Advertisement

ಮೂವರು ಸ್ಟಾರ್‌ಗಳ ಡ್ಯಾನ್ಸ್‌- ಟ್ರೆಂಡಿಂಗ್‌ ನಲ್ಲಿ ‘ಭಜರಂಗಿ-2’

11:11 AM Oct 28, 2021 | Team Udayavani |

ಒಂದೇ ವೇದಿಕೆಯಲ್ಲಿ ಮೂವರು ಸ್ಟಾರ್‌ ಗಳ ಸಂಗಮವಾಗಿದ್ದು ಒಂದು ಸಂಭ್ರಮವಾದರೆ, ಆ ಮೂವರು ಸ್ಟಾರ್‌ಗಳು ಒಂದೇ ಹಾಡಿಗೆ ಒಟ್ಟಿಗೆ ಹೆಜ್ಜೆ ಹಾಕಿದ್ದು, ಮತ್ತೂಂದು ಸಂಭ್ರಮ. ಭಜರಂಗಿ ಚಿತ್ರದ ಹಾಡಿಗೆ ಈ ಮೂವರು ಸ್ಟೆಪ್‌ ಹಾಕಿದ್ದು, ಸದ್ಯ ಆ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಇದರ ಜೊತೆಗೆ ಟ್ವಿಟ್ಟರ್‌ನಲ್ಲಿ “ಭಜರಂಗಿ-2′ ಟ್ರೆಂಡಿಂಗ್‌ನಲ್ಲಿದೆ.

Advertisement

ಎಲ್ಲರೂ ಒಟ್ಟಾಗಿ ಇರೋಣ: ತುಂಬಾ ದಿನಗಳ ನಂತರ “ಭಜರಂಗಿ-2′ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಯಶ್‌, ಡಾ.ರಾಜ್‌ ಫ್ಯಾಮಿಲಿ ಸಂಸ್ಕಾರ, ಶಿವಣ್ಣ, ಪುನೀತ್‌ ಅವರ ವಿನಯವಂತಿಕೆಯ ಬಗ್ಗೆ ಮಾತನಾಡಿದರು. “ಇವತ್ತು ಯಾರು, ಯಾರೇ ಸ್ಟಾರ್‌ ಡಮ್‌ ಮೆರೆಯಲಿ. ಆದರೆ, ಡಾ.ರಾಜ್‌, ಶಿವಣ್ಣ ಆ ಎಲ್ಲಾ ಸ್ಟಾರ್‌ಡಮ್‌ಗಳನ್ನು ನೋಡಿದ್ದಾರೆ. ಸ್ಟಾರ್‌ಡಮ್‌ ಬಂದಾಗ ನಮ್ಮ ಸುತ್ತ ಎಲ್ಲರೂ ಇರುತ್ತಾರೆ. ಆದರೆ ಏನು ಇಲ್ಲದಾಗಲೂ ಯಾರು ನಮ್ಮೊಂದಿಗೆ ಇರುತ್ತಾರೆ ಅದು ಮುಖ್ಯ. ಆ ವಿಷಯದಲ್ಲಿ ಶಿವಣ್ಣ, ಪುನೀತ್‌ ಎಲ್ಲರನ್ನು ಪ್ರೀತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಅನೇಕರು ಸಿನಿಮಾ ಅನ್ನೋದು ಯುದ್ಧಭೂಮಿ, ರಣರಂಗ ಎನ್ನುತ್ತಾರೆ. ಖಂಡಿತಾ ಅಲ್ಲ. ಇಲ್ಲಿ ಮುಖ್ಯವಾಗಿ ಬೇಕಾಗಿದ್ದು ಪ್ರತಿಭೆ. ನಿನಗೆ ತಾಕತ್ತು ಇದ್ರೆ ಈಜಬಹುದು. ಸಿನಿಮಾ ಎಂಬ ಸಮುದ್ರದಲ್ಲಿ ನಿನ್ನ ಸಾಮರ್ಥ್ಯ ಎಷ್ಟಿದೆಯೋ ಅಷ್ಟು ಈಜಬಹುದು. ಎಲ್ಲರೂ ಒಟ್ಟಾಗಿರೋಣ, ಚೆನ್ನಾಗಿರೋಣ. ಇಂಡಸ್ಟ್ರಿಗೆ ಒಳ್ಳೆಯದಾಗುವಂತೆ ಮಾಡೋಣ’ ಎಂದ ಯಶ್‌, ಜಯಣ್ಣ ಅವರ ಸಿನಿಮಾ ಪ್ರೀತಿ ಹಾಗೂ ಆರಂಭದಲ್ಲಿ ತಮಗೆ ಐದಾರು ಸಿನಿಮಾ ಮಾಡಿ, ಒಂದೊಳ್ಳೆಯ ದಾರಿ ಮಾಡಿಕೊಟ್ಟ ಬಗ್ಗೆ ಹೇಳಿದರು. ಈ ಎಲ್ಲಾ ಮಾತುಗಳನ್ನು ಕೇಳಿಸಿಕೊಂಡು ಜಯಣ್ಣ ಕಣ್ಣಂಚು ಒದ್ದೆಯಾಗಿತು.

ವಾರ್ನಿಂಗ್‌ ಪ್ರೊಡ್ನೂಸರ್‌ ಅಲ್ಲ: ನಿರ್ದೇಶಕ ಎ.ಹರ್ಷ “ಭಜರಂಗಿ-2′ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಚಿತ್ರ ಮೂಡಿಬಂದ ರೀತಿ. ಒಂದು ಫ್ಯಾಂಟಸಿ ಸಿನಿಮಾವನ್ನು ತನ್ನ ಕನಸಿನಂತೆ ಹರ್ಷ ಕಟ್ಟಿಕೊಟ್ಟಿದ್ದಾರೆ. ಅದಕ್ಕೆ ಕಾರಣ ನಿರ್ಮಾಪಕ ಜಯಣ್ಣ ಅವರಂತೆ. “ನಾನು ಏನೇ ಕನಸು ಕಂಡಿರಬಹುದು. ಅದು ಇವತ್ತು ತೆರೆಮೇಲೆ ಅದ್ಧೂರಿಯಾಗಿ ಕಾಣಲು ಕಾರಣ ಜಯಣ್ಣ. ಸೆಟ್‌ ಸುಟ್ಟು ಹೋದಾಗ ನನ್ನ ಕನಸು ಸುಟ್ಟು ಹೋಯಿತಲ್ಲ ಎಂದು ಬೇಸರ ಪಟ್ಟೆ. ಆದರೆ, ಅದಕ್ಕಿಂತ ದೊಡ್ಡ ಸೆಟ್‌ ಹಾಕಿ, ನನ್ನ ಕನಸನ್ನು ದೊಡ್ಡದಾಗಿಸಿದರು. ನನ್ನ ಆರೋಗ್ಯದ ಬಗ್ಗೆಯೂ ಅಷ್ಟೇ ಕಾಳಜಿ ವಹಿಸುತ್ತಿದ್ದರು. ಜಯಣ್ಣ ಯಾವತ್ತೂ ವಾರ್ನಿಂಗ್‌ ಪ್ರೊಡ್ನೂಸರ್‌ ಆಗಿಲ್ಲ. ಬಜೆಟ್‌ ಬಗ್ಗೆ ಅವರು ತಲೆಕೆಡಿಸಿಕೊಂಡು ಅಷ್ಟೇ ಮಾಡು, ಇಷ್ಟೇ ಮಾಡು ಎಂದಿಲ್ಲ’ ಎನ್ನುತ್ತಾ ಸಿನಿಮಾ ಹಾಗೂ ಶಿವಣ್ಣ ಕೊಟ್ಟ ಸಹಕರಾದ ಬಗ್ಗೆ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next