Advertisement
ಮುಖ್ಯವಾಗಿ ದರ್ಶನ್ ನಟನೆಯ “ಡೆವಿಲ್’ ಚಿತ್ರದ ಚಿತ್ರೀಕರಣ ಶೇ 30ರಷ್ಟು ಶೂಟಿಂಗ್ ಆಗಿತ್ತು. ಈ ಚಿತ್ರೀಕರಣದ ವೇಳೆ ಕೈಗೆ ಗಾಯವಾಗಿ ಶಸ್ತ್ರಚಿಕಿತ್ಸೆ ಕೂಡಾ ನಡೆದಿತ್ತು. ಇನ್ನೇನು ಚೇತರಿಸಿಕೊಂಡು ಚಿತ್ರೀಕರಣ ಆರಂಭವಾಗುವ ಹೊತ್ತಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾಗುವ ಮೂಲಕ ಚಿತ್ರೀಕರಣ ನಿಂತು ಹೋಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಡಿಸೆಂಬರ್‌ನಲ್ಲಿ “ಡೆವಿಲ್’ ರಿಲೀಸ್ ಆಗಬೇಕಿತ್ತು. ಈ ಮಾತನ್ನು ಸ್ವತಃ ದರ್ಶನ್ ಹೇಳಿದ್ದರು. ಆದರೆ, ದರ್ಶನ್ ಬಂಧನವಾಗುವ ಮೂಲಕ ಸಿನಿಮಾ ನಿಂತುಹೋಗಿತ್ತು. ಈಗ ದರ್ಶನ್‌ಗೆ ಜಾಮೀನು ಸಿಕ್ಕಿದೆ. ಈ ಮೂಲಕ ಮತ್ತೆ ದರ್ಶನ್ ಸಿನಿ ಚಟುವಟಿಕೆ ಗರಿಗೆದರುವ ನಿರೀಕ್ಷೆ ಇದೆ.
Related Articles
Advertisement
ಡಿ ಬಾಸ್ ದರ್ಶನ್ ಟ್ರೆಂಡಿಂಗ್
ದರ್ಶನ್‌ಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ದರ್ಶನ್ ಬಂಧನವಾದಾಗಿನಿಂದ ಟ್ವೀಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಪರ-ವಿರೋಧದ ಮಾತು, ಚರ್ಚೆಗಳು ನಡೆಯುತ್ತಲೇ ಇದ್ದವು. ಈಗ ಅವರಿಗೆ ಸಂಪೂರ್ಣ ಜಾಮೀನು ದೊರೆತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ದರ್ಶನ್‌ಗೆ ಜಾಮೀನು ದೊರೆತ ಬೆನ್ನಲ್ಲೆ ಅವರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡರು. ರಾಜ್ಯಾದ್ಯಂತ ಅಲ್ಲಲ್ಲಿ ಅವರ ಕಟೌಟ್, ಫೋಟೋಗಳಿಗೆ ಹೂವಿನ ಹಾರ ಹಾಕಿ, ಪೂಜೆ ಮಾಡಿದರು.
ನಮೋ ಶಂಕರ ಎಂದ ದರ್ಶನ್ ಪತ್ನಿ ವಿಜಯಲಕ್ಷ್ಮೀ
ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು, ಜಾಮೀನು ಸುದ್ದಿ ತಿಳಿಯುತ್ತಿದ್ದಂತೆ ದೇವರ ಹೂವಿನ ಪ್ರಸಾದ ಹಿಡಿದಿರುವ ಫೋಟೋ ಹಂಚಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ನಮೋ ಶಂಕರಾ ಎಂಬ ಹಾಡನ್ನು ಹಾಕಿದ್ದಾರೆ. ಅವರ ಮಗ ವಿನೀಶ್ ಕೂಡ ಅಪ್ಪನ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ.
ತಾರೆಯರ ಸಂಭ್ರಮ
ನಟ ದರ್ಶನ್ ಅವರಿಗೆ ಜಾಮೀನು ದೊರೆತಿರುವುದರ ಬಗ್ಗೆ ಅವರ ಕುಟುಂಬದವರಷ್ಟೇ ಅಲ್ಲ, ಸಿನಿಮಾ ತಾರೆಯರು ಹಾಗೂ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಇದೊಂದು “ಹ್ಯಾಪಿ ನ್ಯೂಸ್’ ಎಂದು ಬರೆದುಕೊಂಡಿ ದ್ದಾರೆ. ನಟ ಧನ್ವೀರ್ “ಉಸಿರಿರುವವರೆಗೆ ನಿಮ್ಮ ಹಿಂದೆ ಇರುತ್ತೇವೆ’ ಎಂದು ಪೋಸ್ಟ್ ಮಾಡಿದ್ದಾರೆ. ತರುಣ್ ಸುಧೀರ್ ಮಾತನಾಡುತ್ತ, “ದರ್ಶನ್ ಹಾಗೂ ಅವರ ಅಭಿಮಾನಿಗಳ ಸಂಬಂಧ ಬಹಳ ಗಟ್ಟಿಯಾಗಿದೆ. ಸದಾ ದರ್ಶನ್‌ಗೆ ಪ್ರೀತಿ ತೋರಿಸಿದ್ದಾರೆ. ಅವರ ಆರೋಗ್ಯ ಬೇಗ ಸುಧಾರಿಸಲಿ. ಅದೇ ಮೊದಲ ಆದ್ಯತೆ. ಜೊತೆಗೆ ಆರೋಪದಿಂದಲೂ ಬೇಗ ಮುಕ್ತರಾಗಲಿ’ ಎಂದು ಮಾತನಾಡಿದ್ದಾರೆ.