ಮಂಗಳೂರು: ಯಕ್ಷಗುರು, ಸಂಘಟಕ, ಕಲಾವಿದ, ಅಧ್ಯಾಪಕ, ವೈದ್ಯ, ಕೈರಂಗಳ ನಾರಾಯಣ ಹೊಳ್ಳ ಅವರು ಮಂಗಳವಾರ (ನ.21) ವಿಧಿವಶರಾದರು.
ಮೂಲತಃ ಕಾಸರಗೋಡು ಜಿಲ್ಲೆಯ ಕೋಳ್ಯೂರಿನವರಾದ ನಾರಾಯಣ ಹೊಳ್ಳರು ಮುಂದೆ ಕೈರಂಗಳ ನಾರಾಯಣ ಹೊಳ್ಳ ಎಂದೇ ಪ್ರಸಿದ್ಧರಾದವರು. ಉಳ್ಳಾಲ ತಾಲೂಕಿನ ಕೈರಂಗಳದಲ್ಲಿ 1954ರಲ್ಲಿ ಗೋಪಾಲಕೃಷ್ಣ ಯಕ್ಷಗಾನ ಸಂಘವನ್ನು ಸ್ಥಾಪಿಸಿ ದಶಕಗಳ ಕಾಲ ಹಲವಾರು ಯಕ್ಷ ಪ್ರತಿಭೆಗಳ ಬೆಳವಣಿಗೆಗೆ ನೆರಳಾದವರು.
ಇದನ್ನೂ ಓದಿ:Kushtagi: ತೆರವು ಹಂತದಲ್ಲಿದ್ದ ಶಾಲೆಗೆ ತಹಶೀಲ್ದಾರ್ ಭೇಟಿ; ತೆರವಿಗೆ ತಾತ್ಕಾಲಿಕ ಬ್ರೇಕ್
ಕೈರಂಗಳ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ನಾರಾಯಣ ಹೊಳ್ಳರು, ಹೋಮಿಯೋಪತಿ ಚಿಕಿತ್ಸಾ ಪದ್ಧತಿಯನ್ನು ಖಾಸಗಿಯಾಗಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರೂ ಹೌದು. ಯಕ್ಷಗಾನದ ವೇಷಭೂಷಣಗಳ ನಿರ್ವಹಣೆ, ಹವ್ಯಾಸಿ ಕಲಾವಿದರಿಗೆ ಬಣ್ಣ ಹಚ್ಚುವ ಪ್ರಸಾಧನದ ಕೆಲಸದಲ್ಲಿಯೂ ಅವರು ಪರಿಣತಿ ಪಡೆದಿದ್ದರು.
ಕೈರಂಗಳ ಊರಿಗೆ ಅಧ್ಯಾಪಕರಾಗಿ ಬಂದು ಹಲವಾರು ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ, ಯಕ್ಷಶಿಕ್ಷಣ ನೀಡಿ, ಕಲಿಸಿ ಬೆಳೆಸಿದ ಗುರುವಾದವರು ಕೆ.ನಾರಾಯಣ ಹೊಳ್ಳರು.