Advertisement
ಸ್ವಾತಂತ್ರ್ಯ ಪೂರ್ವದಲ್ಲಿ ನಾನು ಯಕ್ಷರಂಗವನ್ನು ಪ್ರವೇಶಿಸಿದವನು . ಅಂದೆಲ್ಲಾ ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟರೆ ದಾರಿ ತಪ್ಪುತ್ತಾನೆ ಎನ್ನುವ ಭಾವನೆ ಇತ್ತು. ಯಕ್ಷಗಾನದ ಕುರಿತಾಗಿಯೂ ಕೆಲ ವರ್ಗದ ಜನರಲ್ಲಿ ತಾತ್ಸಾರವಿತ್ತಾದರೂ ಅಂದು ಆರಾಧನಾ ಕಲೆಯಾಗಿ ಯಕ್ಷಗಾನ ಇದ್ದ ಕಾರಣ ಜನರು ಅದನ್ನು ಒಪ್ಪಿಕೊಂಡಿದ್ದರು. ಇಂದು ಆರಾಧನೆಯೊಂದಿಗೆ ವಾಣಿಜ್ಯ ಉದ್ದೇಶಕ್ಕೆ ಕಲೆ ಬಳಕೆಯಾಗುತ್ತಿರುವುದು ವಿಪರೀತ ಎನಿಸುವಂತಹ ಬದಲಾವಣೆಗೆ ತಿರುಗಿದೆ. ಇದರಿಂದ ಕಲೆಯ ಮೂಲ ಆಶಯಕ್ಕೆ ಧಕ್ಕೆ ಅಲ್ಲವೇ ಎಂದರು.
Related Articles
Advertisement
ತಿರುಗಾಟದುದ್ದಕ್ಕೂ ಕಲಾವಿದರು ನಡಿಗೆಯಲ್ಲೇ ತೆರಳುತ್ತಿದ್ದರು. ದಿನಕ್ಕೆ 5 ರಿಂದ 10 ಕಿ.ಮೀ ನಡಿಗೆ ಅನಿವಾರ್ಯವಾಗಿತ್ತು. ದಿನವಿಡೀ ದಣಿದು ರಾತ್ರಿ ಅಪಾರ ನಿರೀಕ್ಷೆ ಇರಿಸಿಕೊಂಡು ಬರುತ್ತಿದ್ದ ಪ್ರೇಕ್ಷಕರಿಗೆ ನಿರಾಸೆ ಮಾಡುತ್ತಿರಲಿಲ್ಲ. ಆಗಿನ ಕಾಲದಲ್ಲಿ ಪ್ರದರ್ಶನದಲ್ಲಿ ಕೊರತೆ ಕಂಡು ಬಂದರೆ ಪ್ರಶ್ನಿಸುವ ವ್ಯಕ್ತಿಗಳಿದ್ದರು. ಅದು ಹಾಗಾಗ ಬಾರದಿತ್ತು, ನಿಮ್ಮ ಪಾತ್ರ ಚಿತ್ರಣ ಸರಿಯಾಗಲಿಲ್ಲ ಎಂದು ನೇರವಾಗಿ ಹೇಳುತ್ತಿದ್ದರು. ಕಲಾವಿದರು ವಿಮರ್ಶಕರನ್ನು ಒಪ್ಪಿ ಬದಲಾವಣೆ ಮಾಡಿಕೊಳ್ಳುತ್ತಿದ್ದರು. ಕಲಾವಿದರಿಗೆ ಪ್ರೇಕ್ಷಕರ ಭಯ ಇತ್ತು. ಕಲೆಯ ಮೌಲ್ಯ ತಿಳಿದಿತ್ತು. ಆದರೆ ಈಗ ದೇವರು ಬಂದು ಹೇಳಿದರೂ ನನ್ನ ದಾರಿ ನನಗೆ ಎನ್ನುವ ಪರಿಸ್ಥಿತಿ ಯಕ್ಷಗಾನದಲ್ಲಿ ಬಂದಿದೆ ಎಂದು ಹೇಳಿ ಭಾವುಕರಾದರು.
ಪ್ರೇಕ್ಷಕರು ಪ್ರದರ್ಶನ ಮತ್ತು ಕಲಾವಿದನ ಏಳಿಗೆಗೆ ಕಾರಣವಾಗುತ್ತಾರೆ. ಕಲಾವಿದನಾದನಿಗೆ ಕಲೆಯ ಮೇಲೆ ಮತ್ತು ಪ್ರೇಕ್ಷಕರ ಕುರಿತು ಗೌರವ ಇರಲೇ ಬೇಕು, ಅದಿಲ್ಲವಾದಲ್ಲಿ ಕಲಾವಿದನಲ್ಲಿರುವ ಕಲೆಯ ಬೆಲೆ ಶೂನ್ಯ ಎಂದರು.
ಮುಂದುವರಿಯುವುದು..