Advertisement

ಯೋಗ ಜೀವನದ ಭಾಗವಾಗಲಿ: ಡಾ|ನಿರ್ಮಲ

05:33 PM Jun 22, 2020 | Naveen |

ಆಳಂದ: ಯೋಗ ಜೀವನದ ಒಂದು ಭಾಗವಾಗಲಿ. ಇದನ್ನು ಒಂದೇ ದಿನಕ್ಕೆ ನಿರ್ಭಂದಿಸದೇ, ದಿನನಿತ್ಯವೂ ಅರ್ಧ ಘಂಟೆ ರೂಢಿಗತ ಮಾಡಿಕೊಳ್ಳುವುದರಿಂದ ದೇಹವನ್ನು ಪುನಃಶ್ವೇತನಗೊಳಿಸಬಹುದು ಎಂದು ಕಲಬುರಗಿ ಹಿಂಗುಲಾಂಬಿಕಾ ಆರ್ಯುರ್ವೇದ ಕಾಲೇಜಿನ ಡಾ| ನಿರ್ಮಲಾ ಕೆಳಮನಿ ಹೇಳಿದರು.

Advertisement

ತಾಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯ ಆವರಣದಲ್ಲಿ ಕೇಂದ್ರೀಯ ವಿಶ್ವ ವಿದ್ಯಾಲಯ, ಆಯುಷ್ಯ ಇಲಾಖೆ ಆಶ್ರಯದಲ್ಲಿ ಯುಜಿಸಿ ಹೊರಡಿಸಿದ ಮಾರ್ಗಸೂಚಿಗಳಂತೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯೋಗವು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮೂಲಕ ಅಂತರಿಕ ಮತ್ತು ಬಾಹ್ಯ ದೇಹದ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕೋವಿಡ್‌-19 ಸಾಂಕ್ರಮಿಕ ರೋಗದ ಕಠಿಣ ಸಮಯದಲ್ಲಿ ಯೋಗದ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವುದು ಅವಶ್ಯಕವಾಗಿದೆ ಎಂದರು.

ವಿವಿ ಕುಲಪತಿ ಪ್ರೊ| ಎಚ್‌.ಎಂ. ಮಹೇಶ್ವರಯ್ಯ ಮಾತನಾಡಿ, ದೈನಂದಿನ ಜೀವನದಲ್ಲಿ ಯೋಗ ಅವಶ್ಯಕ ಎಂದರು. ಕುಲಸಚಿವ ಪ್ರೊ| ಮುಸ್ತಾಕ್‌ ಅಹ್ಮದ್‌ ಪಟೇಲ್‌, ಪರೀಕ್ಷಾ ನಿಯಂತ್ರಣ ಅಧಿಕಾರಿ ಪ್ರೊ| ಬಿ.ಆರ್‌. ಕೆರೂರ, ಹಣಕಾಸು ಅಧಿ ಕಾರಿ ಶಿವಾನಂದಂ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ| ಚನ್ನವೀರ ಆರ್‌.ಎಂ. ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು. ಕಲಬುರಗಿ ವಶಿಷ್ಠ ಯೋಗ ಕೇಂದ್ರದ ಸಿದ್ಧಯ್ಯ ಗುತ್ತೇದಾರ, ಶಶಿಕಲಾ ಗುತ್ತೇದಾರ ಯೋಗಾಸನ ಪ್ರದರ್ಶನ ಮಾಡಿದರು. ಡಾ| ಮಹೇಂದ್ರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next