Advertisement

ಜಿಲ್ಲೆಯ ಪ್ರಮುಖ ಆಸ್ಪತ್ರೆಗಳಲ್ಲಿಲ್ಲ “ಯಶಸ್ವಿನಿ’ ಯೋಜನೆ

03:41 PM Jun 27, 2023 | Team Udayavani |

ಉಡುಪಿ: ರಾಜ್ಯ ಸರಕಾರದ ಯಶಸ್ವಿನಿ ಯೋಜನೆ ಉಡುಪಿ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳಲ್ಲಿಯೇ ವಂಚಿತವಾಗಿದೆ. ಈ ಯೋಜನೆಯನ್ವಯ ಉಡುಪಿಯ ಜಿಲ್ಲಾಸ್ಪತ್ರೆ, ನ್ಯೂ ಸಿಟಿ ಆಸ್ಪತ್ರೆ, ಪ್ರಸಾದ್‌ ನೇತ್ರಾಲಯ, ಮಂಜುನಾಥ ಕಣ್ಣಿನ ಆಸ್ಪತ್ರೆ, ಕೋಟೇಶ್ವರದ ಡಾ| ಎನ್‌.ಆರ್‌.ಆಚಾರ್ಯ ಮೆಮೋರಿಯಲ್‌ ಹಾಸ್ಪಿಟಲ್‌, ಕುಂದಾಪುರದ ಆದರ್ಶ ಆಸ್ಪತ್ರೆ, ವಿವೇಕ ಆಸ್ಪತ್ರೆ, ಕಾರ್ಕಳದ ಸ್ಪಂದನ ಆಸ್ಪತ್ರೆ, ನಿಟ್ಟೆಯ ಗಜಾರಿಯಾ ಸ್ಪೆಶಾಲಿಟಿ ಆಸ್ಪತ್ರೆ, ಬ್ರಹ್ಮಾವರದ ಮಹೇಶ್‌ ಆಸ್ಪತ್ರೆ, ಶಿರೂರಿನ ಪಾರ್ವತಿ ಮಹಾಬಲ ಶೆಟ್ಟಿ ಮೆಮೋರಿಯಲ್‌ ಕಣ್ಣಿ ಆಸ್ಪತ್ರೆಗಳಲ್ಲಷ್ಟೇ ಈ ಸೇವೆ ಸಿಗುತ್ತಿದೆ.

Advertisement

ಪ್ರಮುಖ ಆಸ್ಪತ್ರೆಗಳಲ್ಲಿಲ್ಲ ಸೇವೆ
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಆದರ್ಶ, ಗಾಂಧಿ ಆಸ್ಪತ್ರೆ ಸಹಿತ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳಲ್ಲಿ ಈ ಸೇವೆ ಸಿಗದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಯೋಜನೆಯ ಆರಂಭದಲ್ಲಿ ಎಲ್ಲ ಆಸ್ಪತ್ರೆಗಳಿಗೂ ಇದನ್ನು ಅಳವಡಿಕೆ ಮಾಡುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಪ್ಯಾಕೇಜ್‌ ದರ ಕಡಿಮೆಯಾದ ಕಾರಣ ಕೆಲವು ಆಸ್ಪತ್ರೆಗಳು ಹಿಂದೇಟು ಹಾಕಿದವು ಎನ್ನುತ್ತಾರೆ ಅಧಿಕಾರಿಯೊಬ್ಬರು.

ನೋಂದಣಿ ಸ್ಥಗಿತ
ಈ ಯೋಜನೆಯ ಮೂಲಕ ಸುಮಾರು ಸಾವಿರಕ್ಕೂ ಅಧಿಕ ವಿವಿಧ ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದು. ಕಳೆದ ವರ್ಷ ನ.1ಕ್ಕೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಜ.1ಕ್ಕೆ ಚಿಕಿತ್ಸೆ ಆರಂಭಿಸಲಾಗಿತ್ತು. ನೋಂದಣಿ ಪ್ರಕ್ರಿಯೆ ಮಾರ್ಚ್‌ 31ಕ್ಕೆ ಕೊನೆಗೊಂಡಿದ್ದು, ಇನ್ನೂ ಆರಂಭಗೊಂಡಿಲ್ಲ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 3,58,624 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ನಗದು ರಹಿತ ಚಿಕಿತ್ಸೆ
ಗ್ರಾಮೀಣ ಸಹಕಾರಿಗಳ ಆರೋಗ್ಯ ಸುರಕ್ಷಾ ಯೋಜನೆಗೆ ಯಾವುದೇ ಸಹಕಾರ ಸಂಘದ ಸದಸ್ಯರು ಕನಿಷ್ಠ ಮೊತ್ತದ ಪ್ರೀಮಿಯಂ ಪಾವತಿಸಿ ತಮ್ಮ ಕುಟುಂಬದವರ ಹೆಸರು ನೋಂದಣಿ ಮಾಡಿಸಿ ಕೊಳ್ಳಬೇಕು. ಆಹ ಹಲವು ವಿಧದ ಶಸ್ತ್ರಚಿಕಿತ್ಸೆಗಳನ್ನು ಮಾಡಿಕೊಳ್ಳಬಹುದು. ಈ ಯೋಜನೆಯಡಿ ಯಶಸ್ವಿನಿ ನೆಟ್‌ವರ್ಕ್‌ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳಲ್ಲಿ ಒಂದು ಕುಟುಂಬಕ್ಕೆ 5 ಲ.ರೂ.ವರೆಗಿನ ವೆಚ್ಚದಲ್ಲಿನಗದು ರಹಿತ ಚಿಕಿತ್ಸೆ ಪಡೆಯಬಹುದು.

ರೈತರಿಗೆ ಅನುಕೂಲ
ಈ ಯೋಜನೆಯಡಿ ಫ‌ಲಾನುಭವಿ ಯಾಗಿರುವ ರೈತರು ಖಾಸಗಿ ಆಸ್ಪತ್ರೆಗೆ ದಾಖಲಾಗಲು ಸರಕಾರಿ ಆಸ್ಪತ್ರೆಯ ಅನು ಮತಿ ಅಗತ್ಯವಿಲ್ಲ. ಸಮಯ ಉಳಿ ತಾಯವಾಗು ವುದರೊಂದಿಗೆ ಪರಿಣಾಮಕಾರಿ ಶಸ್ತ್ರಚಿಕಿತ್ಸೆ ಸಿಗಲಿದೆ. ನೋಂದಾಯಿತ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಸಿಗಲಿದೆ.

Advertisement

ಮಾತುಕತೆ
ಜಿಲ್ಲೆಯ ಎಲ್ಲ ಪ್ರಮುಖ ಆಸ್ಪತ್ರೆಗಳಲ್ಲಿ ಈ ಯೋಜನೆಯನ್ನು ಆರಂಭಿಸುವಂತೆ ಆರಂಭದಲ್ಲಿಯೇ ಕೇಳಿಕೊಳ್ಳಲಾಗಿತ್ತು. ಆದರೆ ಪ್ಯಾಕೇಜ್‌ ದರ ಕಡಿಮೆ ಎಂಬ ನೆಪ ಹೇಳಿ ಕೆಲವರು ಮಾಡಿಕೊಂಡಿಲ್ಲ. ಮಗದೊಮ್ಮೆ ಅಂತಹ ಆಸ್ಪತ್ರೆಗಳೊಂದಿಗೆ ಮಾತುಕತೆ ನಡೆಸಲಾಗುವುದು.
-ಶರತ್‌, ಜಿಲ್ಲಾ ಸಮನ್ವಯಕರು,
ಯಶಸ್ವಿನಿ ಯೋಜನೆ ಉಡುಪಿ

ಸಿಎಂಗೆ ಮನವಿ
ಯಶಸ್ವಿನಿ ಯೋಜನೆಯಲ್ಲಿ ಸದಸ್ಯರಿಗೆ ಆರೋಗ್ಯ ಸವಲತ್ತು ಪಡೆಯಲು ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆಗಳನ್ನು ಸೇರ್ಪಡೆಗೊಳಿಸಿಲ್ಲ. ಈ ಬಗ್ಗೆ ಪರಿಶೀಲಿಸಿ ಕೆಲವು ಪ್ರಮುಖ ಆಸ್ಪತ್ರೆಗಳನ್ನು ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಳಿಸುವಂತೆ ಸಹಕಾರ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿದ್ದೇವೆ.
 -ಜಯಕರ ಶೆಟ್ಟಿ ಇಂದ್ರಾಳಿ,
ನಿರ್ದೇಶಕರು, ರಾಜ್ಯ ಸಹಕಾರ ಮಹಾಮಂಡಲ

Advertisement

Udayavani is now on Telegram. Click here to join our channel and stay updated with the latest news.

Next