Advertisement

ಹ್ವಾಯ್‌…ಇಲ್ಲಿ ನೋಡಿ…ಏರ್‌ಪೋರ್ಟ್‌ನಲ್ಲಿ ನಾವು…

03:24 PM Apr 27, 2019 | Team Udayavani |

ಏರ್‌ಪೋರ್ಟ್‌ಗಳು ಅಂದ್ರೆ ಕೇವಲ ಪುರ್ರೀನೆ ಹಾರುವ ವಿಮಾನಗಳ ತಾಣ ಎನ್ನುವ ವ್ಯಾಖ್ಯಾನವೇ ಹೆಚ್ಚು. ಆದರೆ, ಅವುಗಳಿಗೆ ಇನ್ನೊಂದು ಮುಖವೂ ಇದೆ ಅನ್ನೋದನ್ನು ಬೆಂಗಳೂರಿನ ವಿಮಾನ ನಿಲ್ದಾಣ ತೋರಿಸಿಕೊಟ್ಟಿದೆ. ನಮ್ಮ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಈ ನಾಡಿನ ಸಂಸ್ಕೃತಿಯನ್ನು ಪರಿಚಯಿಸುವ ಪುಟ್ಟ ಕೆಲಸವನ್ನೂ ಮಾಡುತ್ತಿದೆ. ಇತ್ತೀಚೆಗೆ ಇಲ್ಲಿ ಎರಡು ಯಕ್ಷ ಸು#ರದ್ರೂಪಿ ಪ್ರತಿಮೆಗಳನ್ನು° ನಿಲ್ಲಿಸಲಾಗಿದ್ದು, ಬೆಂಗಳೂರಿಗೆ ಆಗಮಿಸುವ ಪ್ರತಿಯೊಬ್ಬರನ್ನೂ ಸೆಳೆಯುತ್ತಿದೆ.

Advertisement

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಇಳಿದವರಿಗೆ ಮೊದಲು ಸ್ವಾಗತಿಸುವುದೇ, ಯಕ್ಷಗಾನದ ಈ ದೊಡ್ಡ ಪ್ರತಿಮೆಗಳು. ಸ್ನಿಗ್ಧ- ಮುಗ್ಧ ಸೌಂದರ್ಯದ ಈ ಕಲಾಕೃತಿಗಳು,ಸೊಂಟದ ಮೇಲೆ ಕೈಹೊತ್ತು, ವಿಮಾನದಿಂದ ಇಳಿದುಬಂದವರನ್ನು ಆಕರ್ಷಿಸುತ್ತಿದೆ. ತಮ್ಮ ಲಗ್ಗೇಜ್‌ ಕ್ಯಾರಿಯರ್‌ ಗಾಡಿಯನ್ನು ಪಕ್ಕದಲ್ಲಿ ನಿಲ್ಲಿಸಿ, ಅವುಗಳ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು, ಮುಂದೆ ಹೋಗುವವರೇ ಹೆಚ್ಚು. ಮಾರ್ಗದರ್ಶನದ ಡಿಜಿಟಲ್‌ ಫ‌ಲಕದ ಆಚೆಈಚೆ ಸ್ಥಾಪಿಸಿರುವ ಈ ಪ್ರತಿಮೆಗಳು, “ಹ್ವಾಯ್‌… ಇಲ್ಲಿ ನೋಡಿ..’ ಎಂದು ಕರೆದಂತೆ, ದಕ್ಷಿಣ ಕನ್ನಡದ ಸೊಗಡನ್ನು ನೆನಪಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next