Advertisement

ಯಲ್ಲಾಪುರ : ಮಳೆಗೆ ಹಳ್ಳದ ಏರಿ ಒಡೆದು ಗದ್ದೆಗಳಿಗೆ ನುಗ್ಗಿದ ನೀರು, ಆತಂಕದಲ್ಲಿ ಗ್ರಾಮಸ್ಥರು

07:26 PM Jul 16, 2022 | Team Udayavani |

ಯಲ್ಲಾಪುರ : ತಾಲೂಕಿನ‌ ಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮೊನ್ನೆ ಬಿರುಕುಬಿಟ್ಟ ಶ್ರೀಕ್ಷೇತ್ರ ಕವಡಿಕೆರೆಯ ಏರಿ ಒಡೆದರೆ ಇನ್ನೇನು ಅನಾಹುತ ಕಾದಿದೆ ಗೊತ್ತಿಲ್ಲ ಎಂಬ ಚಿಂತೆ ಗ್ರಾಮದ ಜನರಲ್ಲಿ.

Advertisement

ಸತತವಾಗಿ ಸುರಿಯುತ್ತಿರುವ ಮಳೆಗೆ ಪಟ್ಟಣದ ರಾಮಾಪುರದ ಹಳ್ಳದ ಏರಿ ಒಡೆದು ಗದ್ದೆಗಳಿಗೆ ನೀರು ಮಣ್ಣು ನುಗ್ಗಿ ಹಾನಿ ಮಾಡಿದೆ. ಗದ್ದೆಯೇ ಹಳ್ಳದಂತಾಗಿದೆ, ಸಮುದ್ರದ ಹಾಗೆ ನೀರು ತುಂಬಿ ಎತ್ತನೂ ಹೋಗಲಾರದ ಸ್ಥಿತಿ ನಿರ್ಮಾಣವಾಗಿದೆ.

ಉದ್ಯಮನಗರ ಮತ್ತು ಕಾಳಮ್ಮನಗರ ಕಡೆಗಳಿಂದ ಬಂದ ನೀರು ಹಳ್ಳಕ್ಕೆ ಸೇರಿ ಏರಿ ಒಡೆದಿದೆ. ಗದ್ದೆಯಲ್ಲಿ ಯಾವುದೇ ಕೃಷಿ ಮಾಡುವ ಪರಿಸ್ಥಿತಿ ಇಲ್ಲವಾಗಿದೆ. ಅಲ್ಲದೇ ರಾಮಾಪುರ ಜನ ಸಂಚರಿಸುವ ಕಾಲುದಾರಿ ಕೊಚ್ಚಿಹೋಗಿದ್ದು ಇದರಲ್ಲಿ ಸಂಚರಿಸಲು ಸಾಧ್ಯವಾಗದಂತಾಗಿದೆ. ಪಟ್ಟಣದ ಕಲುಷಿತ ನೀರು,ಕಸದ ತ್ಯಾಜ್ಯಗಳು ಬಂದು ಹೊಲದಲ್ಲಿ ರಾಶಿ ಬಿದ್ದಿವೆ.

ಇದನ್ನೂ ಓದಿ : ನನ್ನ ಸಭೆ ಜನಪರ, ಇದರಲ್ಲಿ ರಾಜಕೀಯ ಮಾಡಬೇಡಿ: ಸಂಸದ ‌ಡಾ. ಉಮೇಶ್ ಜಾಧವ್ 

Advertisement

Udayavani is now on Telegram. Click here to join our channel and stay updated with the latest news.

Next