Advertisement

‘ಯಕ್ಷಗಾನದ ಅಭಿರುಚಿ ಬೆಳೆಸುವುದು ಅಗತ್ಯ’

03:02 PM Dec 19, 2018 | Team Udayavani |

ಬಂಟ್ವಾಳ : ಕರಾವಳಿಯ ಸಾಂಪ್ರದಾಯಿಕ ಯಕ್ಷಗಾನ ಕಲೆ ಉಳಿಯಬೇಕಾದರೆ ವಿದ್ಯಾರ್ಥಿಗಳಲ್ಲಿ ಯಕ್ಷಗಾನ ಕಲೆಯ ಅಭಿರುಚಿಯನ್ನು ಬೆಳೆಸಬೇಕು. ಸಾರ್ವಜನಿಕರು ತನು- ಮನದಿಂದ ಪ್ರೋತ್ಸಾಹ ನೀಡುವ ಮೂಲಕ ಯಕ್ಷಗಾನ ಬಯಲಾಟವಾಗಿ ವಿಜೃಂಭಿಸಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ತಿಳಿಸಿದರು. ಅವರು ಮೆಲ್ಕಾರ್‌ನಲ್ಲಿ ಹೆದ್ದಾರಿ ಸನಿಹ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಮಿತಿ ಬಿ.ಸಿ. ರೋಡ್‌ ಆಶ್ರಯದಲ್ಲಿ ಕಾಸರಗೋಡು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಯಿಂದ ಏರ್ಪಡಿಸಲಾದ ಯಕ್ಷಗಾನ ಸಪ್ತಾಹ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು.

Advertisement

ಬಿ.ಸಿ. ರೋಡ್‌ನ‌ ಅನ್ನಪೂರ್ಣೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಎಂ. ಈಶ್ವರ ಭಟ್‌ ಮುಖ್ಯ ಅತಿಥಿಯಾಗಿ ಮಾತನಾಡಿ, ಪೌರಾಣಿಕ ಕಥೆಗಳನ್ನು ಹಾಗೂ ಧರ್ಮದ ಮೌಲ್ಯಗಳನ್ನು ತಿಳಿಯಲು ಯಕ್ಷಗಾನ ಕಲೆ ಸಹಕಾರಿಯಾಗಿದೆ. ಕಾಲಮಿತಿ ಯಕ್ಷಗಾನ ಬಂದಿರುವುದರಿಂದ ಪ್ರೇಕ್ಷಕರಿಗೆ ಅನುಕೂಲವಾಗಿದೆ ಎಂದರು.

ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಮಾತನಾಡಿ, ಕಲೆ ಮನೋರಂಜನೆಯೊಂದಿಗೆ ಸಾಮಾಜಿಕ ಮೌಲ್ಯಗಳನ್ನು ತಿಳಿಸುತ್ತದೆ. ಜನಸಾಮಾನ್ಯರು ಇರುವಲ್ಲಿಗೆ ಇಂತಹ ಯಕ್ಷಗಾನ ಕಾರ್ಯಕ್ರಮ ಹೋಗಿ ಪ್ರದರ್ಶನ ಆಗುತ್ತಿರುವುದು ಉತ್ತಮ ಯೋಜನೆ. ಕಳೆದು ಎಂಟು ವರ್ಷಗಳಿಂದ ಯಕ್ಷಗಾನ ಸಪ್ತಾಹವನ್ನು ಮೆಲ್ಕಾರ್‌ನಲ್ಲಿ ಮಾಡುತ್ತಿರುವ ಸಮಿತಿಯ ಸಾಧನೆ ಅಭಿನಂದನೀಯ ಎಂದು ತಿಳಿಸಿದರು.

ಯಕ್ಷಗಾನ ಸಪ್ತಾಹ ಸಮಿತಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್‌ ಪ್ರಸ್ತಾವನೆಗೈದು, ಸಹಕರಿಸಿದ ಸಂಘ-ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು. ಉಪಾಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಕೃಷ್ಣ ಶರ್ಮ ವಂದಿಸಿದರು. ಕಲಾವಿದ ಮಂಜು ವಿಟ್ಲ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next