Advertisement
ದೊಂದಿ ಬೆಳಕಿನ ಯಕ್ಷಗಾನ ಯಾವುದೇ ಬಗೆಯ ವಿದ್ಯುತ್ ಬೆಳಕಿನ ವ್ಯವಸ್ಥೆಗಳಿಲ್ಲದೆ ಸಂಪೂರ್ಣ ದೊಂದಿ ಬೆಳಕಿನಲ್ಲೇ ನಡೆಯುವ ಯಕ್ಷಗಾನದ ಪ್ರಾಕಾರವಾಗಿದೆ. ಕೋಟದಲ್ಲಿ ನಡೆದ ಈ ವಿಶೇಷ ಯಕ್ಷಗಾನಕ್ಕೆ ದೊಂದಿ ಬೆಳಕನ್ನು ಕೋಟದ ರಾಮಚಂದ್ರ ಆಚಾರ್ಯ ಅವರು ಅಚ್ಚಕಟ್ಟಾಗಿ ಒದಗಿಸಿದ್ದಾರೆ. ಸುಮಾರು 25ಕ್ಕೂ ಹೆಚ್ಚು ಮಂಡಿ ಕಲಾವಿದರು ಯಕ್ಷಗಾನಕ್ಕಾಗಿ ಬಣ್ಣ ಹಚ್ಚಿದ್ದಾರೆ. ಚಂಡೆ ವಾದಕ ಮಾ| ಸುದೀಪ್ ಅವರ ಚೆಂಡೆ ವಾದನ ದೊಂದಿ ಬೆಳಕಿನ ಯಕ್ಷಗಾನಕ್ಕೆ ಮತ್ತಷ್ಟು ಮೆರಗು ನೀಡಿದ್ದು, ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.
ಮಕ್ಕಳಿಗೆ ಹೊಸತನ ಕಲಿಸಬೇಕು ಎನ್ನುವ ಮೂಲ ಉದ್ದೇಶದಿಂದ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಸಬೇಕು ಎನ್ನುವ ಆಶಯವಿದೆ.
- ಗಣೇಶ್ ವಿ., ಕೊರಗ ಮುಖಂಡ ಯಕ್ಷಗಾನದ ಮೂಲ ಸ್ವರೂಪ ಮತ್ತೆ ನೆನಪು ಆಧುನಿಕತೆಯ ನಡುವೆ ಮರೆಯಾಗುತ್ತಿರುವ ಸಾಂಪ್ರದಾಯಿಕ ಶೈಲಿ ಯಕ್ಷಗಾನದ ಮೂಲ ಸ್ವರೂಪವನ್ನು ಮತ್ತೆ ನೆನಪಿಸಬೇಕು ಎನ್ನುವ ನಿಟ್ಟಿನಿಂದ ಎಲ್ಲರ ಸಹಕಾರದೊಂದಿಗೆ ಮೊದಲ ಬಾರಿಗೆ ಯಾವುದೇ ವಿದ್ಯುತ್ ಬೆಳಕನ್ನು ಬಳಸದೆ ಕೇವಲ ದೊಂದಿ ಬೆಳಕನ್ನು ಸೃಷ್ಟಿಸಿ ಬಯಲು ಯಕ್ಷಗಾನ ಪ್ರದರ್ಶನ ನಡೆಸಿದ್ದೇವೆ. ಕಾರ್ಯಕ್ರಮದ ಯಶಸ್ಸಿಗೆ ಹಿರಿಯ ಯಕ್ಷಗಾನ ಕಲಾವಿದರ ಅನಿಸಿಕೆ, ಅಭಿಪ್ರಾಯವೇ ಕಾರಣ.
-ಪ್ರಶಾಂತ್ ಮಲ್ಯಾಡಿ ,
ಕಾರ್ಯಕ್ರಮ ಸಂಯೋಜಕರು