Advertisement

“ಸೀತಮ್ಮನ ಮಗ’- ಹೀಗೊಂದು ಸಿನಿಮಾ ಚಿತ್ರೀಕರಣಕ್ಕೆ ಅಣಿಯಾಗಿದೆ. ಯತಿರಾಜ್‌ ಈ ಚಿತ್ರದ ನಿರ್ದೇಶಕರು. ನಿರ್ದೇಶನದ ಜೊತೆಗೆ ಚಿತ್ರದಲ್ಲಿ ಪ್ರಮುಖ ಪಾತ್ರ ಕೂಡಾ ಮಾಡುತ್ತಿದ್ದಾರೆ. ನಿರ್ದೇಶಕ ಯತಿರಾಜ್‌ ಹರಿಶ್ಚಂದ್ರ ಘಾಟ್‌ ನಲ್ಲಿ ನೋಡಿದಂತ ಘಟನೆಯನ್ನು ಎರಡು ಪಾತ್ರದಲ್ಲಿ ತೆಗೆದುಕೊಂಡು ಒಂದು ಕಥೆಯನ್ನು ಬರೆದು, ಕಥಾ ಸ್ಪರ್ಧೆಯಲ್ಲಿ ಮೂರನೆ ಬಹುಮಾನ ಸಿಕ್ಕಿತ್ತಂತೆ. ಈಗ ಅದೇ ಕಥೆಯನ್ನು “ಸೀತಮ್ಮನ ಮಗ’ ಎಂಬ ಹೆಸರಿನಲಿಲ ಸಿನಿಮಾ ಮಾಡುತ್ತಿದ್ದಾರೆ. ಪಂಡರಹಳ್ಳಿಯ ನಿವೃತ್ತ ಶಿಕ್ಷಕ ಕೆ.ಮಂಜುನಾಥ್‌ ನಾಯಕ್‌ ಈ ಚಿತ್ರವನ್ನು ನಿರ್ಮಿಸಿ, ಚಿತ್ರದಲ್ಲೊಂದು ಪಾತ್ರ ಕೂಡಾ ಮಾಡುತ್ತಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡುವ ಯತಿರಾಜ್‌, “ಮಗು ಸಾಕಬೇಕಾದರೆ ದಂಪತಿಗಳಿಗೆ ಕನಸು ಇರುತ್ತದೆ. ಅಂತಹ ಹಿನ್ನಲೆಯಲ್ಲಿ ಕನಸು ಒಡೆದು ಹೋಗುವ ಸಂದರ್ಭ ಬಂದಾಗ ಪುಟ್ಟ ಹುಡುಗ ಅದನ್ನು ಹೇಗೆ ಎದುರಿಸುತ್ತಾನೆ. ಇದಕ್ಕೆ ತಾಯಿ ಯಾವ ರೀತಿ ಪ್ರೋತ್ಸಾಹ ನೀಡುತ್ತಾಳೆ ಎಂಬ ಅಂಶದ ಜೊತೆಗೆ ಬದುಕಿನ ವಿಡಂಬನೆ, ಸಾವು ಬದುಕಿನ ಚಿತ್ರಣವೂ ಇಲ್ಲಿದೆ. ಹುಡುಗನ ದೃಷ್ಟಿಯಲ್ಲಿ ಕಷ್ಟ ಸುಖಗಳು ಹೇಗೆ ಕಾಣುತ್ತದೆ. ಮನುಷ್ಯರು ಹೇಗೆ ಕಾಣಿಸ್ತಾರೆ. ಪರಿಸ್ಥಿತಿಯಲ್ಲಿ ಆತನ ಮುಗ್ಧತೆ ಏನು ಹೇಳುತ್ತದೆ. ಇದೆಲ್ಲವನ್ನು ಮೆಟ್ಟಿ ನಿಲ್ಲುತ್ತಾರಾ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ’ ಎಂದು ವಿವರ ನೀಡಿದರು.

ಇದನ್ನೂ ಓದಿ:60 ವರ್ಷದ ವ್ಯಕ್ತಿಯನ್ನು ಮದುವೆ ಆಗುವುದಾಗಿ ನಂಬಿಸಿ ತಾಳಿಯೊಂದಿಗೆ ಮಹಿಳೆ ಪರಾರಿ!

ತಾಯಿ ಪಾತ್ರದಲ್ಲಿ ರಂಗಭೂಮಿ ನಟಿ ಚೈತ್ರ ಶ್ರೀನಿವಾಸ್‌, ಮಗನಾಗಿ ಮಾಸ್ಟರ್‌ ಚರಣ್‌ ಕಸಾಲ, ಸುಡುಗಾಡು ಸಿದ್ದನಾಗಿ ಬುಲೆಟ್‌ ರಾಜು, ಶಿಕ್ಷಕಿಯಾಗಿ ಭಾರತಿ, ಸೋನುಸಾಗರ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ವಿನು ಮನಸು ಸಂಗೀತ, ಜೀವನ್‌ ರಾಜ್‌ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next