Advertisement
ಎಂದಿಗೂ ಹಾಸ್ಯದಲ್ಲಿ ಯಕ್ಷ ಪರಂಪರೆಯನ್ನು ಮೀರಿದವರಲ್ಲ. ಹಾಗಂತ ಅದೇ ಹಿಂದಿನ ಹಳೆಯ ಹಾಸ್ಯವನ್ನೇ ನೀಡುತ್ತಿದ್ದವರೂ ಅಲ್ಲ. ಈಗಿನ ಸಮುದಾಯಕ್ಕೂ ಹಿತವಾಗುವ ಹಾಸ್ಯವನ್ನು ತಲುಪಿಸುತ್ತಿದ್ದು, ಹೀಗಾಗಿ ಜಯರಾಮಣ್ಣರ ಹಾಸ್ಯವನ್ನು ಪ್ರೇಕ್ಷಕರು ಯಾವತ್ತೂ ಸ್ವೀಕರಿಸುತ್ತಿದ್ದರು. ಅವರ ಹಾಸ್ಯದಲ್ಲಿ ಸಮಾಜಕ್ಕೆ ಉತ್ತಮ ಸಂದೇಶವೂ ಇತ್ತು ಎಂದೂ ರಂಗದಲ್ಲಿ ರಾಜಕೀಯ ಮಾತನಾಡಿದವರಲ್ಲ.
ಪ್ರತಿಸ್ಪಂದನೆ, ಪ್ರತ್ಯುತ್ಪನ್ನಮತಿ ಇದ್ದ ಹಾಸ್ಯ ಕಲಾವಿದರಾಗಿದ್ದು, ಅಪಾರ ಅಭಿಮಾನಿ ವರ್ಗವೇ ಅವರ ದೊಡ್ಡ ಸಂಪಾದನೆಯಾಗಿತ್ತು. ಮಿಜಾರು ಅಣ್ಣಪ್ಪ, ಪುಳಿಂಚದವರ ಸಮಯದಲ್ಲೇ ಹಾಸ್ಯದಲ್ಲಿ ಹೆಸರು ಮಾಡಿದ್ದ ಜಯರಾಮಣ್ಣ, ಆ ಬಳಿಕ ತೆಂಕುತಿಟ್ಟಿನ ಹಾಸ್ಯ ಕಲಾವಿದರಲ್ಲಿ ಅಗ್ರಮಾನ್ಯರಾಗಿ ಗುರುತಿಸಿಕೊಂಡಿದ್ದರು. ಅತ್ಯುತ್ತಮ ಲಯ ಜ್ಞಾನದ ಹಾಸ್ಯ ಕಲಾವಿದರಾಗಿದ್ದ ಅವರು ನಾಟ್ಯಕ್ಕೆ ವಿಶೇಷ ಪ್ರಾಶಸ್ತ್ಯ ಕೊಡದೇ ಇದ್ದರೂ ತನ್ನ ಮಾತಿನ ಶೈಲಿಯ ಮೂಲಕ ಕಲಾಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿದ್ದರು.
Related Articles
Advertisement
ಆರೋಗ್ಯ ತೊಂದರೆ ಪರಿಣಾಮ ಅಭಿನಯದಲ್ಲಿ ಬದಲಾವಣೆ:ವೇಷಭೂಷಣ ಸಾಮಾನ್ಯವಾಗಿದ್ದರೂ, ಲೌಕಿಕ ಜೀವನದಲ್ಲಿ ವಸ್ತ್ರ ಸಂಹಿತೆಗೆ ವಿಶೇಷ ಮಹತ್ವ ನೀಡುತ್ತಿದ್ದರು. ಯಕ್ಷಗಾನಕ್ಕೆ ಬರುವಾಗ ಅವರು ಉಡುಗೆ ತೊಡುಗೆಯೇ ಅವರಿಗೆ ಹೊಸ ಘನತೆ ತರಿಸುತ್ತಿತ್ತು. ಅದನ್ನು ನೋಡುವುದೇ ವಿಶೇಷವಾಗಿತ್ತು. ಆರೋಗ್ಯ ತೊಂದರೆಯ ಪರಿಣಾಮ ಕಳೆದ 2-3 ವರ್ಷಗಳಲ್ಲಿ ಅವರ ಅಭಿನಯದಲ್ಲಿ ಸಾಕಷ್ಟು ಬದಲಾವಣೆಗಳಾಗಿತ್ತು. ಅವರ ಹೃದಯದ ಸಮಸ್ಯೆ ಕುರಿತು ವೈದ್ಯರು ಕೂಡ ಸಲಹೆ ನೀಡಿದ್ದರು. ಕಳೆದ ವರ್ಷ ತಿರುಗಾಟದ ಸಂದರ್ಭ ಆರೋಗ್ಯ ಸಮಸ್ಯೆಯಿಂದ ಅವರ ವೇಷ ಬಾಕಿಯಾದ ಘಟನೆಗಳು ಸಾಕಷ್ಟಿದ್ದು, ಹೀಗಾಗಿ ಅವರಿಗೆ ಮೇಳದಿಂದ ನಿವೃತ್ತಿಯನ್ನೂ ನೀಡಲಾಗಿತ್ತು.