Advertisement

ಯಶ್‌ಪಾಲ್‌ ಸುವರ್ಣ ಗೆಲುವು ಹಿಂದುತ್ವದ ಗೆಲುವು: ಶ್ರೀಕಾಂತ ಶೆಟ್ಟಿ

05:42 PM May 05, 2023 | Team Udayavani |

ಮಲ್ಪೆ: ಹಿಂದುತ್ವದ ನೆಲೆಯಲ್ಲಿ ರಾಷ್ಟ್ರೀಯವಾದಿ ನೆಲೆಗಟ್ಟಿನಲ್ಲಿ ಬೆಳೆದು ಬಂದ ಯುವ ನಾಯಕ ಯಶ್‌ಪಾಲ್‌ ಸುವರ್ಣ ಅವರ ಈ ಬಾರಿಯ ಗೆಲುವು ಹಿಂದುತ್ವದ ಗೆಲುವಾಗಲಿದೆ ಎಂದು ಧಾರ್ಮಿಕ ಮುಖಂಡ ಶ್ರೀಕಾಂತ್‌ ಶೆಟ್ಟಿ ಹೇಳಿದರು. ಅವರು ತೆಂಕನಿಡಿಯೂರು ಮತ್ತು ಬಡಾನಿಡಿಯೂರು ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

Advertisement

ರಾಜ್ಯದಲ್ಲಿಯೇ ಮಾದರಿ ಕ್ಷೇತ್ರ
ಹಿಂದೂ ವಿರೋಧಿ ಮನಸ್ಥಿತಿಯ ಕಾಂಗ್ರೆಸ್‌ ಪಕ್ಷ ಹಿಂದೂ ಸಮಾಜದ ರಕ್ಷಣೆಗೆ ಪಣತೊಟ್ಟ ಭಜರಂಗದಳ ಸಂಘಟನೆಯನ್ನು ನಿಷೇಧಿಸಲು ಹೊರಟ ಈ ಕಾಲಘಟ್ಟದಲ್ಲಿ ಭಜರಂಗದಳದ ಜಿಲ್ಲಾ ಸಂಚಾಲಕರಾಗಿದ್ದ, ರಾಜಕೀಯ, ಸಹಕಾರ, ಧಾರ್ಮಿಕ ಕ್ಷೇತ್ರದಲ್ಲೂ ನಾಯಕರಾಗಿ ಗುರುತಿಸಿ ಕೊಂಡಿರುವ ದಿಟ್ಟ ನಿಲುವಿನ ಯಶ್‌ಪಾಲ್‌ ಸುವರ್ಣ ಈ ಬಾರಿ ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಉಡುಪಿಯ ಜನತೆ ಈ ಬಾರಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡುವಂತೆ ಕರೆ ನೀಡಿದರು.

ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸಿನೊಂದಿಗೆ ಡಾ| ವಿ. ಎಸ್‌. ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಬೆಳೆದು ಬಂದ ಯಶ್‌ಪಾಲ್‌ ಸುವರ್ಣ ಉಡುಪಿ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲಿದ್ದಾರೆ ಎಂದರು.

ಶಾಸಕ ರಘುಪತಿ ಭಟ್‌ ಮಾತನಾಡಿ, ಶಾಸಕನಾಗಿ ತೆಂಕನಿಡಿಯೂರು ಮತ್ತು ಬಡಾನಿಡಿಯೂರು ಗ್ರಾಮಗಳಿಗೆ ಗರಿಷ್ಠ ಅನುದಾನ ಒದಗಿಸಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್‌ ಸುವರ್ಣ ಅವರನ್ನು ಗೆಲ್ಲಿಸುವ ಮೂಲಕ ಮುಂದಿನ ದಿನಗಳಲ್ಲಿ ಗ್ರಾಮದ ನಿರಂತರ ಅಭಿವೃದ್ಧಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.

ಬಿಜೆಪಿಗೆ ಮತ್ತೂಮ್ಮೆ ಅವಕಾಶದ ವಿಶ್ವಾಸ
ಮನೆ ಮನೆಗೆ ಗ್ಯಾರಂಟಿ ಕಾರ್ಡ್‌ ತಲುಪಿಸಿ ಮತದಾರರನ್ನು ದಿಕ್ಕು ತಪ್ಪಿಸಲು ಮುಂದಾಗಿರೋ ಕಾಂಗ್ರೆಸ್‌, ಇದೀಗ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವ ಬಗ್ಗೆ ಉಲ್ಲೇಖೀಸಿದ್ದು ಈ ಮೂಲಕ ಕಾಂಗ್ರೆಸ್‌ ಪಕ್ಷದ ಹಿಂದೂ ವಿರೋಧಿ ನಿಲುವು ಇದೀಗ ಬಯಲಾಗಿದೆ. ಕ್ಷೇತ್ರದ ಅಭಿವೃದ್ಧಿ, ಹಿಂದುತ್ವ ಮತ್ತು ರಾಷ್ಟÅವಾದಿ ಚಿಂತನೆಯ ಆಧಾರದಲ್ಲಿ ಈ ಬಾರಿ ಬಿಜೆಪಿ ಚುನಾವಣೆಯನ್ನು ಎದುರಿಸುತ್ತಿದ್ದು, ಕ್ಷೇತ್ರದ ಜನತೆ ಮತ್ತೂಮ್ಮೆ ಬಿಜೆಪಿಗೆ ಅವಕಾಶ ನೀಡುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ಯಶ್‌ಪಾಲ್‌ ಸುವರ್ಣ ಹೇಳಿದರು.

Advertisement

ಸಮೃದ್ಧ ಸುಂದರ ಉಡುಪಿ
ಸಭೆಯಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಮಾತನಾಡಿ, ಕೀರ್ತಿಶೇಷ ಡಾ| ವಿ. ಎಸ್‌. ಆಚಾರ್ಯ ಅವರಿಂದ ಪ್ರಾರಂಭಗೊಂಡ ನವ ನಿರ್ಮಾಣಗೊಳ್ಳುತ್ತಿರುವ ಉಡುಪಿಯ ಅಭಿವೃದ್ಧಿಯ ಶಕೆಯನ್ನು ಶಾಸಕ ಕೆ. ರಘುಪತಿ ಭಟ್‌ ಮುಂದುವರಿಸಿ ಇನ್ನು ಮುಂದೆ ಯಶ್‌ಪಾಲ್‌ ಸುವರ್ಣ ನೇತೃತ್ವದಲ್ಲಿ ಸಮೃದ್ಧ ಸುಂದರ ಉಡುಪಿಯ ಕನಸು ನನಸಾಗಲಿದೆ ಎಂದು ಆಶಿಸಿದರು.

ಯಶ್‌ಪಾಲ್‌ ಗೆಲುವು ಸಂಸ್ಕೃತಿಯ ಗೆಲುವು
ಯಶ್‌ಪಾಲ್‌ ಸುವರ್ಣ ಅವರ ಗೆಲುವಿನಿಂದ ಗೋವುಗಳ ರಕ್ಷಣೆ ಸಾಧ್ಯ. ಮತಾಂತರ ನಿಷೇಧದ ಲಕ್ಷಣ, ಹೊಸ ಹೊಸ ಚಿಂತನೆಯನ್ನು ಮಾಡಲು ಸಾಧ್ಯ. ಕೇವಲ ಮೋದಿ ಅವರ ಭಾವಚಿತ್ರವನ್ನು ತೋರಿಸಿ, ಅವರ ಹೆಸರನ್ನು ಹೇಳುತ್ತಾ ಮತ ಪಡೆಯುವ ಬದಲಾಗಿ ಅದೇ ರೀತಿ ಪ್ರಾಮಾಣಿಕತೆಯಿಂದ ನಡೆಯುವಂತ ವ್ಯಕ್ತಿ ಯಶ್‌ಪಾಲ್‌. ದೇಶಭಕ್ತಿಯ ರೀತಿಯಲ್ಲಿ ಯಶ್‌ಪಾಲ್‌ ಅವರನ್ನು ಗೆಲ್ಲಿಸಿದರೆ ಉಡುಪಿ ಭ್ರಷ್ಟಾಚಾರ ರಹಿತ, ಆರೋಗ್ಯವಂತ ಉಡುಪಿ ಆಗಲು ಸಾಧ್ಯತೆ ಇದೆ ಎಂದು ನಗರಸಭಾ ಸದಸ್ಯ ವಿಜಯ ಕೊಡವೂರು ಹೇಳಿದರು.
ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಠಾಕೂರ್‌, ಜಿಲ್ಲಾ ಬಿಜೆಪಿ ವಕ್ತಾರ ರಾಘವೇಂದ್ರ ಕಿಣಿ, ತೆಂಕನಿಡಿಯೂರು ಗ್ರಾ. ಪಂ. ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಅರುಣ್‌ ಜತ್ತನ್‌, ಬಡಾನಿಡಿಯೂರು ಗ್ರಾ. ಪಂ. ಅಧ್ಯಕ್ಷ ಪ್ರಭಾಕರ್‌ ತಿಂಗಳಾಯ, ತಾ. ಪಂ. ಮಾಜಿ ಉಪಾಧ್ಯಕ್ಷ ಶರತ್‌ ಬೈಲಕೆರೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ್‌ ಪ್ರಕಾಶ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next