Advertisement

ಕೆಜಿಎಫ್ ಫ‌ಸ್ಟ್‌ ಲುಕ್‌

03:53 PM May 04, 2017 | |

ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ತಮ್ಮ ಎರಡನೇ ನಿರ್ದೇಶನದ ಚಿತ್ರಕ್ಕೆ “ಕೆಜಿಎಫ್’ ಎಂಬ ಶೀರ್ಷಿಕೆ ಇಟ್ಟಾಗಿನಿಂದಲೂ ಎಲ್ಲರಿಗೂ ಒಂದು ಕುತೂಹಲ ಇದ್ದೇ ಇತ್ತು. ಯಶ್‌ ಈ ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ, ಯಾವ ಪಾತ್ರ ಮಾಡುತ್ತಿದ್ದಾರೆ ಎಂಬೆಲ್ಲಾ ಪ್ರಶ್ನೆಗಳು ಗಿರಕಿ ಹೊಡೆಯುತ್ತಲೇ ಇದ್ದವು. 

Advertisement

ಆ ಕುತೂಹಲ ಮತ್ತು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಬುಧವಾರ ಸಂಜೆ “ಕೆಜಿಎಫ್’ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಲಾಗಿದೆ. ಸ್ವತಃ ಯಶ್‌ ಅವರೇ ಟ್ವಿಟ್ಟರ್‌ನಲ್ಲಿ “ಕೆಜಿಎಫ್’ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಿದ್ದಾರೆ. ಅವರ ಫ‌ಸ್ಟ್‌ಲುಕ್‌ ನೋಡಿದರೆ, ಪಕ್ಕಾ ಮಾಸ್‌ ಆಗಿರುವ ಖಡಕ್‌ ಪಾತ್ರ ನೆನಪಾಗುತ್ತೆ. ಖದರ್‌ ಎನಿಸುವ ರಗಡ್‌ ಆನಿಸುವ ಲುಕ್‌ನೊಂದಿಗೆ ಯಶ್‌ ಕಾಣಿಸಿಕೊಂಡಿದ್ದಾರೆ. ಉದ್ದನೆಯ ಕೂದಲು, ದಪ್ಪನೆಯ ಗಡ್ಡ, ಕಟ್ಟುಮಸ್ತಾದ ದೇಹ, ಕಣ್ಣೊಳಗಿನ ನೋಟ ಎಲ್ಲವೂ ಮಾಸ್‌ಫೀಲ್‌ ಎನಿಸುವಂತಿದೆ.

ಅದೇನೆ ಇರಲಿ, “ಕೆಜಿಎಫ್’ ಶುರುವಾಗಿದೆ. ಯಶ್‌ ಅವರ ಫ‌ಸ್ಟ್‌ಲುಕ್‌ ಕೂಡ ಹೊರಬಿದ್ದಿದೆ. ಇನ್ನೇನಿದ್ದರೂ, ಸಿನಿಮಾ ರಿಲೀಸ್‌ ಆಗೋವರೆಗೆ ಏನೆಲ್ಲಾ ಇರುತ್ತೆ ಎಂಬ ಕುತೂಹಲ ದೊಂದಿಗೆ ಕಾಯಬೇಕಷ್ಟೇ. ಇದು ವಿಜಯ್‌ಕಿರಗಂದೂರು ನಿರ್ಮಾಣದ ಅದ್ಧೂರಿ ಚಿತ್ರ ಎಂಬುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next