ಮುಂಬಯಿ: ಮೀರಾರೋಡ್ ಪೂರ್ವದ ಪಲಿಮಾರು ಮಠದ ಶಾಖೆಯ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಮುಂಬಯಿ ಪ್ರವಾಸದಲ್ಲಿರುವ ಸಿರಿಕಲಾ ಮೇಳ ಬೆಂಗಳೂರು ಇದರ ಕಲಾವಿದರುಗಳಿಂದ ಲಶ-ಕುಶ ಯಕ್ಷಗಾನ ಬಯಲಾಟವು ಡಿ. 23 ರಂದು ಜರಗಿತು.
ಯಕ್ಷಗಾನ ಕಲಾಪೋಷಕ ಸಂಘಟಕ ಗುಣಕಾಂತ್ ಕರ್ಜೆ ಮತ್ತು ರಾಜೇಶ್ ಶೆಟ್ಟಿ ಕಾಪು ಅವರ ನೇತೃತ್ವದಲ್ಲಿ ಹಾಗೂ ಅತಿಥಿ-ಗಣ್ಯರ ಸಮ್ಮುಖದಲ್ಲಿ ಕಲಾವಿದರನ್ನು ಸ್ವಾಗತಿಸಿ ಗೌರವಿಸಲಾಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಸುರೇಶ್ ಶೆಟ್ಟಿ, ಮೃದಂಗದಲ್ಲಿ ನರಸಿಂಹ ಹೆಗಡೆ, ಚೆಂಡೆಯಲ್ಲಿ ರಾಮನ್ ಹೆಗಡೆ, ವೇಷಧಾರಿಗಳಾಗಿ ಅವಿನಾಶ್ ಶೆಟ್ಟಿ, ಕಿರಣ್ ಪೈ, ಅರ್ಪಿತಾ ಹೆಗಡೆ, ನಾಗಶ್ರೀ ಗೀಜಗಾರ, ಭುವನಾ ಕಾರಂತ್ ಅವರು ಸಹಕರಿಸಿದರು.
ಮೇಳದ ಪ್ರಮುಖರಾದ ಸುರೇಶ್ ಹೆಗ್ಡೆ ಮತ್ತು ಟಿ. ಎಸ್. ಮಹಾಬಲೇಶ್ವರ ಅವರು ದ್ವಿತೀಯ ಯಕ್ಷಗಾನ ಪ್ರದರ್ಶನಕ್ಕೆ ಸಹಕರಿಸಿದ ಗುಣಕಾಂತ ಶೆಟ್ಟಿ ಕರ್ಜೆ, ರಾಜೇಶ್ ಶೆಟ್ಟಿ ಕಾಪು, ಗುರುರಾಜ ಉಪಾಧ್ಯಾಯ, ಸದಾಶಿವ ವಾಲ್ಪಾಡಿ ಮತ್ತಿತರನ್ನು ಗೌರವಿಸಿದರು. ವಿಜಯ ಶೆಟ್ಟಿ ಮೂಡುಬೆಳ್ಳೆ ಅವರು ಕಾರ್ಯಕ್ರಮ ನಿರ್ವಹಿಸಿದರು.
ಅಪಾರ ಸಂಖ್ಯೆಯಲ್ಲಿ ಯಕ್ಷಗಾನ ಕಲಾಭಿಮಾನಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.