Advertisement
ಫರಂಗಿಪೇಟೆ ರೊಟ್ಟಿಗುಡ್ಡೆ ನಿವಾಸಿ ಆದಂ (63) ಮೃತಪಟ್ಟ ವ್ಯಕ್ತಿ. ಮಂಗಳೂರಿನಿಂದ ಮುಡಿಪುವಿಗೆ ಚಲಿಸುತ್ತಿದ್ದ ಕೆಎಸ್ಆರ್ ಟಿಸಿ ನಗರ ಸಾರಿಗೆ ಅಡಂಕುದ್ರು ಪ್ರದೇಶದಲ್ಲಿ ಹಾಳಾಗಿ ನಿಂತಿತು. ಈ ವೇಳೆ ಇತರ ಪ್ರಯಾಣಿಕರ ಜತೆ ಬಸ್ನಿಂದ ಇಳಿದ ಆದಂ ಅವರು, ಕೆಳಗಿಳಿದು ಮುಂದೆ ನಿಂತಿದ್ದ ಖಾಸಗಿ ಬಸ್ ಹತ್ತಲು ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಟೆಂಪೋ ಢಿಕ್ಕಿಯಾಗಿದೆ.
ಚಾಲಕನ ನಿಯಂತ್ರಣ ಕಳೆದುಕೊಂಡು ಟೆಂಪೋ ಎಡಕ್ಕೆ ತಿರುಗಿದ್ದು ಹೆದ್ದಾರಿ ಬದಿಯ ಬೇಕರಿ ಮುಂಭಾಗದಲ್ಲಿ ನಿಂತಿದ್ದ ಎಲೆಕ್ಟ್ರಿಕ್ ಕಾರೊಂದಕ್ಕೆ ಮೊದಲು ಢಿಕ್ಕಿ ಹೊಡೆದು ಬಳಿಕ ಆದಂ ಅವರ ಮೇಲೆ ಹರಿದಿದೆ. ಬಳಿಕ ಮುಂದೆ ಸಾಗಿದ ಟೆಂಪೋ ಬೇಕರಿ ಅಂಗಡಿಯ ಬೃಹತ್ ನಾಮಫಲಕದ ಕಮಾನಿಗೂ ಗುದ್ದಿ ಗೂಡಂಗಡಿಯೊಂದಕ್ಕೆ ಢಿಕ್ಕಿ ಹೊಡೆದು ಕಂದಕಕ್ಕೆ ಬಿದ್ದಿದೆ. ಘಟನೆಯ ಬಳಿಕ ಟೆಂಪೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರು
ಅಂಗಡಿಗೆ ಟೆಂಪೋ ಢಿಕ್ಕಿ ಹೊಡೆಯವ ಮೊದಲು ರಸ್ತೆ ಬದಿಯಲ್ಲಿ ನಿಂತಿದ್ದ ಇಲೆಕ್ಟ್ರಿಕ್ ಕಾರಿನ ಅಂಚಿಗೆ ತಾಗಿಕೊಂಡು ತೆರಳಿದೆ. ಆ ಕಾರಿನಲ್ಲಿ ಮಕ್ಕಳು ಸೇರಿ ಆರು ಜನರ ಕೂರಿಸಿದ್ದ ಚಾಲಕ ರಸ್ತೆ ಸಮೀಪದ ಬೇಕರಿಗೆ ತಿಂಡಿ ಖರೀದಿಗಾಗಿ ತೆರಳಿದ್ದರು. ಅದೃಷ್ಟವಶಾತ್ ಘಟನೆಯಿಂದ ಕಾರಿನಲ್ಲಿದ್ದವರು ಕೂದಲೆಳೆಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.