Advertisement
ಕೇವಲ ರಂಗಭೂಮಿ ಕಲಾವಿದರಲ್ಲದೆ ಭರತನಾಟ್ಯದಂತಹ ಕ್ಷೇತ್ರದವರೂ ಇಲ್ಲಿ ಸೇರಿಕೊಂಡಿದ್ದಾರೆ. ಹಿಂದೆ ಕಳರಿಪಯಟ್, ಕೂಡಿಯಾಟ್ಟಂ, ಕಥಕ್ಕಳಿ ಕಲೆಯನ್ನು ಕಲಿಯಲು ಹೊರ ರಾಜ್ಯದ ರಂಗಭೂಮಿ ಕಲಾವಿದರು ಕೇರಳಕ್ಕೆ ಹೋಗುತ್ತಿದ್ದರು. ಯಕ್ಷಗಾನದ ಸಾಧ್ಯತೆಗಳು ಮತ್ತು ರಂಗಕ್ರಿಯೆ ಕಲಿಯಲು ಈಗ ಉಡುಪಿಗೆ ಬರುವಂತಾಗಿದೆ.
ಈ ಕಲಾವಿದರಿಗೆ ಬೇಕಾದಂತಹ ಪಠ್ಯಗಳನ್ನೂ ರಚಿಸಿ ಕೊಡಲಾಗಿದೆ. ಫೆ. 20 ರಂದು ಆರಂಭಗೊಂಡ ಕಾರ್ಯಾಗಾರ 20 ದಿನಗಳವರೆಗೆ ಯಕ್ಷಗಾನ ತಾಳ, ಸ್ವರ ಅಭ್ಯಾಸ, ವೀಡಿಯೋ ಮೂಲಕ ದೃಶ್ಯವೀಕ್ಷಣೆ, ಕುಣಿತ ಅಭ್ಯಾಸ, ಆಂಗಿಕ ಅಭ್ಯಾಸ ಇತ್ಯಾದಿಗಳನ್ನು ಕಲಿಸಲಾಗುತ್ತಿದೆ. ಪರಂಪರೆಯ ನೃತ್ಯ ಕಲಿಕೆ
ಯುದ್ಧ ನೃತ್ಯ, ಜಲಕ್ರೀಡೆ, ಪ್ರಯಾಣ ಕುಣಿತ, ಸುತ್ತು ಬಲಿ, ಮಲ್ಲಯುದ್ಧ, ಕತ್ತಿ ಪಡೆ ಹೀಗೆ ಹಲವು ರಂಗ ಕ್ರಿಯೆಗಳು ಯಕ್ಷಗಾನದಲ್ಲಿವೆ. ಆದರೆ ಇವುಗಳು ಈಗ ಯಕ್ಷಗಾನ ಪ್ರದರ್ಶನದಲ್ಲಿ ಹೆಚ್ಚಾಗಿ ಕಂಡುಬರುತ್ತಿಲ್ಲ.
Related Articles
Advertisement
ಕಾರ್ಯಾಗಾರವನ್ನು ಉಚಿತವಾಗಿ ನಡೆಸಿಕೊಡಲಾಗುತ್ತಿದೆ. 10 ಕಲಾವಿದರಿಗೆ ಅವಕಾಶ ಎಂಬ ಗುರಿ ಇರಿಸಿಕೊಂಡರೂ 16 ಕಲಾವಿದರು ಬಂದಿದ್ದಾರೆ. ಇವರಲ್ಲಿ ಇಬ್ಬರಿಗೆ ಕೊರೊನಾ ಸೋಂಕಿನ ಕಾರಣದಿಂದ ಅವಕಾಶ ಕೊಡಲಿಲ್ಲ.
ರಂಗಭೂಮಿಯಲ್ಲಿ ಅಳವಡಿಸುವ ಉದ್ದೇಶಪ್ರಸಾದನ, ಮಾತು, ಹೆಜ್ಜೆಗಳನ್ನು ರಂಗಭೂಮಿ ಕ್ಷೇತ್ರದಲ್ಲಿ ಅಳವಡಿಸಲು ಸಾಧ್ಯ ಎನ್ನುತ್ತಾರೆ ಚೆನ್ನೈನಿಂದ ಆಗಮಿಸಿದ ಬೆಂಗಳೂರಿನವರಾದ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರೆ ಕವಿತಾ. ಹೀಗೆ ಮಹಾರಾಷ್ಟ್ರ ನಾಶಿಕ್‌ನ ಯಶೋದಾ ಸಂಜಯ್, ಪೂಜಾ ವೇದವಿಖ್ಯಾತ್, ಮುಂಬಯಿನ ಲತಾ ಎಸ್. ಸಿಂಗ್, ಬೆಂಗಳೂರಿನ ಮುತ್ತುಕುಮಾರ್, ಗುಜರಾತ್ ವಡೋದರದ ಚೌಹಾಣ್ ಪ್ರಮೋದ್, ಜೈಪುರದ ವಿಶಾಲ್ ಚೌಧರಿ, ಲಖನೌನ ವಿಕಾಸ್, ಮೋಸಮ್ ಖಾನ್, ದಿಲ್ಲಿಯ ಧೃತಿ, ಅತುಲ್ ಸಿಂಗ್, ಅಜೀತ್ ಶರ್ಮಾ, ಬೆಂಗಳೂರಿನಲ್ಲಿರುವ ಕುಂದಾಪುರ ಮೂಲದ ಕುಮಾರಿ ಜಲಜಾ ಮೊದಲಾದವರು ಉತ್ಸುಕತೆಯಿಂದ ಯಕ್ಷಗಾನ ಕಲೆಯ ಸಾಧ್ಯತೆಗಳನ್ನು ಕಲಿಯ ಹೊರಟಿದ್ದಾರೆ.