ಗೈದು ತಮ್ಮ ಕಲಾ ಪ್ರೌಢಿಮೆಯನ್ನು ಅಭಿವ್ಯಕ್ತಗೊಳಿಸಿದರು.
Advertisement
ಬೆಳ್ತಂಗಡಿ ತಾಲೂಕಿನ ಸರಕಾರಿ ಶಾಲೆಗಳಾದ ಕಳ್ಮಂಜ ಸರಕಾರಿ ಪ್ರೌಢ ಶಾಲೆ, ನಿಡ್ಲೆ ಸರಕಾರಿ ಪ್ರೌಢ ಶಾಲೆ, ಪೆರ್ಲ-ಬೈಪಾಡಿ ಸರಕಾರಿ ಪ್ರೌಢ ಶಾಲೆ, ಅನಾರು-ಪಟ್ರಮೆ ಸ. ಉ.ಹಿ.ಪ್ರಾ.ಶಾಲೆ, ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪಟ್ಟೂರು ಶ್ರೀ ರಾಮ ಪ್ರೌಢ ಶಾಲೆ ಹಾಗೂ ಬೆಳ್ತಂಗಡಿ ಹಳೆಕೋಟೆ ವಾಣಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ “ಯಕ್ಷಧ್ರುವ ಪಟ್ಲ’ ಇದರ ಯಕ್ಷಶಿಕ್ಷಣ ಯೋಜನೆಯನ್ವಯ ಯಕ್ಷಗುರುಗಳಾದ ಈಶ್ವರ ಪ್ರಸಾದ್ ನಿಡ್ಲೆ, ದೇವಿಪ್ರಸಾದ್ ಶಕ್ತಿನಗರ, ಗುರುವಾಯನಕೆರೆ ಹಾಗೂ ಅರುಣ್ ಕುಮಾರ್ ಧರ್ಮಸ್ಥಳ ವಿದ್ಯಾರ್ಥಿಗಳಿಗೆ ಯಕ್ಷಗಾನ ಕುಣಿತ, ಮಾತುಗಾರಿಕೆ ಹಾಗೂ ಅಭಿನಯದ ತರಬೇತಿ ನೀಡಿ ರಂಗಪ್ರವೇಶಕ್ಕೆ ಅಣಿಗೊಳಿಸಿದ್ದರು.