Advertisement

ಜಲಯಜ್ಞದ ಕಂಕಣ ತೊಟ್ಟ ಯಶ್‌

12:18 PM Feb 28, 2017 | Team Udayavani |

ಹುಬ್ಬಳ್ಳಿ: ಚಲನಚಿತ್ರ ನಟ ಯಶ್‌ ಸಾಮಾಜಿಕ ಸೇವಾ ಕಾರ್ಯಕ್ಕೆ ಮುಂದಾಗಿದ್ದು, ಜಲಯಜ್ಞದ ಕಂಕಣ ತೊಟ್ಟಿದ್ದಾರೆ. ರಾಜ್ಯಾದ್ಯಂತ ಕೆರೆಗಳ ಅಭಿವೃದ್ಧಿ, ಜಲಸಂವರ್ಧನೆಗೆ ಮಾ.1ರಂದು ನಟ ಯಶ್‌ ಹಾಗೂ 25ಕ್ಕೂ ಹೆಚ್ಚು ಜಲತಜ್ಞರು, ಜಲ-ಪರಿಸರ ಪ್ರೇಮಿಗಳು, ಸಾಧಕ ಕೃಷಿಕರು ಸಭೆ ಸೇರಿ, ಭವಿಷ್ಯದ ಯೋಜನೆಗಳ ಕುರಿತಾಗಿ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ.

Advertisement

ಸಿನೆಮಾಗಳಲ್ಲಿ ರೈತಧಿರಾಗಿ, ರೈತರ ಪರವಾಗಿ ಧ್ವನಿ ಎತ್ತುವ ಪಾತ್ರಗಳನ್ನು ನಿಭಾಯಿಸುವ ಜತೆಗೆ, ಯಶ್‌ ರೈತ ಹಾಗೂ ಜಲಸಂರಕ್ಷಣೆ ಕಾಳಜಿ ವ್ಯಕ್ತಪಡಿಸಿ, “ಯಶೋಮಾರ್ಗ’ ಪ್ರತಿಷ್ಠಾನದ ಮೂಲಕ ಕೃಷಿಗೆ ಪೂರಕವಾಗುವ ಜಲಸಂವರ್ಧನೆ ಮತ್ತಿತರ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ನಿಜ ಜೀವನದಲ್ಲೂ ಹೀರೋ ಆಗುತ್ತಿದ್ದಾರೆ. 

ಮಾ.1ರಂದು ನಡೆಯುವ ಸಭೆಯಲ್ಲಿ ಜಲಸಂರಕ್ಷಣೆ ನಿರಂತರ ದುಡಿಯುತ್ತಿರುವ ಶ್ರೀಪಡ್ರೆ, ಡಾ| ಪ್ರಕಾಶ ಭಟ್‌, ಶಿವಾನಂದ ಕಳವೆ, ರಾಧಾಕೃಷ್ಣ ಭಡ್ತಿ, ಗೌತಮ್‌, ರಮೇಶ ಬಲೂಟಗಿ ಸೇರಿ 25 ತಜ್ಞರು ಪಾಲ್ಗೊಳ್ಳಲಿದ್ದು, ಯಶೋಮಾರ್ಗ ಅಡಿಯಲ್ಲಿ ಕೆರೆಗಳ ಹೂಳೆತ್ತುವುದು, ಜಲ ಸಂಗ್ರಹ ಮುಂತಾದ ಕಾರ್ಯಕ್ರಮಗಳ ಕುರಿತಾಗಿ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದಾರೆ.

ನಟನಿಗೆ ಕಲ್ಲೇಟು
ಶಹಾಪುರ: 
ನಗರಕ್ಕೆ ಸೋಮವಾರ ಸಂಜೆ ಆಗಮಿಸಿದ ಚಿತ್ರನಟ ಯಶ್‌ ಅವರತ್ತ ದುಷ್ಕರ್ಮಿಯೊಬ್ಬ ಕಲ್ಲು ಎಸೆದಿದ್ದು, ಯಶ್‌ ಅವರ ತಲೆಗೆ ಏಟು ಬಿದ್ದಿದೆ ಎಂದು ವರದಿಯಾಗಿದೆ. ಮಧ್ಯಾಹ್ನ 2 ಗಂಟೆಗೆ ಯಶ್‌ ಆಗಮಿಸಲಿದ್ದಾರೆ ಎಂಬ ಸುದ್ದಿ ತಿಳಿದ ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು. ಯಶ್‌ ಕಾರಿನಲ್ಲಿ ಎದ್ದು ನಿಂತು ಅಭಿಮಾನಿಗಳತ್ತ ಕೈ ಬೀಸುತ್ತಿದ್ದಂತೆಯೇ ಗುಂಪಿನ ಮಧ್ಯೆ ವ್ಯಕ್ತಿಯೊಬ್ಬ  ಕಲ್ಲು ಎಸೆದಿಧಿದ್ದಾನೆ.ನಂತರ ಬಸವೇಶ್ವರ ವೃತ್ತಧಿದಲ್ಲಿ ಆಯೋಜಿಸಿದ್ದ ಕಾರ್ಯಧಿಕ್ರಮದಲ್ಲಿ ಯಶ್‌ ಪಾಲ್ಗೊಳ್ಳಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next