾಗೇವಾಡಿ ಕ್ಷೇತ್ರದ ಶಿವಾನಂದ ಪಾಟೀಲ ಆರೋಗ್ಯ ಸಚಿವರಾಗಿದ್ದರು. ಇಂಡಿ ಶಾಸಕ ಯಶವಂತರಾಯಗೌಡ ಅವರಿಗೆ ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿತ್ತು. ಕಾಂಗ್ರೆಸ್‌ ಮೈತ್ರಿಯೊಂದಿಗೆ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಪಾಳೆಯದಿಂದ ಸಿಂದಗಿ ಕ್ಷೇತ್ರದ ಜೆಡಿಎಸ್‌ ಹಿರಿಯ ಶಾಸಕ ಎಂ.ಸಿ. ಮನಗೂಳಿ ಅವರು ಆರೋಗ್ಯ ಸಚಿವರಾಗಿದ್ದರೆ, ನಾಗಠಾಣ ಕ್ಷೇತ್ರದ ಜೆಡಿಎಸ್‌ ಶಾಸಕ ದೇವಾನಂದ ಚವ್ಹಾಣ ಮುಖ್ಯಮಂತ್ರಿಗಳ ಶಿಕ್ಷಣ ಇಲಾಖೆ ಸಂಸದೀಯ ರಾಜಕೀಯ ಕಾರ್ಯದರ್ಶಿ ಆಗಿದ್ದರು. ಅಷ್ಟರ ಮಟ್ಟಿಗೆ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ವಿಜಯಪುರ ಜಿಲ್ಲೆಗೆ ಸಮೃದ್ಧ ಅಧಿಕಾರ ಸಿಕ್ಕಿತ್ತು.

ಆದರೆ ಆಪರೇಷನ್‌ ಕಮಲದಿಂದಾಗಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಲೇ ಜಿಲ್ಲೆಗೆ ಅಧಿಕಾರದ ಶುಕ್ರದೆಸೆಗೆ ಬದಲಾಗಿ ವಕ್ರದೆಸೆ ಆರಂಭಗೊಂಡಿತ್ತು. ವಿಜಯಪುರ ನಗರ ಕ್ಷೇತ್ರದಿಂದ ಬಸನಗೌಡ ಪಾಟೀಲ ಯತ್ನಾಳ ಕೇಂದ್ರದಲ್ಲಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದು, ಎರಡು ಬಾರಿ ವಿಧಾನಸಭೆಗೆ, ಒಂದು ಬಾರಿ ಮೇಲ್ಮನೆಗೆ ಆಯ್ಕೆಯಾಗಿರುವ ಅನುಭವಿಗಳು. ಮುದ್ದೇಬಿಹಾಳ ಕ್ಷೇತ್ರದ ಎ.ಎಸ್‌. ಪಾಟೀಲ ನಡಹಳ್ಳಿ ಮೂರು ಬಾರಿ ಶಾಸಕರಾದವರು. ದೇವರಹಿಪ್ಪರಗಿ ಕ್ಷೇತ್ರದಿಂದ ಆಯ್ಕೆಯಾಗಿರುವ ಸೋಮನಗೌಡ ಪಾಟೀಲ ಸಾಸನೂರ ಬಿಜೆಪಿಯವರು. ಇಷ್ಟಿದ್ದರೂ ಯಡಿಯೂರಪ್ಪ ಸರ್ಕಾರದ ಸಂಪುಟದಲ್ಲಿ ವಿಜಯಪುರ ಜಿಲ್ಲೆಗೆ ಆದ್ಯತೆ ಸಿಕ್ಕಿಲ್ಲ. ಹೀಗಾಗಿ ಕೆಲ ತಿಂಗಳು ವಿಜಯಪುರ ಜಿಲ್ಲೆಗೆ ಗದಗ ಜಿಲ್ಲೆಯ ಸಿ.ಸಿ. ಪಾಟೀಲ ಉಸ್ತುವಾರಿ ಹೊಂದಿದ್ದರೆ, ಇದೀಗ ಬೆಳಗಾವಿ ಜಿಲ್ಲೆಯ ಶಶಿಕಲಾ ಜೊಲ್ಲೆ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಇದೀಗ ಎರಡನೇ ಬಾರಿ ಸಂಪುಟ ವಿಸ್ತರಣೆ ಆದಾಗಲೂ ಯತ್ನಾಳ ಅವರು ಸಚಿವರಾಗುತ್ತಾರೆ ಎಂದೇ ಜಿಲ್ಲೆಯ ಜನರು ನಿರೀಕ್ಷಿಸಿದ್ದು ಹುಸಿಯಾಗಿದೆ. ತಮ್ಮನ್ನು ಸಚಿವರಾಗಿ ಮಾಡುವ ಮಾತಿರಲಿ ಕ್ಷೇತ್ರಕ್ಕೆ ಸಮ್ಮಿಶ್ರ ಸರ್ಕಾರದಲ್ಲಿ ಬಿಡುಡಗೆ ಮಾಡಿದ್ದ ನೂರಾರು ಕೋಟಿ ರೂ. ಅನುದಾನವನ್ನು ನಮ್ಮದೇ ಪಕ್ಷದ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ತಡೆ ಹಿಡಿದಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಕಳೆದ ಹಲವು ತಿಂಗಳಿಂದ ಕಿಡಿ ಕಾರುತ್ತಲೇ ಬರುತ್ತಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೆಲ್ಲ ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ನೀಡುವಲ್ಲಿ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ದಶಕದ ಹಿಂದೆ ಅಧಿ ಕಾರಕ್ಕೆ ಬಂದಾಗ ಎಸ್‌.ಕೆ. ಬೆಳ್ಳುಬ್ಬಿ ಅವರ ಮೂಲಕ ಜಿಲ್ಲೆಗೆ ಸಚಿವ ಸ್ಥಾನ ನೀಡಿದ್ದರೂ ಕೆಲವೇ ತಿಂಗಳಲ್ಲಿ ಕಿತ್ತುಕೊಂಡಿದ್ದರು. ಈ ಅನ್ಯಾಯದ ವಿರುದ್ಧ ಸಿಡಿದೆದ್ದ ಎಸ್‌.ಕೆ. ಬೆಳ್ಳುಬ್ಬಿ ಹಾಗೂ ಇಂಡಿ ಶಾಸಕರಾಗಿದ್ದ ಸಾರ್ವಭೌಮ ಬಗಲಿ ಅಂದು ಸಿಎಂ ಯಡಿಯೂರಪ್ಪ ವಿರುದ್ಧ ಬಂಡೆದಿದ್ದ ಬಳ್ಳಾರಿ ರೆಡ್ಡಿ ಸಹೋದರರ ಬಳಗದಲ್ಲಿ ಗುರುತಿಸಿಕೊಂಡು ಹೈದರಾಬಾದ್‌ ರೆಸಾರ್ಟ್‌ ಸೇರಿಕೊಂಡಿದ್ದರು.

ಇದರಿಂದಾಗಿ ಎಸ್‌.ಕೆ. ಬೆಳ್ಳುಬ್ಬಿ ಹಾಗೂ ಡಾ| ಸಾರ್ವಭೌಮ ಬಗಲಿ ಇಬ್ಬರೂ ಶಾಸಕ ಸ್ಥಾನದಿಂದ ಅನರ್ಹಗೊಂಡು ಸುಪ್ರೀಂ ಕೋರ್ಟ್‌ ಮೊರೆ ಹೋಗಿ ಶಾಸಕ ಸ್ಥಾನ ಉಳಿಸಿಕೊಂಡಿದ್ದರು. ಇದೀಗ ಬಿಜೆಪಿಯ ಮೂವರು ಶಾಸಕರಿದ್ದರೂ ಜಿಲ್ಲೆಗೆ ಮತ್ತೆ ಸಚಿವ ಸ್ಥಾನ ಕೈ ತಪ್ಪಿದೆ. ಇದು ಒಂದೆಡೆಯಾದರೆ, ಜಿಲ್ಲೆಯ ನಾಯಕರು ಹಾಗೂ ಶಾಸಕರಲ್ಲಿ ಒಗ್ಗಟ್ಟಿನ ಕೊರತೆ ಲಾಭ ಪಡೆಯಲಾಗುತ್ತಿದೆ ಎಂಬ ಮಾತೂ ಇದೆ. ಜಿಲ್ಲೆಯಲ್ಲಿ ಬಿಜೆಪಿ ಮೂವರು ಶಾಸಕರಿದ್ದರೂ ಮೂರು ದಿಕ್ಕಿನಲ್ಲಿದ್ದಾರೆ. ಪಕ್ಷದ, ಸರ್ಕಾರದ ಯಾವುದೇ ಕಾರ್ಯಕ್ರಮ ಇರಲಿ ಮೂವರು ಶಾಸಕರು ಒಂದೇ ವೇದಿಕೆ ಹಂಚಿಕೊಂಡದ್ದು ತೀರಾ ಅಪರೂಪ. ಇದರ ಪರಿಣಾಮ ಹಿರಿತನ ಇದ್ದರೂ, ಬಲಿಷ್ಠ ಜಾತಿಯ ಪ್ರಭಾವಿ ಶಾಸಕರಿದ್ದರೂ ಯಾವುದೊಂದೂ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಲು, ಪ್ರಭಾವ ಬೀರಲು ಸಾಧ್ಯವಾಗಿಲ್ಲ. ಹೀಗಾಗಿ ಯಡಿಯೂರಪ್ಪ ಅವರ ಪ್ರಸಕ್ತ ಸರ್ಕಾರದಲ್ಲಿ ವಿಜಯಪುರ ಜಿಲ್ಲೆ ಗೆಸ್ಟ್‌ ಮಿನಿಸ್ಟರ್‌ಗಳ ಮೂಲಕ ಆಡಳಿತ ನಡೆಸಿದೆ.

Advertisement

ಇದನ್ನೂ ಓದಿ:ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ: ವಿಸ್ಮಯ ಕಣ್ತುಂಬಿಕೊಂಡ ಭಕ್ತರು

ಆಹಾರ ನಿಗಮದ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಶಾಸಕ ನಡಹಳ್ಳಿ ಅವರನ್ನು ಸಮಾಧಾನಿಸಿದ್ದು, ಅವರು ಮುದ್ಧೇಬಿಹಾಳ ಕ್ಷೇತ್ರ ಬಿಟ್ಟು ಹೊರ ಬಂದಿಲ್ಲ. ಇನ್ನು ಭೀಕರ ಬರ, ನೆರೆ, ಪ್ರವಾಹ, ಕೋವಿಡ್‌-19 ಕೊರೊನಾ ಸಂಕಷ್ಟದಂತ ಗಂಭಿರ ಕಾಲಘಟ್ಟದಲ್ಲೂ ಹೊರ ಜಿಲ್ಲೆಯ ಸಚಿವರೇ ಜಿಲ್ಲೆಯ ಉಸ್ತುವಾರಿ ಇದ್ದರೂ ಸಮರ್ಪಕ ನಿರ್ವಹಣೆ ಆಗಲಿಲ್ಲ ಎಂಬ ಆರೋಪವಿದೆ. ಪ್ರವಾಹ ನಿರ್ವಹಣೆಯಲ್ಲಿ ಹೊರ ಜಿಲ್ಲೆಯ ಸಚಿವರ ಉಸ್ತುವಾರಿಯ ಆಡಳಿತ ವ್ಯವಸ್ಥೆಯ ವೈಫಲ್ಯದ ಎದ್ದು ಕಂಡಿದೆ. ಆಗಲೂ ರಾಜ್ಯ ಸರ್ಕಾರ ಮಾತ್ರವಲ್ಲ ಕೇಂದ್ರ ಸರ್ಕಾರದ ವಿರುದ್ಧವೂ ಧ್ವನಿ ಎತ್ತಿ, ಅನ್ಯಾಯ ಖಂಡಿಸಿದ್ದು ಇದೇ ಯತ್ನಾಳ.

ಇದೀಗ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗದೇ ಬಂಡಾಯದ ಬಾವುಟ ಹಾರಿಸಿರುವ ಬಸನಗೌಡ ಪಾಟೀಲ ಯತ್ನಾಳ, ಮುಖ್ಯಮಂತ್ರಿ ವಿರುದ್ಧ ಸಿಡಿ ಬ್ಲಾÂಕ್‌ವೆುàಲ್‌ ಎಂಬ ಹೊಸ ಬಾಂಬ್‌ ಸಿಡಿಸಿದ್ದು, ಸಂಕ್ರಮಣದ ನಂತರ ಯಡಿಯೂರಪ್ಪ ರಾಜಕೀಯ ಅಧಪತನ ಆರಂಭಗೊಂಡಿದೆ ಎನ್ನುವ ಮೂಲಕ ಸಚಿವ ಸ್ಥಾನ  ನೀಡದ ಪಕ್ಷದ ನಾಯಕತ್ವದ ಸೆಡ್ಡು ಹೊಡೆದಿದ್ದಾರೆ.

ಜಿ.ಎಸ್‌. ಕಮತರ

 

Advertisement

Udayavani is now on Telegram. Click here to join our channel and stay updated with the latest news.

Next