Advertisement
ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭೆಯ ಕೇÒತ್ರಕ್ಕೆ ಟಿಕೆಟ್ ಘೋಷಣೆ ಆದ ಅನಂತರ ನನಗೆ ಕರೆಗಳ ಮೇಲೆ ಕರೆಗಳ ಬರುತ್ತಿದ್ದು ಅಭಿಮಾನಿಗಳ ಕರೆಗೆ ಸ್ಪಂದಿಸಲು ಸಾಧ್ಯವಾಗಲಿಲ್ಲ. ಪಕ್ಷ ತೆಗೆದುಕೊಂಡ ನಿರ್ಧಾರದಿಂದ ನನಗೆ ಬೇಸರವಾಗಿದ್ದು ನಿಜ. ಆದರೆ ಪಕ್ಷದ ಈ ನಿರ್ಧಾರಕ್ಕೆ ನಾನು ತಲೆಬಾಗುತ್ತೇನೆ.
ಬಿಜೆಪಿ ಗೆಲ್ಲಿಸುವ ಹೊಣೆ ನನ್ನದು ಎಂದು ತಿಳಿದು ಪಕ್ಷಕ್ಕಾಗಿ ದುಡಿಯುತ್ತೇನೆ. ರಾಜ್ಯ ದಲ್ಲಿ 150ಕ್ಕೂ ಹೆಚ್ಚು ಕೇÒತ್ರಗಳಲ್ಲಿ ಬಿಜೆಪಿ ಯನ್ನು ಗೆಲ್ಲಿಸಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವಲ್ಲಿ ಪಕ್ಷದ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದವರು ತಿಳಿಸಿದ್ದಾರೆ.