Advertisement

ವಿಶ್ವಶಾಂತಿ ಸಂದೇಶ ಸಾರಿದ ಯಕ್ಷಗಾನ ರೂಪಕ

04:48 PM Nov 18, 2017 | |

ಬೆಳ್ತಂಗಡಿ: ಪುಟ್ಟ ಹೆಜ್ಜೆಗಳಲ್ಲಿ ಗೆಜ್ಜೆ ನಾದ. ಮುಗ್ಧ ಮುಖದಲ್ಲಿ ದಶಾವತಾರದ ಭಾವ. ಮದ್ದಳೆ, ಚಂಡೆ ತಾಳಕ್ಕೆ ಬಾಲ ಕೃಷ್ಣನಿಂದ ವಿಶ್ವಶಾಂತಿಯ ಸಂದೇಶ. ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮಸ್ಥಾಪನೆಯ ಅಭಯ.

Advertisement

ಈ ದೃಶ್ಯಾವಳಿ ಕಂಡುಬಂದಿದ್ದು ಧರ್ಮಸ್ಥಳದ ಕಾರ್ತಿಕ ಮಾಸದ ದೀಪೋತ್ಸವದ ಕಾರ್ಯಕ್ರಮದ ಅಂಗವಾಗಿ ಬುಧವಾರ ನಡೆದ ಲಲಿತಕಲಾ ಉತ್ಸವದಲ್ಲಿ. ಬಾಲಪ್ರತಿಭೆ ತುಳಸಿ ಹೆಗಡೆ ಪ್ರಸ್ತುತಪಡಿಸಿದ ವಿಶ್ವಶಾಂತಿ ಯಕ್ಷಗಾನ ರೂಪಕದಲ್ಲಿ.

ವಿಷ್ಣುವಿನ ದಶಾವತಾರ ಅನಾವರಣ
ತುಳಸಿ ತಮ್ಮ ಮೂರನೇ ವಯಸ್ಸಿನಿಂದಲೇ ಯಕ್ಷಗಾನದ ಅಭಿರುಚಿ ಬೆಳೆಸಿಕೊಂಡರು. ತಮ್ಮ 8 ನೇ ವರ್ಷದಲ್ಲಿ ತುಳಸಿ ಹೆಗಡೆ ನೀಡಿದ ಈ ನೃತ್ಯ ರೂಪಕವಿಷ್ಣುವಿನ ದಶಾವತಾರಗಳನ್ನು ಅನಾವರಣಗೊಳಿಸಿತು. ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಕಂಕಣ ಕಟ್ಟಿದ ಶ್ರೀರಾಮ ಕೃಷ್ಣರ ಧರ್ಮದ ನಡೆಗಳ ಮಹತ್ವವು ಕಲಾಭಿಮಾನಿಗಳ ಮನಮುಟ್ಟಿತು.

ಪುಟ್ಟ ಬಾಲೆಯ ಈ ರೂಪಕ ಲಕ್ಷದೀಪೋತ್ಸವದಲ್ಲಿ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಸಂಗತಿಗಳನ್ನು ತಡೆದು, ನೆಮ್ಮದಿಯ ಜೀವನದ ಅಭಿಲಾಷೆಯನ್ನು ಸಾಕಾರಗೊಳಿಸ ಬಹುದೆಂಬ ಆಶಯ ವ್ಯಕ್ತಪಡಿಸಿತು. ಸುಮಾರು 100ಕ್ಕೂ ಹೆಚ್ಚು ಕಾರ್ಯಕ್ರಮವನ್ನು ನೀಡಿದ ತುಳಸಿ ವಿಶ್ವಶಾಂತಿ ಯಕ್ಷಗಾನ ರೂಪಕವನ್ನು ಪ್ರದರ್ಶಿಸಿದ ಮೊದಲ ಬಾಲ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಳಗಿ ಕೇಶವ ಹೆಗಡೆ ಅವರ ಕಂಠದಲ್ಲಿ ಶ್ರೀಕೃಷ್ಣನ ಲೀಲೆಗಳು ಅದ್ಭುತವಾಗಿ ಮೂಡಿಬಂದವು. ಶಂಕರ ಭಾಗವತರು ಮದ್ದಳೆ ಹಾಗೂ ವಿಗ್ನೇಶ್ವರ ಕೆಸರಕೊಪ್ಪ ಛಂಡೆ ಸಾಥ್‌ ನೀಡಿದರು.

ವಿಶ್ವ ಶಾಂತಿಯ ಅಗತ್ಯತೆ ಪ್ರತಿಪಾದನೆ
ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ತಡೆಯ ಬೇಕಿದೆ. ಮನುಕುಲಕ್ಕೆ ಶಾಂತಿಯುತ ನೆಮ್ಮದಿಯ ಜೀವನ ನೀಡಬೇಕು. ಅಧರ್ಮವನ್ನು ಮೆಟ್ಟಿ ವಿಶ್ವದಲ್ಲಿ ಧರ್ಮ ಸ್ಥಾಪನೆಯಾಗಬೇಕಿದೆ. ಇಂಥ ಸಂದರ್ಭದಲ್ಲಿ ಪ್ರದರ್ಶಿತವಾದ ತುಳಸಿ ಹೆಗಡೆ ಯಕ್ಷಗಾನ ವಿಶ್ವಶಾಂತಿಯ ಅಗತ್ಯತೆಯನ್ನು ಪ್ರತಿಪಾದಿಸಿತು. ಕಾಲ ಬದಲಾದಂತೆ ಸಕಲ ಜೀವಚರಗಳ ಜೀವನವೂ ಬದಲಾಗುತ್ತದೆ. ಪ್ರಕೃತಿ ಸ್ವಾರ್ಥದ ಭಾವದಲ್ಲಿ ನಶಿಸುವ ಸ್ಥಿತಿ ತಲುಪುತ್ತದೆ. ಸಾಮಾಜಿಕ ಅಭದ್ರತೆ, ಕೊಲೆ, ಸುಲಿಗೆ, ಪ್ರಕೃತಿ ವಿಕೋಪಗಳು ತಲೆದೂರುತ್ತಿವೆ. ವಿಶ್ವದಲ್ಲಿ ಅಶಾಂತಿ ಮನೆಮಾಡಿದೆ. ಈ ಸಂದರ್ಭದಲ್ಲಿ, ತುಳಸಿಯವರ ವಿಶ್ವಶಾಂತಿ ಯಕ್ಷಗಾನ ರೂಪಕ ಶ್ರೀಕೃಷ್ಣ ತಾನಿದ್ದೇನೆ ಎಂಬ ಅಭಯ ನೀಡುವಂತೆ ಪ್ರಕಟಗೊಂಡಿತು.

Advertisement

ಭಾಗ್ಯಶ್ರೀ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next